ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ನಾವು ಕರೆಂಟ್ ಬಿಲ್ ಕಟ್ಟಲ್ಲ,ಮೀಟರ್ ರೀಡರಿಗೆ ಅವಾಜ್ ಹಾಕಿದ ಗ್ರಾಮಸ್ಥರು..!



ಮಂದಾರ ನ್ಯೂಸ್,ಚಿತ್ರದುರ್ಗ:- ವಿಧಾನಸಭಾ  ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ  ನಾವು ಈ ಬಾರಿ ಅಧಿಕಾರಕ್ಕೆ ಬಂದರೆ
 ಐದು ಜನಪರ  ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದು ಪ್ರಣಾಳಿಕೆ ಮೂಲಕ   ಭರವಸೆ ನೀಡಿದ್ದರು.
ಅದರಲ್ಲಿ  ಪ್ರಮುಖವಾಗಿರುವುದು,
ಪ್ರತಿ ಮನೆಗೆ 200 ಯುನಿಟ್ ಉಚಿತ  ವಿದ್ಯುತ್ ನೀಡುತ್ತೇವೆ ಎಂದು  ಇದೀಗ ಕಾಂಗ್ರೆಸ್​
 ಸರ್ಕಾರ ಅಧಿಕಾರಕ್ಕೆ ಬಂದಿದೆ ನಾವ್​​ ಕರೆಂಟ್ ಬಿಲ್​​ ಕಟ್ಟಲ್ಲ ಎಂದು ವಿದ್ಯುತ್​​ ಬಿಲ್​​ ಪಾವತಿಗೆ ಜನ ನಿರಾಕರಿಸಿದ್ಧಾರೆ. ಈ ಘಟನೆ ಚಿತ್ರದುರ್ಗ ತಾಲೂಕಿನ ಜಾಲಿಕಟ್ಟೆ ಗ್ರಾಮದಲ್ಲಿ ನಡೆದಿದೆ.
ಗ್ರಾಮಸ್ಥರು ವಿದ್ಯುತ್​ ಉಚಿತ ಎಂದು ಕಾಂಗ್ರೆಸ್​​ ಮೊದಲೇ ಘೋಷಿಸಿದೆ ಎಂದು ಬೆಸ್ಕಾಂ ಮೀಟರ್​ ರೀಡರ್​ಗೆ ಅವಾಜ್​ ಹಾಕಿದ್ದು, ಮೀಟರ್​ ರೀಡರ್​ ಆದೇಶ ಬರೋವರೆಗೂ ಬಿಲ್​ ಕಟ್ಟಬೇಕು ಎಂದಿದ್ಧಾರೆ.
ಜನ ಆದೇಶದ ಬಗ್ಗೆ ಕಾಂಗ್ರೆಸ್​​ನವರಿಗೆ ಕೇಳಿ ಎಂದಿದ್ದಾರೆ. ಚಿತ್ರದುರ್ಗ ತಾಲೂಕಿನ ಜಾಲಿಕಟ್ಟೆ ಗ್ರಾಮದಲ್ಲಿ ಗಲಾಟೆ ನಡೆದಿದೆ.
ಕಾಂಗ್ರೆಸ್ ಗ್ಯಾರಂಟಿ ಕಾರ್ಡ್  ಮೂಲಕ ನೀಡಿರುವ ಉಚಿತ ಭರವಸೆಗಳನ್ನು  ತಕ್ಷಣದಿಂದ ಈಡೇರಿಸದಿದ್ದರೆ  ಜನ ಬೀದಿಗಿಳಿಯುವುದು ಗ್ಯಾರಂಟಿ.


ತೀರ್ಥಹಳ್ಳಿ ಮಿತ್ರ ಮಂಜು✍️*
9108594842

Post a Comment

0 Comments