ಮಂದಾರ ನ್ಯೂಸ್ ವಿಶೇಷ:Super cop HT ಸಾಂಗ್ಲಿಯಾನ ನಮ್ಮ ಊರು ಸಾಗರದಲ್ಲಿ ASP ಆಗಿ ತಮ್ಮ ಸೇವೆಯನ್ನು ಆರಂಭಿಸಿದರು.ಅವರ ಸಾಹಸಗಳ ಬಗ್ಗೆ ತರಹೆ ವಾರು ಕತೆಗಳಿವೆ ಎಂಬುದನ್ನು ಆನಂದಪುರದ ಗೆಳೆಯ arun prasad ಇಂದು ನೆನಪಿಸಿದ್ದಾರೆ.
ನಾನು ಒಂದು ಘಟನೆಯನ್ನು ಮಾತ್ರ ಪ್ರಸ್ತಾಪಿಸುತ್ತೇನೆ.ಒಂದು ದಿನ ಮುಂಜಾನೆ ಸಾಂಗ್ಲಿಯಾನ ಅವರ ಪತ್ನಿಗೆ ಎಚ್ಚರವಾದಾಗ ಅವರ ಪಕ್ಕದಲ್ಲಿ ಸಾಂಗ್ಲಿಯಾನ ಇರಲಿಲ್ಲ.ಹಾಸಿಗೆಯಿಂದ ಎದ್ದು ಹೋಗಿರಬಹುದೆಂದು ಎಂದುಕೊಂಡರು.ಸ್ವಲ್ಪ ಹೊತ್ತಿನ ನಂತರ ಅವರು ಎದ್ದು ನೋಡಿದಾಗ ಸಾಂಗ್ಲಿಯಾನ ಮನೆಯಲ್ಲಿ ಎಲ್ಲೂ ಕಾಣಿಸಲಿಲ್ಲ.ಪ್ರಾಯಶಃ ಠಾಣೆಗೆ urgent ಡ್ಯೂಟಿ ಮೇಲೆ ಹೋಗಿರಬಹುದು ಎಂದುಕೊಂಡರು .ಆದರೆ ಮುಂದಿನ ಬಾಗಿಲು ರಾತ್ರಿ ಚಿಲಕ ಹಾಕಿದಂತೆಯೇ ಇತ್ತು.ಅದು open ಆಗಿರಲಿಲ್ಲ.ಇವರು ಬಾಗಿಲನ್ನು ತೆರೆದು ನೋಡುತ್ತಾರೆ.ಮನೆ ಎದುರಿನ ಕಾಂಪೌಂಡ್ ಗೇಟು ಕೂಡ ಕ್ಲೋಸ್ ಆಗಿತ್ತು ಮತ್ತು ಅವರ ಜೀಪು ಕೂಡ ಅಲ್ಲಿಯೇ ಇತ್ತು.ಅವರಿಗೆ ಸ್ವಲ್ಪ ಗಾಬರಿ ಆಯಿತು.ಪೊಲೀಸ್ ಠಾಣೆಗೆ ಫೋನ್ ಮಾಡಿ ವಿಚಾರಿಸಿದಾಗ ಅಲ್ಲಿಗೂ ಬಂದಿಲ್ಲ ಎಂದು ಸಿಬ್ಬಂದಿ ತಿಳಿಸಿದರು.ಆದರೆ ಮನೆಯ ಹಿಂದಿನ ಬಾಗಿಲು ಓಪನ್ ಆಗಿತ್ತು.ಸಾಂಗ್ಲಿಯಾನ ಮನೆಯ ಹಿಂದಿನ ಬಾಗಿಲಿನಿಂದ ಕಾಂಪೌಂಡ್ ನಿಂದ ಜಿಗಿದು ಹೋಗಿದ್ದರು.
ಅವರ ಪತ್ನಿ ಆತಂಕಗೊಂಡರು.ಬೆಳಗ್ಗೆ ಸುಮಾರು ಹತ್ತು ಗಂಟೆಗೆ ಠಾಣೆಯಿಂದ ಒಂದು ಮೆಸೇಜ್ ಬಂದಿತು.ಸಾಂಗ್ಲಿಯಾನ ಅವರು ಸುಮಾರು ಎಂಬತ್ತು ಕಿಲೋ ಮೀಟರ್ ದೂರದಲ್ಲಿ ಶಿಕಾರಿಪುರ ತಾಲೂಕಿನ ದಟ್ಟ ಕಾಡಿನಲ್ಲಿ ಅಕ್ಕಿ ಕಳ್ಳ ಸಾಗಣೆ ಮಾಡುತ್ತಿದ್ದ ಆರು ಲಾರಿಗಳನ್ನು ಸೀಜ್ ಮಾಡಿದ್ದರು .(ಆಗ ಅಂತರ ಜಿಲ್ಲಾ ಅಕ್ಕಿ ಸಾಗಣೆಗೆ ನಿರ್ಬಂಧ ಇತ್ತು).ಆ ಲಾರಿಗಳು ಸುರಗಿಹಳ್ಳಿ ಹಾಲಪ್ಪ ಎಂಬ ಕುಖ್ಯಾತ ಉದ್ಯಮಿಗೆ ಸೇರಿದ್ದವು.ಆತಂಕಿತರಾಗಿದ್ದ ಅವರ ಪತ್ನಿ ಸಾಂಗ್ಲಿಯಾನ ಅವರ ಜೀಪಿನಲ್ಲಿ ಸೀದಾ ಆ ಜಾಗಕ್ಕೆ ಧಾವಿಸಿದರು.
ಇವರನ್ನು ನೋಡಿದ ಕೂಡಲೇ ಸಾಂಗ್ಲಿಯಾನ ಅವರನ್ನು "ಪೊಲೀಸ್ ಜೀಪಿನಲ್ಲಿ ನೀನು ಯಾಕೆ ಬಂದಿದ್ದೀಯಾ "ಎಂದು ಗದರಿಸಿದರು ಮತ್ತು ಸರ್ಕಾರೀ ವಾಹನ ಅನಧಿಕೃತ ಬಳಕೆ ಸಂಬಂದಿಸಿದ ಕೇಸನ್ನು book ಮಾಡಿದರು.ಅವರ ಪತ್ನಿ ಸಾಗರದ ಕೋರ್ಟಿಗೆ ದಂಡ ಕಟ್ಟಿ ಅದನ್ನು ಕ್ಲಿಯರ್ ಮಾಡಿಕೊಂಡು ಬಂದರು.
ಸ್ನೇಹಿತರೆ ಈ ಬರಹವನ್ನು PRESENT POLITICAL POSTER ಫೇಸಬುಕ್ ವಾಲ್ ನಿಂದ ತೆಗೆದುಕೊಳ್ಳಲಾಗಿದೆ.
0 Comments