ಮಹರ್ಷಿ ವಾಲ್ಮೀಕಿ ಗುರುಪೀಠಕ್ಕೆ ಹರಿಹರದ ಶಾಸಕ ಬಿ.ಪಿ ಹರೀಶ್ ಭೇಟಿ ,ಶ್ರೀಗಳಿಂದ ಆಶೀರ್ವಾದ.

ಮಂದಾರ ನ್ಯೂಸ್, ಹರಿಹರ: ಹರಿಹರ ತಾಲೂಕು ರಾಜನಹಳ್ಳಿ ಗ್ರಾಮದಲ್ಲಿರುವ ಮಹರ್ಷಿ ಶ್ರೀ ವಾಲ್ಮೀಕಿ ಗುರುಪೀಠಕ್ಕೆ ಹರಿಹರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ನೂತನ ಶಾಸಕರಾದ ಬಿ.ಪಿ ಹರೀಶ್ ಅವರು ಭೇಟಿ ನೀಡಿ, ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು.

ಶ್ರೀಮಠದಿಂದ ನೂತನ ಶಾಸಕರಿಗೆ ಮಠದ ಪೀಠಾಧಿಪತಿಗಳಾದ ಪ್ರಸನ್ನಾನಂದ ಶ್ರೀ ಅವರು ಗೌರವಿಸಿ, ಸನ್ಮಾನಿಸಿ, ಆಶೀರ್ವದಿಸಿದರು.

ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಹರಿಹರದ ನೂತನ ಶಾಸಕ ಬಿ.ಪಿ ಹರೀಶ್ ಅವರು ಹರಿಹರ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ. ಈ ಹಿಂದೆ ಶಾಸಕರಾಗಿದ್ದ ಸಂದರ್ಭದಲ್ಲಿ ತಾಲೂಕಿನ ಅತ್ಯಂತ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಈಗಲೂ ಮುಂದುವರಿಸಿಕೊಂಡು ಹೋಗುತ್ತೇನೆ. ಸರ್ಕಾರದಿಂದ ಅನುದಾನವನ್ನು ತರುವ ಚಾಣಾಕ್ಷತೆ ನನ್ನಲ್ಲಿದ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಜನಸಾಮಾನ್ಯರು ನೆನಪಿಟ್ಟುಕೊಳ್ಳುವಂತೆ ಮಾಡಿ ತೋರಿಸುತ್ತೇನೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಈ ಸಂದರ್ಭದಲ್ಲಿ ಹರಿಹರ ತಾಲೂಕು ಬಿಜೆಪಿ ಎಸ್ ಟಿ ಮೊರ್ಚ್ ಅಧ್ಯಕ್ಷ ಟೆಲಿಕಾಂ ರವಿ, ಉಪಾಧ್ಯಕ್ಷ ಶ್ರೀಕಾಂತ್, ಬಿಜೆಪಿ ಮುಖಂಡ ಕೆಂಚನಹಳ್ಳಿ ಮಹಾಂತೇಶ್, ರಾಜನಹಳ್ಳಿ ಗ್ರಾಮದ ಬಿಜೆಪಿ ಕಾರ್ಯಕರ್ತರಾದ ಸಂದೀಪ್, ಗಣೇಶ್, ಮಾರುತಿ, ಸೇರಿದಂತೆ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಬಿಪಿ ಹರೀಶ್ ಅಭಿಮಾನಿಗಳು ಮತ್ತು ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.

Post a Comment

0 Comments