ಮಂದಾರ ನ್ಯೂಸ್, ಸಾಗರ: ಕರ್ನಾಟಕ ರಾಜ್ಯ ಸಾರ್ವತ್ರಿಕ ಚುನಾವಣೆ 10 ಮೇ 2023 ರಂದು ನಡೆದು ಇಂದು ಫಲಿತಾಂಶ ಮತ ಎಣಿಕೆಯ ಮುಕ್ತಾಯಗೊಂಡು ಬಹುತೇಕ ಕ್ಷೇತ್ರಗಳ ಫಲಿತಾಂಶ ಹೊರ ಬಿದ್ದಿದೆ.
ತೀವ್ರ ಕುತೂಹಲ ಕೆರಳಿಸಿದ ಸಾಗರ ವಿಧಾನಸಭಾ ಕ್ಷೇತ್ರದ ಫಲಿತಾಂಶ ಇದೀಗ ತಾನೇ ಪ್ರಕಟಗೊಂಡಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೋಪಾಲ್ ಕೃಷ್ಣ ಬೇಳೂರು ಅವರು ಅವರ ಪ್ರತಿಸ್ಪರ್ಧಿ ಬಿಜೆಪಿ ಪಕ್ಷದ ಅಭ್ಯರ್ಥಿ ಹರತಾಳು ಹಾಲಪ್ಪನವರ ವಿರುದ್ಧ ಬಾರಿ ಮತಗಳ ಅಂತರದಿಂದ ಜಯಗಳಿಸುವ ಮೂಲಕ ಗೆಲುವಿನ ನಗೆಯನ್ನ ಬೀರಿದ್ದಾರೆ.
ಗೋಪಾಲ್ ಕೃಷ್ಣ ಬೇಳೂರು ಅವರ ಪ್ರತಿಸ್ಪರ್ಧಿ ಬಿಜೆಪಿ ಪಕ್ಷದ ಅಭ್ಯರ್ಥಿ ಹರತಾಳು ಹಾಲಪ್ಪನವರ ವಿರುದ್ಧ ಸುಮಾರು 15,916 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.
ಸಾಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಬೇಳೂರು ಗೋಪಾಲಕೃಷ್ಣ ಚುನಾವಣೆಗೆ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ವಿಜಯಶಾಲಿ ಆಗುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ.
ಹಸ್ತವೇ ಹಿತವೆಂದ ಸಾಗರ ಕ್ಷೇತ್ರದ ಮತದಾರರು, ಗೋಪಾಲಕೃಷ್ಣ ಅವರ ಮುಖದಲ್ಲಿ ಗೆಲುವಿನ ನಗೆಯನ್ನು ಬೀರಲು ಕಾರಣರಾದರು.
0 Comments