ಮಟ್ಕಾ ನಿಯಂತ್ರಿಸುವಲ್ಲಿ ಆನಂದಪುರ ಪೊಲೀಸ್ ಇಲಾಖೆ ಸಂಪೂರ್ಣ ವಿಫಲ!?


ಮಂದಾರ ನ್ಯೂಸ್ ,ಸಾಗರ: ಇತ್ತೀಚಿಗೆ ಆನಂದಪುರ ಪೊಲೀಸ್ ಇಲಾಖೆಯನ್ನ ಪೋಲಿಸ್ ಠಾಣೆ ಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಇನ್ನು ಮುಂದೆ ಸಾಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುತ್ತಿದ್ದ ಅನಂದಪುರ ಹೋಬಳಿಯ ಎಲ್ಲಾ ಗ್ರಾಮಗಳು ಇನ್ನು ಮುಂದೆ ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುತ್ತದೆ.

ಈ ಇಂದಿನಿಂದಲೂ ಸಾಗರ ತಾಲೂಕಿನಾದ್ಯಂತ ಅಕ್ರಮ ಚಟುವಟಿಕೆಗಳು ಯಾರ ಭಯವಿಲ್ಲದೆ ರಾಜಾರೋಷವಾಗಿ ನಡೆಯುತ್ತಿದ್ದವು. ಇವುಗಳನ್ನ ನಿಯಂತ್ರಿಸಬೇಕಾದ ಪೊಲೀಸ ಇಲಾಖೆ ಸಂಪೂರ್ಣವಾಗಿ ವಿಫಲವಾಯಿತು.ಕಂಡರು, ಕಾಣದಂತೆ ಇಲಾಖೆಯ ಸಿಬ್ಬಂದಿಗಳು ನಡೆದುಕೊಳ್ಳುತ್ತಿದ್ದರು.
ಈಗ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಿಂದ ಬೇರ್ಪಟ್ಟ ಆನಂದಪುರ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಅಕ್ರಮ ಚಟುವಟಿಕೆಗಳು ಯಾರ ಭಯವಿಲ್ಲದೆ ರಾಜಾರೋಷವಾಗಿ ನಡೆಯುತ್ತಿವೆ. ಮಟ್ಕಾ ದಂದೆಯಂತೂ ಕೇಳಲೇಬೇಡಿ. ಠಾಣೆಯ ಸರಹದ್ದಿನ ಪ್ರತಿಗ್ರಾಮಗಳಲ್ಲೂ ಮಟ್ಕಾ ತಂದೆ ಹಾಡು ಹಗಲಿನಲ್ಲೇ ರಾಜಾ ರೋಷವಾಗಿ ನಡೆಯುತ್ತಿದೆ. ಇದನ್ನು ನಿಯಂತ್ರಿಸಬೇಕಾದ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಸಾರ್ವಜನಿಕರಿಂದ ಬಂದ ಮಾಹಿತಿಯಂತೆ ನಿನ್ನೆ ದಿನ ತ್ಯಾಗರ್ತಿ ಗ್ರಾಮದಲ್ಲಿ ಮಟ್ಕಾ ಬರೆಯುತ್ತಿದ್ದ ವ್ಯಕ್ತಿಯನ್ನು ಸಾರ್ವಜನಿಕರ ದೂರಿನ ಮೇಲೆ ದಾಳಿ ನಡೆಸಿದ ಆನಂದಪುರ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಮಟ್ಕಾ ದಂಧೆಯಲ್ಲಿ ತೊಡಗಿಕೊಂಡ ವ್ಯಕ್ತಿಯ ಮೇಲೆ ಯಾವುದೇ ದೂರನ್ನು ದಾಖಲಿಸಿಕೊಳ್ಳದೆ ಕೇವಲ ದಂಡ ಹಾಕಿ ಕಳುಹಿಸಿದ್ದಾರೆ ಎಂದು ಪೊಲೀಸ ಇಲಾಖೆಯವರ ಮೇಲೆ ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಈಗಾಗಲೇ ನೂತನ ಶಾಸಕರು ಈ ಹಿಂದೆ ಚುನಾವಣೆಯ ಸಂದರ್ಭದಲ್ಲಿ ತಮ್ಮ ಪ್ರತಿಸ್ಪರ್ಧಿಯ ವಿರುದ್ಧ ಅಕ್ರಮ ಚಟುವಟಿಕೆಗಳ ಬಗೆ ಪ್ರಬಲವಾದ ಧ್ವನಿಯನ್ನ ಎತ್ತಿದ್ದರು. ಅಕ್ರಮ ಚಟುವಟಿಕೆಗಳಿಂದಲೇ ಹಣವನ್ನ ಸಂಗ್ರಹಿಸುತ್ತಿದ್ದಾರೆ ಎಂಬ ಆರೋಪ ಮಾಡಿದ್ದರು. ಈಗ ಅವರೇ ಸಾಗರ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಜನರ ನೆಮ್ಮದಿಯನ್ನು ಬಯಸುವ ಶಾಸಕರು ಅಕ್ರಮ ಚಟುವಟಿಕೆಗಳನ್ನ ನಿಯಂತ್ರಿಸುವ ನಿಟ್ಟಿನಲ್ಲಿ ತಮ್ಮ ಜವಾಬ್ದಾರಿಯನ್ನ ನಿಭಾಯಿಸುತ್ತಾರ ಕಾದು ನೋಡಬೇಕಾಗಿದೆ.

ಅಕ್ರಮ ಚಟುವಟಿಕೆಗಳಿಗೆ ಬಲಿಯಾಗಿ ಅದೆಷ್ಟೋ ಕುಟುಂಬಗಳು ಬೀದಿ ಪಾಲಾಗಿದೆ. ಪ್ರತಿದಿನ ಕಣ್ಣೀರಿನಲ್ಲೆ ಕೈ ತೊಳೆಯುತ್ತಿವೆ. ದುಡಿಮೆಯ 90 ಭಾಗ ಈ ಅಕ್ರಮ ಚಟುವಟಿಕೆಗಳಿಗೆ ಮನೆಯ ಯಜಮಾನ ಖರ್ಚು ಮಾಡುತ್ತಿದ್ದು ಕುಟುಂಬದ ಸದಸ್ಯರು ಒಂದು ಹೊತ್ತಿನ ಊಟದಲ್ಲೇ ಕಾಲ ಕಳೆಯುತ್ತಿದ್ದಾರೆ. ಬಡ ಹಾಗೂ ಮಾಧ್ಯಮ ವರ್ಗದ ಕುಟುಂಬಗಳೇ ಹೆಚ್ಚಾಗಿ ಈ ಅಕ್ರಮ ಚಟುವಟಿಕೆಗಳಿಂದ ಬೀದಿ ಪಾಲಾಗಿದೆ.
ನೂತನ ಶಾಸಕರು ತಮ್ಮ ವಿಧಾನಸಭಾ ಕ್ಷೇತ್ರಾದ್ಯಂತ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವ ಮೂಲಕ ನೊಂದವರ ಕಣ್ಣೀರು ಒರೆಸಿ, ಅವರ ಬದುಕಿನಲ್ಲಿ ಹೊಸ ಬೆಳಕು ಮೂಡಿಸುವಂತಾಗಲಿ.

ಈಗಾಗಲೇ ಅಕ್ರಮ ಚಟುವಟಿಕೆಗಳಾದ ಕಲ್ಲು, ಮಣ್ಣು, ಮರಳು ,ಮಟ್ಕಾ , ಮಧ್ಯ, ಅಕ್ಕಿ, ಇವುಗಳು ತಾಲೂಕಿನಾದ್ಯಂತ ಯಾರ ಭಯವಿಲ್ಲದೆ ಸರ್ಕಾರದ ಕಣ್ಣಿಗೆ ಮಣ್ಣೆರಚಿ ಸಂಬಂಧಿಸಿದ ಇಲಾಖೆಯವರ ಮೂಗಿಗೆ ತುಪ್ಪ ಸವರಿ ರಾಜಾರೋಷವಾಗಿ ನಡೆಸುತ್ತಿದ್ದಾರೆ ಇದನ್ನು ನಿಯಂತ್ರಿಸುವುದು ನೂತನ ಶಾಸಕರ ಜವಾಬ್ದಾರಿಗಳಲ್ಲಿ ಒಂದಾಗಿದೆ.

Post a Comment

0 Comments