ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣ ಅವರೆ ನಿಮ್ಮ ಗೆಲುವಿಗಾಗಿ ಹಗಲಿರಲು ಶ್ರಮಿಸಿದ ಕಾರ್ಯಕರ್ತರ ಶ್ರಮವನ್ನ ಮರೆಯಬೇಡಿ.
ಕಳೆದ ಹತ್ತು ವರ್ಷದಿಂದ ಅಧಿಕಾರ ಇರಲಿ ಇಲ್ಲದೆ ಇರಲಿ ನಿಮಗೆ ಹೆಗಲಿಗೆ ಹೆಗಲು ಕೊಟ್ಟು ನಿಮ್ಮ ಜೊತೆ ಇದ್ದು ಹಗಲಿರಲು ಎನ್ನದೆ ನಿಮ್ಮ ಗೆಲುವಿಗಾಗಿ ಶ್ರಮಿಸಿದ ಕಾರ್ಯಕರ್ತರು ನೀವು ಗೆಲ್ಲಲೇ ಬೇಕು ಎಂಬ ಛಲವನ್ನ ಇಟ್ಟುಕೊಂಡಿದ್ದರು.
ಕಾರ್ಯಕರ್ತರ ಆಶಯದಂತೆ ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಇಂದು ದೊರೆತಿದ್ದು ನೀವು ಸಾಗರ ವಿಧಾನಸಭಾ ಕ್ಷೇತ್ರದಿಂದ ನಿಮ್ಮ ಪ್ರತಿಸ್ಪರ್ಧಿ ವಿರುದ್ಧ ಅತ್ಯಧಿಕ ಮತದಿಂದ ಜಯಗಳಿಸಿದ್ದೀರಾ. ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಿರ.
ಅಂದು ನಿಮ್ಮ ಜೊತೆ ಗೆಲುವಿಗಾಗಿ ಶ್ರಮಿಸಿದ ಕಾರ್ಯಕರ್ತರು ಫ್ರೆಂಟ್ ಲೈನ್ ನಲ್ಲಿ ಕಾಣುತ್ತಿಲ್ಲ. ಚುನಾವಣೆಯ ಮುಂಚೆ ನಿಮ್ಮ ಜೊತೆ ಇಲ್ಲದೆ ನಿಮ್ಮ ಗೆಲುವಿಗಾಗಿ ಶ್ರಮಪಡದ ವಿರೋಧ ಪಕ್ಷದ ಅಭ್ಯರ್ಥಿಯ ಜೊತೆ ಒಳ ಒಪ್ಪಂದ ಮಾಡಿಕೊಂಡ ಹಾಗೂ ಅವರು ಅಧಿಕಾರ ಇದ್ದ ಸಂದರ್ಭದಲ್ಲಿ ಅವರೊಂದಿಗೆ ಇದ್ದು ಅನುಕೂಲ ಮಾಡಿಕೊಂಡ ಕೆಲವರು ಇಂದು ನೀವು ಶಾಸಕರಾಗುತ್ತಿದ್ದಂತೆ ನಿಮ್ಮೊಂದಿಗೆ ಫ್ರಂಟ್ ಲೈನ್ ನಲ್ಲಿ ಕಾಣುತ್ತಿರುವ ದೃಶ್ಯಗಳು ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಬಾರಿಯ ಚುನಾವಣೆ ಹಣಬಲ ಮತ್ತು ಸ್ವಾಭಿಮಾನದ ನಡುವೆ ನಡೆದ ಚುನಾವಣೆಯಾಗಿದೆ. ಅದೆಷ್ಟೋ ಅಭಿಮಾನಿಗಳು ನೀವು ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಅವರೇ ಸ್ವಯಂ ಪ್ರೇರಿತವಾಗಿ ಹಣವನ್ನು ದೇಣಿಗೆ ರೂಪದಲ್ಲಿ ನೀಡಿರುವುದು ನಿಮಗೆ ಗೊತ್ತಿರುವ ಸಂಗತಿಯಾಗಿದೆ. ಆದರೆ ಇಂದು ಅವರು ದೂರದಲ್ಲೇ ಇದ್ದು ನಿಮ್ಮ ಗೆಲುವಿನ ಸಂಭ್ರಮವನ್ನು ಅನುಭವಿಸುತ್ತಿದ್ದಾರೆ ಮತ್ತು ಹಾರೈಸುತ್ತಿದ್ದಾರೆ.
ಆದರೆ ಯಾವುದೇ ಶ್ರಮ ವಹಿಸದ ಕೆಲವರು ನಿಮ್ಮ ಜೊತೆ ಬಂದು ಅವರ ಸ್ವಾರ್ಥಕ್ಕಾಗಿ ನಿಮ್ಮೊಂದಿಗೆ ನಾಟಕವಾಡುತ್ತಿದ್ದಾರೆ. ಯಾವುದಕ್ಕೂ ಅಂತವರ ಬಗ್ಗೆ ಎಚ್ಚರಿಕೆ ವಹಿಸಿ.
ಈ ಹಿಂದಿನ ಶಾಸಕರ ಕೆಲ ನಡುವಳಿಕೆಗಳಿಗೆ ಇಂದು ನಿಮ್ಮ ಜೊತೆ ಬಂದು ನಾಟಕವಾಡುತ್ತಿರುವರು ಒಂದು ರೀತಿಯಲ್ಲಿ ಕಾರಣವಾಗಿದ್ದಾರೆ. ಅವರು ನಿಮ್ಮೊಂದಿಗೆ ಇರುವುದು ಅವರ ಸ್ವಾರ್ಥ ಸಾಧನೆಗಾಗಿ ಎಂಬುವುದನ್ನು ಮರೆಯಬೇಡಿ.
ಬೇಳೂರು ಅವರನ್ನು ಪ್ರೀತಿಸುವ ಜನ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಯುವಕರು ನಿಮ್ಮನ್ನ ತುಂಬಾ ಹಚ್ಚಿಕೊಂಡಿದ್ದಾರೆ. ನೀವು ಜನರೊಂದಿಗೆ ಬೆರೆಯುವುದು ಕಂಡು ಫೀದ್ ಆಗಿದ್ದಾರೆ. ನೀವು ಜನರ ಮಧ್ಯೆ ಇರುವಂತೆ ಇತರ ಯಾವ ಶಾಸಕರು ಇರುವುದಿಲ್ಲ.
"ಅಂದು ಕರ್ನಾಟಕ ರತ್ನ ಡಾಕ್ಟರ್ ರಾಜಕುಮಾರ್ ಅವರು ಅಭಿಮಾನಿಗಳೇ ದೇವರು ಎಂದರು. ಇಂದು ಕಾರ್ಯಕರ್ತರೇ ದೇವರು ಎನ್ನುತ್ತಿದ್ದಾರೆ ಬೇಳೂರು ಗೋಪಾಲಕೃಷ್ಣ"
ಕಾರ್ಯಕರ್ತರಲ್ಲಿ ದೇವರನ್ನು ಕಾಣುವ ರಾಜ್ಯದ ಏಕೈಕ ರಾಜಕಾರಣಿ ಬೇಳೂರು ಗೋಪಾಲಕೃಷ್ಣ ಎನ್ನುವ ಮಟ್ಟಕ್ಕೆ ನೀವು ನಿಮ್ಮ ಕ್ಷೇತ್ರದ ಜನರನ್ನು ಪ್ರೀತಿಸುತ್ತೀರಾ. ಅಧಿಕಾರ ಇರಲಿ, ಇಲ್ಲದೆ ಇರಲಿ .ಜನರ ಕಷ್ಟ ಮತ್ತು ಸುಖದಲ್ಲಿ ಭಾಗಿಯಾಗಿದ್ದೀರಾ. ನಿಮ್ಮ ಈ ಗುಣ ರಾಜಕಾರಣದ ಕೊನೆಯ ಹಂತದವರೆಗೂ ಮುಂದುವರೆಯಲಿ ಎಂಬುದು ನಮ್ಮ ಮಾಧ್ಯಮದ ಆಶಯವಾಗಿದೆ.
0 Comments