ಹರಿಹರ ನಗರಸಭೆಯ ಇಂಜಿನಿಯರ್ ಮತ್ತು ಸದಸ್ಯೆಯ ಮನೆ ಮೇಲೆ ಲೋಕಾಯುಕ್ತರ ದಾಳಿ.!!


ಮಂದಾರ ನ್ಯೂಸ್, ಹರಿಹರ: ನಗರಸಭೆಯ ಸಹಾಯಕ ಇಂಜಿನಿಯರ್ ಎಂ. ಅಬ್ದುಲ್ ಹಮೀದ್ ,ನಗರ ಸಭೆಯ ಚುನಾಯಿತ ಸದಸ್ಯೆ ನಾಗರತ್ನ ಎನ್. ಕೆ ಇವರ ಮನೆಗಳ ಮೇಲೆ ದಾವಣಗೆರೆ ಲೋಕಾಯುಕ್ತ ಪೊಲೀಸರು ನಿನ್ನೆ ಸಂಜೆ ದಾಳಿ ನಡೆಸಿದ್ದಾರೆ.

ನಗರದ ರಾಜಾರಾಮ್ ಕಾಲೋನಿಯ ಕ್ಲಾಸ್ ಒನ್ ಗುತ್ತಿಗೆದಾರ ಮಹಮ್ಮದ್ ಮಜರ್ ಇವರು ನಗರಸಭೆ ವ್ಯಾಪ್ತಿಯಲ್ಲಿ ಮಾಡಿದ ಗುತ್ತಿಗೆ ಕೆಲಸಗಳಿಗೆ ಬಿಲ್ ಮಾಡಲು ಹಾಗೂ ನಗರಸಭಾ ಸದಸ್ಯರಿಗೆ ತಮ್ಮ ವಾರ್ಡಿನಲ್ಲಿ ಮಾಡಿದ ಕೆಲಸಗಳಿಗೆ ಸಹಿ ಮಾಡುವಂತೆ ಕೇಳಿಕೊಂಡಿರುತ್ತಾರೆ. ಆದರೆ ನಗರಸಭೆಯ ಸದಸ್ಯೆ 10% ಕಮಿಷನ್ ಕೇಳಿದ್ದು ಹಾಗೂ ಸಹಾಯಕ ಇಂಜಿನಿಯರ್ 5% ಕಮಿಷನ್ ಕೇಳಿರುತ್ತಾರೆ. ಇದಕ್ಕೆ ಒಪ್ಪದ ಮಹಮ್ಮದ್ ಮಜರ್ ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರನ್ನ ದಾಖಲಿಸಿರುತ್ತಾರೆ.
ಹರಿಹರ ನಗರದ ರಾಜಾರಾಮ್ ಕಾಲೋನಿ ನಿವಾಸಿಯಾದ ನಗರಸಭೆಯ ಕ್ಲಾಸ್ ಒನ್ ಗುತ್ತಿಗೆದಾರ ಮಹಮದ್ ಮಜರ್ ಇವರ ದೂರಿನ ಮೇಲೆ ನಿನ್ನೆ ದಿನ ದಾವಣಗೆರೆ ಲೋಕಾಯುಕ್ತರು ನಗರಸಭೆಯ ಸದಸ್ಯೆ ನಾಗರತ್ನಮ್ಮ.ಎನ್.ಕೆ ಹಾಗೂ ಸಹಾಯಕ ಇಂಜಿನಿಯರ್ ಎಂ ಅಬ್ದುಲ್ ಹಮೀದ್ ಇವರ ಮನೆಯ ಮೇಲೆ ದಾಳಿ ನಡೆಸಿ ಹಣ ಪಡೆಯುತ್ತಿರುವ ಸಂದರ್ಭದಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದಿರುತ್ತಾರೆ.

ಈಗಾಗಲೇ ತಮ್ಮ ಗುತ್ತಿಗೆ ಕೆಲಸಕ್ಕೆ ಸಹಿ ಮಾಡುವಂತೆ ಸಹಾಯಕ ಇಂಜಿನಿಯರ್ ಎಂ ಅಬ್ದುಲ್ ಹಮೀದ್ ಇವರಿಗೆ 30,000 ಹಣ ನೀಡಿದ್ದು ಲೋಕಾಯುಕ್ತರ ದಾಳಿ ಸಂದರ್ಭದಲ್ಲಿ 20000 ಹಣ  ಪಡೆಯುತ್ತಿರುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿರುತ್ತಾರೆ.

ಅದೇ ರೀತಿ ನಗರಸಭೆಯ ಸದಸ್ಯೆ ನಾಗರತ್ನ ಎನ್ ಕೆ ಇವರು ಸಹ ತಮ್ಮ ವಾರ್ಡಿನ ಕೆಲಸಕ್ಕೆ ಸಹಿ ಮಾಡಲು ಈಗಾಗಲೇ 40,000 ಹಣವನ್ನು ಪಡೆದಿದ್ದು ,ಇಂದು 20,000 ಹಣವನ್ನು ಅವರ ನಿವಾಸದಲ್ಲಿ ಪಡೆಯುತ್ತಿರುವ ಸಂದರ್ಭದಲ್ಲಿ ಲೋಕಾಯುಕ್ತ ದಾಳಿಗೆ ಒಳಗಾಗಿರುತ್ತಾರೆ.
ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಮುಂದುವರಿಸುತ್ತಾರೆ.

ಹರಿಹರ ನಗರದ ರಾಜಾರಾಮ್ ಕಾಲೋನಿಯ ಕ್ಲಾಸ್ ಒನ್ ಗುತ್ತಿಗೆದಾರ ಮಹಮದ್ ಮಜರ್ ಇವರಿಂದ ಸಹಾಯಕ ಇಂಜಿನಿಯರ್ ಮತ್ತು ನಗರಸಭೆ ಸದಸ್ಯೆ ಇವರು ತಮ್ಮ, ತಮ್ಮ ನಿವಾಸದಲ್ಲಿ ಹಣ ಪಡೆಯುತ್ತಿರುವ ಸಂದರ್ಭದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ನಗರಸಭೆ ಸದಸ್ಯೆ ನಾಗರತ್ನ ಎನ್ ಕೆ ಇವರು ತಮ್ಮ ನಿವಾಸದಲ್ಲಿ ಹಣ ಪಡೆಯುತ್ತಿರುವ ಸಂದರ್ಭದಲ್ಲಿ ಅವರ ಪತಿ ಮಂಜುನಾಥ್ ಕಾಂಡಿಕೆ ಹಾಗೂ ಪುತ್ರ ಡಾ. ರೇವಂತ್ ಇವರು ಜೊತೆಗಿರುತ್ತಾರೆ ಆದ್ದರಿಂದ ಇವರನ್ನು ಸಹ ವಿಚಾರಣೆ ನಡೆಸುತ್ತಿದ್ದಾರೆ.

ದಾವಣಗೆರೆ ಲೋಕಾಯುಕ್ತ ಘಟಕದ ಪೊಲೀಸ್ ಅಧೀಕ್ಷಕರಾದ ಶ್ರೀ ಎಂ ಎಸ್ ಕೌಲಾಪುರೆ, ಇವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ಗಳಾದ ಶ್ರೀ ಆಂಜನೇಯ ಎನ್ ಹೆಚ್ ಹಾಗೂ ಶ್ರೀ ರಾಷ್ಟ್ರಪತಿ ಹೆಚ್. ಎಸ್ ಇವರ ನೇತೃತ್ವದಲ್ಲಿ ಲೋಕಾಯುಕ್ತ ಸಿಬ್ಬಂದಿಗಳೊಂದಿಗೆ ಯಶಸ್ವಿ ಟ್ರಾಪ್ ಕಾರ್ಯಾಚರಣೆ ನಡೆಸಿ ಟ್ರಾಪ್ ಮಾಡಿ ದಸ್ತಗಿರಿ ಮಾಡಲಾಗಿದೆ.

Post a Comment

0 Comments