2000 ಮುಖಬೆಲೆಯ ನೋಟುಗಳನ್ನು ಹಿಂದೆ ಪಡೆದ ಆರ್‌ಬಿಐ. ಕಾರಣ ಏನು ಗೊತ್ತೆ? ಸಂಪೂರ್ಣ ಡೀಟೇಲ್ಸ್ ನಿಮ್ಮ ಮುಂದೆ.

ಮಂದಾರ ನ್ಯೂಸ್, ನವದೆಹಲಿ: ಎರಡು ಸಾವಿರ ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. ಆದರೆ, ಈ ಕರೆನ್ಸಿ ನೋಟುಗಳು ಕಾನೂನಾತ್ಮಕವಾಗಿ ಸಿಂಧುವಾಗಿ ಮುಂದುವರಿಯಲಿವೆ. ಆರ್​ಬಿಐ ಶುಕ್ರವಾರ ಈ ಹೇಳಿಕೆ ನೀಡಿದೆ. 2,000 ರೂ ನೋಟು ಹೊಂದಿರುವವರು ಅದನ್ನು ಮರಳಿಸಲು ಸಮಯಾವಕಾಶ ಕೊಡಲಾಗುತ್ತದೆ. ಆರ್​ಬಿಐ ನೀಡಿರುವ ಮಾಹಿತಿ ಪ್ರಕಾರ 2023 ಸೆಪ್ಟಂಬರ್ 30ರೊಳಗೆ 2,000 ಮುಖಬೆಲೆಯ ನೋಟುಗಳನ್ನು ವಾಪಸ್ ಕೊಟ್ಟು ವಿನಿಮಯ ಮಾಡಿಕೊಳ್ಳಬಹುದು.

2,000 ರೂ ಮುಖಬೆಲೆಯ ನೋಟು ಹಿಂಪಡೆಯಲು ಏನು ಕಾರಣ?

ಈಗ ಚಲಾವಣೆಯಲ್ಲಿರುವ 2,000ರೂ ಮುಖಬೆಲೆಯ ನೋಟುಗಳಲ್ಲಿ ಶೇ. 89ರಷ್ಟು ನೋಟುಗಳನ್ನು 2017ರ ಮಾರ್ಚ್​ಗೆ ಮುಂಚೆ ಮುದ್ರಿಸಿ ಬಿಡುಗಡೆ ಮಾಡಿದಂಥವು. ಇವುಗಳ ಕಾಲಾವಧಿ 4-5 ವರ್ಷ ಮಾತ್ರ. ಹೀಗಾಗಿ, ಈ ನೋಟುಗಳನ್ನು ಹಿಂಪಡೆಯಲಾಗುತ್ತಿದೆ.


Post a Comment

0 Comments