ಊರ ತುಂಬಾ ಹೆಂಡದಂಗಡಿ, ಜನರಿಗೆ ಕುಡಿಯಲು ನೀರಿಲ್ಲ: ಬೇಳೂರು ಗೋಪಾಲಕೃಷ್ಣ.



ಮಂದಾರ ನ್ಯೂಸ್, ಸಾಗರ: ಸಾಗರ ನಗರದ ತುಂಬೆಲ್ಲ ಹೆಂಡದ ಅಂಗಡಿಗಳು ತುಂಬಿದ್ದು ಜನರಿಗೆ ಕುಡಿಯಲು ನೀರಿಲ್ಲ ನಗರಸಭೆಯ ಅಧಿಕಾರಿಗಳು ಕೂಡಲೇ ಜನರಿಗೆ ಕುಡಿಯಲು ನೀರಿನ ವ್ಯವಸ್ಥೆಯನ್ನು ಒದಗಿಸುವಂತೆ ಸಾಗರ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಬೇಳೂರು ಗೋಪಾಲಕೃಷ್ಣ ನಗರಸಭೆಯ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಶಾಸಕರಾದ ನಂತರ ನಗರಸಭೆಗೆ ದಿಢೀರ್ ಭೇಟಿ ನೀಡಿದ ಬೇಳೂರು ಗೋಪಾಲಕೃಷ್ಣ ನಗರಸಭೆಯ ಅಧಿಕಾರಿಗಳನ್ನು ಒಳಗೊಂಡ ತುರ್ತು ಸಭೆಯನ್ನು ನಡೆಸಿದರು. ನಗರದ ಸ್ವಚ್ಛತೆ ,ಕುಡಿಯುವ ನೀರು, ಬೀದಿ ದೀಪಗಳ ನಿರ್ವಹಣೆ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳತ್ತ ನಗರಸಭೆಯ ಅಧಿಕಾರಿಗಳು ಕೂಡಲೇ ಗಮನ ಹರಿಸಬೇಕು ಎಂದು ಅಧಿಕಾರಿಗಳಿಗೆ ತಾಕಿತ್ತು ಮಾಡಿದರು.

ಕೆಲಸ ಮಾಡಲು ಇಷ್ಟವಿದ್ದರೆ ಕೆಲಸ ಮಾಡಿ, ಇಲ್ಲದಿದ್ದರೆ ವರ್ಗಾವಣೆ ಮಾಡಿಕೊಂಡು ಹೋಗಿ. ಜನಸಾಮಾನ್ಯರಿಗೆ ಅನುಕೂಲವಾಗುವ ರೀತಿಯಲ್ಲಿ ತಮ್ಮ ಜವಾಬ್ದಾರಿಯನ್ನ ನಿಭಾಯಿಸಿ, ಜನಸಾಮಾನ್ಯನೊಬ್ಬ ತನ್ನ ಕೆಲಸಕ್ಕಾಗಿ ನಗರಸಭೆಗೆ ಬಂದರೆ ಅವನೊಂದಿಗೆ ಸೌಜನ್ಯದಿಂದ ವರ್ತಿಸುವುದನ್ನು ಕಲಿಯಿರಿ. ಸರ್ಕಾರದ ಕೆಲಸ ದೇವರ ಕೆಲಸ ಇದು ಕೇವಲ ಗೋಡೆ ಬರಹವಾಗಬಾರದು ತಮ್ಮ ಕರ್ತವ್ಯ ನಿಷ್ಠೆಯಲ್ಲಿ ದೇವರನ್ನು ಕಾಣುವಂತಾಗಬೇಕು ಎಂದರು.

ನಗರಸಭೆಗೆ ಶಾಸಕರು ಭೇಟಿ ನೀಡಿದ ಸಂದರ್ಭದಲ್ಲಿ ನಗರಸಭೆಯ ನೌಕರರಲ್ಲಿ ಅಶಿಸ್ತು ಪ್ರದರ್ಶನವಾಯಿತು.ದನದ ದೊಡ್ಡಿಯಂತೆ ಶಾಸಕರ ಮುಂದೆ ನಿಂತಿದ್ದರು. ಅಸನದಲ್ಲಿ ಕುಳಿತು ಶಿಸ್ತನ್ನು ಪಾಲಿಸಬೇಕಾದ ನಗರಸಭೆಯ ನೌಕರರು ದನಗಳಂತೆ ಶಾಸಕರ ಮುಂದೆ ನಿಂತಿರುವ ದೃಶ್ಯಗಳು ಕಂಡು ಬಂದವು. ಕುಳಿತುಕೊಳ್ಳಲು ಅಸನದ ವ್ಯವಸ್ಥೆ ಇಲ್ಲದಿದ್ದರೂ ದೂರದಲ್ಲಿ ಶಿಸ್ತಿನಿಂದ ನಿಲ್ಲಿತುಕೊಳ್ಳಬಹುದಿತ್ತಲ್ಲವೇ? ನೀವು ಇನ್ನೊಬ್ಬರಿಗೆ ಮಾದರಿಯಾಗಬೇಕು. ನಿಮ್ಮ ನಡವಳಿಕೆಗಳು ಇನ್ನೊಬ್ಬರು ಪಾಲಿಸುವಂತಿರಬೇಕು. ನೂತನ ಶಾಸಕರು ನಗರಸಭೆಯ ನೌಕರರಿಗೆ ಕೂಡಲೇ ಶಿಸ್ತಿನ ಪಾಠ ಮಾಡಬೇಕಾಗಿದೆ.
ನಗರ ಸಭೆಗೆ ದಿಡೀರ್ ಭೇಟಿ ನೀಡಿ ಅಧಿಕಾರಿಗಳಿಗೆ ನಗರದ ಜನರಿಗೆ ಸಿಗಬೇಕಾದ ಮೂಲಭೂತ ಸೌಲಭ್ಯದತ್ತ ಗಮನಹರಿಸುವಂತೆ ತಿಳುವಳಿಕೆ ಹೇಳುವ ಸಂದರ್ಭದಲ್ಲಿ ಮಾಜಿ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪನವರು ಉಪಸ್ಥಿತರಿದ್ದು ಅಧಿಕಾರಿಗಳಿಗೆ ಕೆಲವು ಸಲಹೆ- ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ತಾಲೂಕು  ನಗರಸಭೆಯ ಆಡಳಿತ ಅಧಿಕಾರಿ ಪಲ್ಲವಿ ಸಾತೇನಹಳ್ಳಿ, ನಗರಸಭೆಯ ಚುನಾಯಿತ ಸದಸ್ಯರು ಸೇರಿದಂತೆ ನಗರಸಭೆಯ ಎಲ್ಲಾ ನೌಕರರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Post a Comment

0 Comments