ಸದನದಲ್ಲಿ ಕ್ಷೇತ್ರದ ರೈತರ ಧ್ವನಿಯಾಗಿ ಗಮನ ಸೆಳೆದ ಶಾಸಕ ಬಿ.ಪಿ ಹರೀಶ್.!



ಮಂದಾರ ನ್ಯೂಸ್ ,ಹರಿಹರ: ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ನೂತನ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೂರು ದಿನಗಳ ವಿಶೇಷ ಅಧಿವೇಶನವನ್ನು ಕರೆಯಲಾಯಿತು.

ಅಧಿವೇಶನದಲ್ಲಿ ನೂತನವಾಗಿ ಶಾಸಕರಾಗಿ ಆಯ್ಕೆಯಾದ 224 ಎಲ್ಲಾ ವಿಧಾನಸಭಾ ಕ್ಷೇತ್ರದ ಶಾಸಕರು ಪ್ರಮಾಣ ವಚನವನ್ನು ಸ್ವೀಕರಿಸಿದರು.

ವಿಶೇಷ ಅಧಿವೇಶನದಲ್ಲಿ ಕೆಲವು ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಸದನದಲ್ಲಿ ಮಾತನಾಡುವ ಮೂಲಕ ಗಮನವನ್ನು ಹೇಳಿದರು.

ಹರಿಹರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿ ಆಯ್ಕೆಯಾದ ಬಿಪಿ ಹರೀಶ್ ಅವರು ಕ್ಷೇತ್ರದ ರೈತರು ಅನುಭವಿಸುತ್ತಿರುವ ತೊಂದರೆಗಳು ಸಂಬಂಧಿಸಿ ದಂತೆ ಸದನದಲ್ಲಿ ರೈತರ ಧ್ವನಿಯಾಗಿ ಗಮನ ಸೆಳೆದರು.
ಕ್ಷೇತ್ರದ ರೈತರು ತಾವು ಬೆಳೆದಂತಹ ಬೆಳೆಗೆ ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿಲ್ಲ. ತುಂಗಾ ಹಾಗೂ ಭದ್ರಾ ನದಿಗಳಿಂದ ರೈತರಿಗೆ ಸಮರ್ಪಕವಾಗಿ ನೀರನ್ನು ಪೂರೈಕೆ ಮಾಡಬೇಕು. ಬೇಸಿಗೆ ಹಂಗಾಮಿನ ಸಂದರ್ಭದಲ್ಲಿ ರೈತರು ನೀರಿಗಾಗಿ ಪರದಾಡುತ್ತಿದ್ದಾರೆ ಭದ್ರಾ ನಲೆಯ ಮೂಲಕ ಹರಿಸುವ ನೀರು ಕೊನೆಯ ಭಾಗದ ರೈತರ ಜಮೀನುಗಳಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಕೊನೆಯ ಭಾಗದ ರೈತರಿಗೆ ನೀರು ತಲುಪಿಸುವ ನಿಟ್ಟಿನಲ್ಲಿ ನೀರನ್ನ ಹರಿಸಬೇಕು ಎಂದು ಹೇಳುವ ಮೂಲಕ ಸಿದ್ದರಾಮಯ್ಯನವರ  ನೇತೃತ್ವದ ಕಾಂಗ್ರೆಸ್ ಸರ್ಕಾರ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಶಾಸಕರು ತಮ್ಮ ತಂದೆಯವರು ಶಾಸಕರಾಗಿ ಸದನದ ಇತರ ಪಕ್ಷದ ನಾಯಕರ ಜೊತೆ ಅವರ ಒಡನಾಟವನ್ನ ನೆನಪು ಮಾಡಿಕೊಂಡರು.

ಮತ್ತೊಮ್ಮೆ ಬಿ.ಪಿ ಹರೀಶ್ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ತಮ್ಮ ಪ್ರಥಮ ಹಂತದಲ್ಲಿ ಸಿಕ್ಕ ಅವಕಾಶವನ್ನ ರೈತರ ಧ್ವನಿಯಾಗಿ ಮಾತನಾಡುವ ಮೂಲಕ ಕ್ಷೇತ್ರದ ಜನರಿಗೆ ಅಭಿವೃದ್ಧಿಯ ಸಂದೇಶವನ್ನು ಸಾರಿದ್ದಾರೆ.

Post a Comment

0 Comments