ಹೊಸನಗರದ ಜನತೆಗೆ ಎರಡು ದಿನಕ್ಕೊಮ್ಮೆ ಕಲುಷಿತ ನೀರು ಪೂರೈಕೆ. ಶಾಸಕರೇ ಏನಂತೀರಾ.!?


ಮಂದಾರ ನ್ಯೂಸ್,ಹೊಸನಗರ: ಮಲೆನಾಡಿನ ಹೆಬ್ಬಾಗಿಲು, ಹಲವು ನದಿಗಳ ತವರೂರು, ರಾಜ್ಯದಲ್ಲೇ ದೊಡ್ಡ ,ದೊಡ್ಡ ಆಣೆಕಟ್ಟುಗಳನ್ನು ಹೊಂದಿದ ಹೆಮ್ಮೆಯ ಶಿವಮೊಗ್ಗ ಜಿಲ್ಲೆಯ ಜನತೆಗೆ ಕುಡಿಯಲು ನೀರಿಗೆ ಬರ ,ಎಂತಹ ವಿಪರ್ಯಾಸ ಅಲ್ಲವೇ?

ಹಚ್ಚ ಹಸಿರಿನ ಸೊಬಗನ್ನ ಹೊಂದಿರುವ, ಇಡೀ ರಾಜ್ಯಕ್ಕೆ ಬೆಳಕನ್ನು ನೀಡುವ ಶರಾವತಿ ಹಿನ್ನೀರಿನ ಹೊಸನಗರದ ಜನತೆಗೆ ಎರಡು ದಿನಕ್ಕೊಮ್ಮೆ ಕಲುಷಿತ ನೀರು. ನಗರದ ಪಟ್ಟಣ ಪಂಚಾಯಿತಿಯಿಂದ ಪ್ರತಿ ದಿನ ನಲ್ಲಿಯ ಮೂಲಕ ಕಲುಷಿತ ನೀರನ್ನು ಪೂರೈಕೆ ಮಾಡಲಾಗುತ್ತಿದೆ.
ಶರಾವತಿಯ ನದಿಯ ದಡದ ಮೇಲೆ ಇರುವ ಹೊಸನಗರದ ಜನತೆಗೆ ನೀರಿಗೆ ಬರ ಎಂದರೆ ಆಶ್ಚರ್ಯವಾಗುತ್ತದೆ. ಪಟ್ಟಣ ಪಂಚಾಯ್ತಿಯವರು ನಗರದ ಜನತೆಗೆ ಆರೋಗ್ಯವಾಗಿ ಇರುವುದು ಇಷ್ಟವಿಲ್ಲವೇನು?  ಪ್ರತಿ ದಿನ ಅರ್ಧ ಗಂಟೆ ಕಲುಷಿತ ನೀರು ನೀಡುತ್ತಿದ್ದಾರೆ . ಅಲ್ಲೇ ಅರ್ಥವಾಗುತ್ತದೆ ಪಟ್ಟಣ ಪಂಚಾಯ್ತಿಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳ ಬೇಜವಾಬ್ದಾರಿತನ.

ಈಗಾಗಲೇ ಹೊಸನಗರ ತಾಲೂಕಿನ ಜನರು ಕಾರ್ಪೊರೇಷನ್ ಇವರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಕಲುಷಿತ ನೀರು ಸೇವನೆಯಿಂದ ಈಗಾಗಲೇ ಮಕ್ಕಳು ,ವಯೋ ವೃದ್ಧರು ಸೇರಿದಂತೆ ಅನೇಕರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಪ್ರತಿನಿತ್ಯ ಕುಡಿಯಲು ಯೋಗ್ಯವಾದ ನೀರನ್ನು ಕನಿಷ್ಠ ಎರಡು ತಾಸುವಾದರೂ ನೀಡಿ ಎಂದು ಕಾರ್ಪೊರೇಷನ್ ಅಧಿಕಾರಿಗಳಲ್ಲಿ ಹೊಸನಗರದ ಜನತೆ ಮನವಿ ಮಾಡಿಕೊಳ್ಳುತ್ತಿದ್ದಾರೆ ಆದರೆ ಕಾರ್ಪೊರೇಷನ್ ಇವರು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಮತ್ತೆ, ಮತ್ತೆ ಕಲುಷಿತ ನೀರನ್ನು ಪೂರೈಕೆ ಮಾಡುತ್ತಿದ್ದಾರೆ.

ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ನೂತನ ಶಾಸಕರೇ ನಿಮ್ಮ ಕ್ಷೇತ್ರದ ಜನರಿಗೆ ಸ್ಥಳೀಯ ಕಾರ್ಪೊರೇಷನ್ ಇವರಿಂದ ಪ್ರತಿದಿನ ಕಲುಷಿತ ನೀರನ್ನು ಪೂರೈಕೆ ಮಾಡುತ್ತಿದ್ದಾರೆ. ಅಲ್ಲದೆ ನಗರದ ಜನರಿಗೆ ನೀರನ್ನು ಬಳಸಿಕೊಳ್ಳಲು ಕೇವಲ ಅರ್ಧ ಗಂಟೆ ಮಾತ್ರ ಬಿಡುತ್ತಿದ್ದಾರೆ ಎಂಬ ಆರೋಪವಿದೆ. ಕೂಡಲೇ ನೀವು ನಿಮಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿ. ಜನರಿಗೆ ಕುಡಿಯಲು ಯೋಗ್ಯವಾದ ನೀರನ್ನ ಪೂರೈಕೆ ಮಾಡುವಂತೆ ಆದೇಶ ಮಾಡಿ. ಮತದಾರರು ನಿಮ್ಮ ಮೇಲೆ ನಂಬಿಕೆ ಇಟ್ಟು ಮತ ನೀಡಿದ್ದಾರೆ ಅವರ ನಂಬಿಕೆಯನ್ನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಮ್ಮ ಜವಾಬ್ದಾರಿಯನ್ನ ನಿಭಾಯಿಸಿ.

Post a Comment

0 Comments