ಹರಿಹರ ನಗರ ಪೊಲೀಸರಿಂದ ಮಿಂಚಿನ ಕಾರ್ಯಾಚರಣೆ. 1.60 ಲಕ್ಷ ಮೌಲ್ಯದ 10 ಮೊಬೈಲ್ ಗಳನ್ನು ಪತ್ತೆ.!!

ಮಂದಾರ ನ್ಯೂಸ್ ,ಹರಿಹರ:
ಹರಿಹರ ನಗರ ಠಾಣಾ ವ್ಯಾಪ್ತಿಯಲ್ಲಿ ಕಳುವಾದ/ಕಳೆದು ಹೋದ ಮೊಬೈಲ್ ಗಳನ್ನು ceirportal ಮೂಲಕ ವಿವಿಧ ಕಂಪನಿಯ 1.60 ಲಕ್ಷ ಮೌಲ್ಯದ 10 ಮೊಬೈಲ್ ಗಳನ್ನು ಪತ್ತೆ ಮಾಡಿ ಇಂದು ಮೊಬೈಲ್ ವಾರಸುದಾರರಿಗೆ ಹರಿಹರ ನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಎಸ್ ದೇವಾನಂದ ರವರು ನೀಡಿದರು.

ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಠಾಣಾಧಿಕಾರಿಗಳು ಹರಿಹರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದು ಹೋದ ಮೊಬೈಲ್ ಫೋನ್ ಗಳನ್ನು ceir portal ನಲ್ಲಿ ವಾರಸುದಾರರ ವಿವರಗಳನ್ನು ನಮೂದು ಮಾಡಿ, ಮೊಬೈಲ್ ನ ಐಎಂಇಐ ನಂಬರ್ಗಳನ್ನು ಬ್ಲಾಕ್ ಮಾಡುವ ಮುಖಾಂತರ ಕಳೆದು ಹೋದ/ ಕಳುವಾದ ಮೊಬೈಲ್ಗಳ ಪೈಕಿ 10 ಮೊಬೈಲ್ ಗಳನ್ನು ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪತ್ತೆ ಮಾಡಿ ಎಲ್ಲಾ ವಾರಸುದಾರರಿಗೆ ಮೊಬೈಲ್ ಫೋನ್ ಗಳನ್ನು ಹಿಂದಿರುಗಿಸಲಾಯಿತು ಎಂದು ಹೇಳಿದರು.
ಮೊಬೈಲ್ ಕಳೆದುಕೊಂಡ ವಾರಸುದಾರರು ಈ ರೀತಿಯಾಗಿದ್ದು ವಿರೂಪಾಕ್ಷಿ, ಸ್ವರೂಪ್ ದುರ್ಗೋಜಿ ,ರಮೇಶ್, ಎನ್ ಪಿ ಹಿರೇಮಠ್, ಗುಡ್ದಾಚಾರಿ, ಜೈರಾಮ್ ಶೆಟ್ಟಿ ,ನಜರುಲ್ಲಾ, ಶಿವಾನಂದಪ್ಪ, ಹನುಮಂತಪ್ಪ, ಅನಿಲ್ ಹರಿಬಾಬು ಇವರೆಲ್ಲರೂ ಮೊಬೈಲ್ ಗಳನ್ನ ಕಳೆದುಕೊಂಡಿದ್ದರು. ಇಂದು ಮೊಬೈಲ್ ಗಳನ್ನು ವಾರಸುದಾರರಿಗೆ ಹಿಂದುರಿಗಿಸಲಾಗಿದೆ. ಪತ್ತೆಯಾದ ಮೊಬೈಲ್ಗಳ ಅಂದಾಜು ಮೊತ್ತ ೧ ಲಕ್ಷದ ಅರವತ್ತು ಸಾವಿರ ರೂಪಾಯಿಗಳು ಎಂದರು.

ಹೆಚ್ಚುವರಿ ಪೊಲೀಸ್ ಅಧಿಕರಾದ ಶ್ರೀ ಆರ್ ಬಿ ಬಸರಗಿ ಅವರು ಮತ್ತು ಶ್ರೀಮತಿ ಕನ್ನಿಕಾ ಸಿಕ್ರಿವಾಲ್ ಐಪಿಎಸ್, ಸಹಾಯಕ ಪೊಲೀಸ್ ಉಪಾಧ್ಯೀಕ್ಷಕರು , ದಾವಣಗೆರೆ ಗ್ರಾಮಾಂತರ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಹರಿಹರ ನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ  ಎಸ್ ದೇವಾನಂದ ರವರ ನೇತೃತ್ವದಲ್ಲಿ ಠಾಣಾ ಸಿಬ್ಬಂದಿಯವರಾದ ಡಿ ಎಚ್ ಸಿರಿಗೆರೆ, ಮಂಜಪ್ಪ ಕ್ಯಾತಮ್ಮನವರು, ರಿಜ್ವಾನ್ ನಾಸೂರ್ ರವರು ಮೊಬೈಲ್ ಗಳನ್ನು ಪತ್ತೆ ಮಾಡಿದ್ದು ಇವರುಗಳ ಕಾರ್ಯವನ್ನು ಮಾನ್ಯ ಪೋಲಿಸ್ ಅಧೀಕ್ಷಕರಾದ ಡಾ. ಅರುಣ್ ಕೆ .ಐಪಿಎಸ್ ರವರು ಸರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.

Post a Comment

0 Comments