ಗಂಗಾ ನಗರದ ನಿವಾಸಿಗಳಿಗೆ ನಗರಸಭೆಯ ಜಾಗದಲ್ಲಿ ಮನೆಗಳನ್ನು ನಿರ್ಮಿಸಲು ಅವಕಾಶ ಮಾಡಿಕೊಡಿ: ವಸಂತ ಎಸ್.ಎಂ.


ಮಂದಾರ ನ್ಯೂಸ್, ಹರಿಹರ: ಹರಿಹರ ನಗರಸಭೆ ವ್ಯಾಪ್ತಿಯ ವಾರ್ಡ್ ನಂಬರ್ 29ರ ಗಂಗಾನಗರದಲ್ಲಿರುವ ಸುಮಾರು 25 ರಿಂದ 30 ಮನೆಗಳು ಪ್ರತಿ ಬಾರಿ ಸುರಿಯುವ ಬಾರಿ ಮಳೆಯಿಂದ ತುಂಗಭದ್ರ ನದಿ ತುಂಬಿ ಹರಿಯುತ್ತಿರುವ ಪರಿಣಾಮ ಇಲ್ಲಿ ವಾಸವಾಗಿರುವ ಜನರು ನೆರೆಹಾವಳಿಗೆ ತುತ್ತಾಗುತ್ತಿದ್ದಾರೆ. ಇವರಿಗೆ ಶಾಶ್ವತವಾದ ನೆಲೆಯನ್ನ ಕಲ್ಪಿಸುವಂತೆ ಅನೇಕ ಬಾರಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳುತ್ತಲೇ ಬಂದಿದ್ದೇವೆ. ಆದರೆ ಇವರಿಗೆ ಶಾಶ್ವತವಾದ ನಿವೇಶನಗಳು ಇದುವರೆಗೂ ಮಂಜೂರಾಗಿರುವುದಿಲ್ಲ. ಕೂಡಲೆ ವಾರ್ಡ್ ನಂಬರ್ 29 ಗಂಗಾನಗರದಲ್ಲಿ ವಾಸವಾಗಿರುವ ಕುಟುಂಬಗಳಿಗೆ ನಗರಸಭೆಯ ಜಾಗದಲ್ಲಿ ನಿವೇಶನಗಳನ್ನ ನಿರ್ಮಿಸಲು ಅವಕಾಶ ಮಾಡಿಕೊಡುವಂತೆ ನಗರಸಭೆಯ ಚುನಾಯಿತ ಸದಸ್ಯರಾದ ವಸಂತ ಎಸ್.ಎಮ್ ಇವರು ನಗರ ಸಭೆಯ ಆಯುಕ್ತರಾದ ಬಸವರಾಜ್ ಐಗೂರ್ ರವರಿಗೆ ತಮ್ಮ ವಾರ್ಡ್ ಜನರ ಪರವಾಗಿ ಮನವಿಯನ್ನ ಸಲ್ಲಿಸಿದರು.
ಈಗಾಗಲೇ ಮಳೆಗಾಲ ಪ್ರಾರಂಭವಾಗುತ್ತಿದ್ದು ಮುಂದೆ ಮತ್ತೆ ಗಂಗಾನಗರದ ನಿವಾಸಿಗಳು ನೆರೆಹಾವಳಿಗೆ ತುತ್ತಾಗುವ ಸಾಧ್ಯತೆಯಿದ್ದು ಕೂಡಲೇ ಮುಂಜಾಗ್ರತಕ್ಕಮಾವಾಗಿ ಇಲ್ಲಿ ವಾಸವಾಗಿರುವ ಜನರಿಗೆ ನಗರಸಭೆ ಜಾಗದಲ್ಲಿ ನಿವೇಶನವನ್ನ ನಿರ್ಮಿಸಿಕೊಂಡು ತಮ್ಮ ಬದುಕನ್ನ ನಿರ್ವಹಿಸಿಕೊಂಡು ಹೋಗಲು ಮಾನವೀಯತೆಯ ದೃಷ್ಟಿಯಿಂದ ಅವಕಾಶ ಮಾಡಿಕೊಡುವಂತೆ ನಗರಸಭೆಯ ಆಯುಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ನಗರ ಸಭೆಯ ಆಯುಕ್ತರಾದ ಬಸವರಾಜ್ ಐಗೂರ್ ಇವರು ನಗರದ 29ನೇ ವಾರ್ಡಿನಲ್ಲಿ ವಾಸವಾಗಿರುವ ಗಂಗಾನಗರದ ನಿವಾಸಿಗಳ ಸಮಸ್ಯೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಾಗಬೇಕಾಗಿದೆ. ಇದು ಪ್ರತಿ ಮಳೆಗಾಲದಲ್ಲೂ ಇಲ್ಲಿನ ನಿವಾಸಿಗಳು ಅನುಭವಿಸುತ್ತಿರುವ ಸಂಕಷ್ಟವನ್ನು ಖುದ್ದು ಆಯುಕ್ತರೆ ಗಮನಿಸಿದ್ದಾರೆ. ಕೂಡಲೆ ಇಲ್ಲಿನ ನಿವಾಸಿಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ತಮ್ಮ ಕರ್ತವ್ಯವನ್ನ ಪ್ರಾಮಾಣಿಕವಾಗಿ ನಿಭಾಯಿಸಲಿ ಎಂಬುದು ನಮ್ಮ ಮಾಧ್ಯಮದ ಆಶಯವಾಗಿದೆ.

Post a Comment

0 Comments