ಹರಿಹರ ಸಬ್ ರಿಜಿಸ್ಟ್ರಾರ್ ಕಚೇರಿಯ ಮೇಲೆ ಲೋಕಾಯುಕ್ತ ದಾಳಿ. ದತ್ತು ಬರಹಗಾರ ಪರಮೇಶ್ವರ್ ಬಂಧನ.!

ಮಂದಾರ ನ್ಯೂಸ್ ,ಹರಿಹರ: ಹರಿಹರ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನಿನ್ನೆ ಸಂಜೆ ಲೋಕಾಯುಕ್ತರ ದಾಳಿ ನಡೆದಿದ್ದು ಸಬ್ ರಿಜಿಸ್ಟರ್ ಕಚೇರಿಯಲ್ಲಿ ದತ್ತು ಬರಹಗಾರನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪರಮೇಶ್ವರ.ಎಂ.ಬಿ ಇವರನ್ನು ರೆಡ್ ಹ್ಯಾಂಡ್ ಆಗಿ ತಮ್ಮ ಬಲೆಗೆ ಕೆಡುವಿದ್ದಾರೆ.

ಹರಿಹರದ ನಿವಾಸಿಯಾಗಿರುವ ಶ್ರೀ ಮಂಜುನಾಥ ಹೆಚ್ ಕೆ ಇವರು ದಿನಾಂಕ 19 5 2023 ರಂದು ಮನೆಯನ್ನು ಖರೀದಿ ಮಾಡಿದ ಸೇಲ್ ಡಿಡ್ ನೊಂದಾವಣೆ ಪತ್ರವನ್ನು ನೀಡುವ ಸಹಾಯ ಮಾಡುವ ಸಂಬಂಧ ಉಪ ನೋಂದಾವಣೆ ಅಧಿಕಾರಿಗಳು ಹರಿಹರ ಅಧಿಕಾರಿಗಳು ಇವರಿಗೆ ಕೊಡಬೇಕು ಎಂದು 2% ಕಮಿಷನ್ ಕೊಡಬೇಕಾಗುತ್ತದೆ. ಒಟ್ಟು 60,000 ಲಂಚದ ಹಣಕ್ಕೆ ಬೇಡಿಕೆ ಇಟ್ಟು ಅಂತಿಮವಾಗಿ 20 ಸಾವಿರ ರೂಪಾಯಿ ಮಾತುಕತೆಯನ್ನು ಮುಗಿಸಿ ಮುಂಗಡವಾಗಿ ಏಳು ಸಾವಿರ ರೂಪಾಯಿ ಹಣವನ್ನು ಪಡೆದು ನಂತರ ಉಳಿದ ಹಣ 13,000 ನೀಡುವಂತೆ ಕೇಳಿರುತ್ತಾರೆ.
ದೂರುದಾರ ಶ್ರೀ ಮಂಜುನಾಥ ಹೆಚ್ ಕೆ ಇವರು ಲಂಚದ ಹಣ ನೀಡಲು ಇಟ್ಟವಿಲ್ಲದೆ ದಾವಣಗೆರೆ ಲೋಕಾಯುಕ್ತ ಪೊಲೀಸರನ್ನು ಸಂಪರ್ಕಿಸಿ ಲಂಚದ ಹಣವನ್ನು ನೀಡಲು  ಇಷ್ಟವಿಲ್ಲದ ಕಾರಣ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತಾರೆ.

ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ನಿನ್ನೆ ದಿನ 20.05.2023ರ ಸಂಜೆ ದೂರುದಾರರಿಂದ ಪರಮೇಶ್ ಎಂಬಿ ಇವರು ಹರಿಹರ ಉಪನಂದಾವಣೆ ಕಚೇರಿಯ ಒಳಗಡೆ ಉಪನಂದಾವಣೆ ಅಧಿಕಾರಿಗಳು ಕೊಡಬೇಕು ಎಂದು 13,000 ಲಂಚದ ಹಣವನ್ನು ಪಡೆಯುವಾಗ ಲೋಕಾಯುಕ್ತಕ್ಕೆ ಪೋಲಿಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುತ್ತಾರೆ. ಪರಮೇಶ್ ಎಂಬಿ ಅವರಿಂದ ಲಂಚದ ಹಣ ಹಾಗೂ ಈ ದಿವಸ ಲಂಚದ ರೂಪದಲ್ಲಿ ಸಂಗ್ರಹಿಸಿದರು 40,000 ವಿವಿಧ ದಾಖಲೆಗಳನ್ನು ವಶಪಡಿಸಿಕೊಂಡಿದ್ದು ತನಿಖೆಯನ್ನು ಮುಂದುವರಿಸಿರುತ್ತಾರೆ.
ದಾವಣಗೇರಿ ಲೋಕಾಯುಕ್ತ ಘಟಕದ ಪೊಲೀಸ್ ಅಧೀಕ್ಷಕರಾದ ಶ್ರೀ ಎಂ ಎಸ್ ಕೌಲಾಪುರೆ ಇವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಗಳಾದ ಶ್ರೀ ಆಂಜನೇಯ ಎನ್ ಹೆಚ್ ಹಾಗೂ ಶ್ರೀ ರಾಷ್ಟ್ರಪತಿ ಎಚ್ ಎಸ್ ಇವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸಿ ಎಚ್ ಸಿ ಶ್ರೀ ವೀರಶಯ್ಯ, ಎಸ್.ಎಂ,ಎನ್. ಆರ್ ಚಂದ್ರಶೇಖರ್, ,ಶ್ರೀ ಆಂಜನೇಯ ವಿ.ಎಚ್, ಸಿಪಿಸಿವರಾದ ಶ್ರೀ ಧನರಾಜು ಹಾಗೂ ಎಪಿಸಿ ಬಸವರಾಜ್ ಪಿ ಎಸ್ ,ಕೃಷ್ಣನಾಯ್ಕ ಇವರೊಂದಿಗೆ  ಯಶಸ್ವಿ ಟ್ರ್ಯಾಪ್ ಕಾರ್ಯಾಚರಣೆ ನಡೆಸಿ ಟ್ರ್ಯಾಪ್ ಮಾಡಿ ದಸ್ತಗಿರಿ ಮಾಡಿರುತ್ತಾರೆ .

Post a Comment

0 Comments