ಮತ್ತೆ ಹರಿಹರ ಅಭಿವೃದ್ಧಿಯಲ್ಲಿ 10 ವರ್ಷ ಹಿಂದೆ ಹೋಗದಿರಲಿ.
ಮಂದಾರ ನ್ಯೂಸ್, ಹರಿಹರ: ಹರಿ-ಹರ, ತುಂಗ-ಭದ್ರೆ ಎಂಥ ಅದ್ಭುತ ನಾಮಗಳು. ತುಂಗಾಭದ್ರಾ ನದಿಯ ದಡದ ಮೇಲೆ ಹೊಯ್ಸಳರ ಕಾಲದ ಪುರಾತನ ದೇವಾಲಯ ಹರಿಹರೇಶ್ವರ ದೇವಸ್ಥಾನವಿದೆ.
ಅದೇ ರೀತಿ ಹರಿಹರ ರಾಜಕೀಯ ಕ್ಷೇತ್ರದಲ್ಲಿ ಅತ್ಯಂತ ಗಮನ ಸೆಳೆತ ಕ್ಷೇತ್ರಗಳಲ್ಲಿ ಒಂದು. ಹರಿ-ಹರ, ತುಂಗೆ-ಭದ್ರೆ ಎರಡೆರಡು ಹೆಸರಿನಂತೆ ಕ್ಷೇತ್ರವು ಎರಡೆರಡು ಪಕ್ಷಗಳ ಆಡಳಿತಕ್ಕೆ ಒಳಪಡುತ್ತಿದೆ.
ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರುವ ಸರ್ಕಾರಗಳು ಒಂದಾದರೆ ಕ್ಷೇತ್ರದಲ್ಲಿ ಆಯ್ಕೆಯಾಗುವ ಜನಪ್ರತಿನಿಧಿಯೇ ಬೇರೆ ಪಕ್ಷದವರಾಗಿರುತ್ತಾರೆ. ಇಲ್ಲಿ ಆಯ್ಕೆಯಾದ ಜನಪ್ರತಿನಿಧಿ ಒಂದು ಪಕ್ಷದವರಾದರೆ ರಾಜ್ಯದಲ್ಲಿ ಆಳ್ವಿಕೆ ನಡೆಸುವ ಸರ್ಕಾರ ಇನ್ನೊಂದು ಪಕ್ಷದಾಗಿರುತ್ತದೆ. ಇದರಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಾ ಸಾಗುತ್ತದೆ.
ಈ ಹಿಂದೆ ಹರಿಹರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಶಾಸಕರಾಗಿ ಎಸ್ ರಾಮಪ್ಪನವರು ಆಯ್ಕೆಯಾಗಿರುತ್ತಾರೆ. ಆದರೆ ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ಹಾಗೂ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿರುತ್ತದೆ. ಇವರು ಶಾಸಕರಾದ ಸಂದರ್ಭದಲ್ಲಿ ಹರಿಹರ ಕ್ಷೇತ್ರ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಅನುದಾನ ನೀಡಿಲ್ಲ ವರ್ಗಾವಣೆ ವಿಷಯದಲ್ಲಿ ಮಾಜಿ ಶಾಸಕರು ಮೂಗು ತೋರುತ್ತಾರೆ ಎಂಬ ಆರೋಪವನ್ನು ಅಂದಿನ ಶಾಸಕ ಎಸ್ ರಾಮಪ್ಪನವರು ಪ್ರತಿ ಸಭೆ ಸಮಾರಂಭದಲ್ಲಿ ಮಾಡುತ್ತಿದ್ದರು ,ಇದು ಎಲ್ಲರಿಗೂ ಗೊತ್ತಿರುವ ವಿಚಾರ.
ಇಂದು ಹರಿಹರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದ ಬಿಪಿ ಹರೀಶ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಅಂದು ಬಿಜೆಪಿ ಸರ್ಕಾರ ಹರಿಹರ ಅಭಿವೃದ್ಧಿ ವಿಚಾರದಲ್ಲಿ ರಾಮಪ್ಪನವರ ಜೊತೆ ನಡೆದುಕೊಂಡ ರೀತಿಯಲ್ಲೇ ಇಂದು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಪಕ್ಷ ತೆರೆದುಕೊಂಡರೆ ಕ್ಷೇತ್ರದ ಅಭಿವೃದ್ಧಿ ಮತ್ತೆ 10 ವರ್ಷ ಹಿಂದೆ ಸರಿಯುತ್ತದೆ.
ಅಧಿಕಾರದಲ್ಲಿರುವ ಪಕ್ಷಗಳ ಜೊತೆ ಸಮರ್ಥವಾಗಿ ಹೋರಾಟ ನಡೆಸಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತರುವಂತಹ ಸಾಮರ್ಥ್ಯ ಇರುವಂತಹ ನಾಯಕ ಯಾರಾದರೂ ಇದ್ದರೆ ಅದು ಎಚ್ ಎಸ್ ಶಿವಶಂಕರ್. ಕ್ಷೇತ್ರದ ಮತದಾರ ಅವರ ಕೈಹಿಡಿಯಲಿಲ್ಲ.
ಈ ಹಿಂದೆ ಹೆಚ್ಚು ಶಿವಶಂಕರ್ ಹರಿಹರ ವಿಧಾನಸಭಾ ಕ್ಷೇತ್ರದ ಶಾಸಕರಾದಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು. ಆದರೆ ಶಿವಶಂಕರವರು ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಪಕ್ಷದ ಜೊತೆ ಸಮರ್ಥವಾಗಿ ಹೋರಾಟ ನಡೆಸಿದ ಫಲವಾಗಿ ಕ್ಷೇತ್ರಕ್ಕೆ ಸರಿಸುಮಾರು 400 ಕೋಟಿ ಹೆಚ್ಚು ಅನುದಾನ ತರಲು ಸಾಧ್ಯವಾಯಿತು. ಇದು ಸಮರ್ಥ ನಾಯಕಿನಂಡ ಮಾತ್ರ ಸಾಧ್ಯ ಎಂಬುದು ಸಾಬೀತಾಯಿತು.
ಎಚ್ಎಸ್ ಶಿವಶಂಕರವರ ಗೆಲುವಿಗೆ ಅಡ್ಡವಾಗಿದ್ದು ಕಾಂಗ್ರೆಸ್ ಪಕ್ಷದ ಗ್ಯಾರಂಟಿ, ಜೊತೆಗೆ ಒಂದು ಸಮುದಾಯದ ಮತಗಳು ಶಿವಶಂಕರವರ ಬೆನ್ನಿಗೆ ನಿಲ್ಲದಿರುವುದು. ಕಳೆದ ಚುನಾವಣೆಯಲ್ಲಿ ಶಿವಶಂಕರವರಿಗೆ ಸಹಕಾರ ನೀಡುತ್ತೇವೆ ಅವರ ಗೆಲುವಿಗೆ ಸಹಕರಿಸುತ್ತೇವೆ ಎಂದು ಹೇಳಿ ಕೊನೆ ಕ್ಷಣದಲ್ಲಿ ಅವರಿಗೆ ಮೋಸ ಮಾಡಿದರು ಎಂಬ ಆರೋಪ ಕೇಳಿ ಬಂದಿತ್ತು. ಈ ಬಾರಿಯೂ ಸಹ ಅದೇ ರೀತಿ ಮಾಡಿದ್ದಾರೆ ಎಂಬ ಆರೋಪ ಕ್ಷೇತ್ರದ ಮತದಾರರಿಂದ ಕೇಳಿ ಬರುತ್ತಿದೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ದ್ವಿತೀಯ ಸ್ಥಾನ ಪಡೆಯಲು ಪ್ರಮುಖ ಕಾರಣ ಒಂದು ಸಮುದಾಯದ ಮತಗಳು ಅವರ ಬೆಂಬಲಕ್ಕೆ ನಿಂತಿದ್ದು. ಮತ್ತೊಂದು ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳು ಮತದಾರರ ಮೇಲೆ ಪ್ರಭಾವ ಬೀರಿದ್ದು. ಇವುಗಳಿಗೆ ಮನಸ್ಸುತ ಮತದಾರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಬೆಂಬಲಕ್ಕೆ ನಿಂತರು. ಇದರಿಂದ ಮತಗಳು ವಿಭಜನೆಯಾಗಿ ಒಂದು ಸಮುದಾಯದ ಮತಗಳು ಬಿಜೆಪಿ ಅಭ್ಯರ್ಥಿಯ ಪರವಾಗಿ ನಿಂತ ಕಾರಣ ಬಿಪಿ ಹರೀಶ್ ಗೆಲುವು ಸಾಧಿಸಲು ಸುಲಭವಾಗಿತ್ತು.
ಮತದಾರರು ಅರ್ಥೈಸಿಕೊಳ್ಳಬೇಕಾಗಿತ್ತು ಕ್ಷೇತ್ರದ ಅಭಿವೃದ್ಧಿಗೆ ಯಾರು ಸಮರ್ಥರು ,ಯಾರಿಂದ ಅನುದಾನ ತರಲು ಸಾಧ್ಯ, ಯಾರು ನಮ್ಮಗಳ ಕಷ್ಟಕ್ಕೆ ಸ್ಪಂದಿಸುವರು, ಯಾರಿಂದ ಕ್ಷೇತ್ರದ ನೆಮ್ಮದಿ ಸಾಧ್ಯ, ಇಂದು ಅರ್ಥ ಮಾಡಿಕೊಂಡಿದ್ದರೆ ಚೆನ್ನಾಗಿತ್ತು.
0 Comments