ಮಂದಾರ ನ್ಯೂಸ್, ದಾವಣಗೆರೆ : ನಮ್ಮನ್ನು ನಾವು ಸದಾ ಚುರುಕಾಗಿಡಲು, ಸದಾ ಮಗುವಿನ ಮನಸ್ಸನ್ನು ಜಾಗೃತಗೊಳಿಸಲು ಯೋಗ ಕೂಡ ಸಹಕಾರಿ. ದಿನ ನಿತ್ಯದ ಯೋಗದಿಂದ ಆರೋಗ್ಯಕರ ಬದುಕಿನ ಯೋಗಾ ಕಾಣಬಹುದು ಎಂದು ತಪೋವನ ಸಮೂಹ ಸಂಸ್ಥೆಯ ಛೇರ್ಮನ್ ಡಾ. ಶಶಿಕುಮಾರ್ ವಿ. ಮೆಹರ್ವಾಡೆ ಅಭಿಪ್ರಾಯಪಟ್ಟರು.
ಅವರು, ಬುಧವಾರ ಶ್ರೀ ಶಕ್ತಿ ಅಸೋಸಿಯೇಷನ್ (ರಿ) ತಪೋವನ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ದಾವಣಗೆರೆ, ತಪೋವನ ಅಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ತಪೋವನ ಇನ್ಸಿಟ್ಯೂಟ್ ಆಫ್ ನರ್ಸಿಂಗ್ ಇವರುಗಳ ಸಂಯುಕ್ತಾಶ್ರಯದಲ್ಲಿ ಹರಿಹರ ಸಮೀಪದ ದೊಡ್ಡಬಾತಿಯ ತಪೋವನದಲ್ಲಿ ಯೋಗ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಾಲ್ಯದಲ್ಲಿದ್ದಂತಹ ಖುಷಿ ಪ್ರಸ್ತುತ ದೊಡ್ಡವರಾದ ಮೇಲೆ ಕಾಣಲಾಗುತ್ತಿಲ್ಲ. ಇದಕ್ಕೆ ಸದಾ ಮಗುವಿನ ಮನಸ್ಸನ್ನು ಜಾಗೃತಗೊಂಡಿಲ್ಲ. ನಿತ್ಯ ಚಟುವಟಿಕೆಗಳಲ್ಲಿ ಚೈತನ್ಯ ಮರೆಯಾಗಿದೆ.
ದಿನನಿತ್ಯ ಯೋಗಾಭ್ಯಾಸದಿಂದ ನಮ್ಮಲ್ಲಿ ದೈಹಿಕ, ಮಾನಸಿಕ ಚೈತನ್ಯ ಮೂಡುವುದಲ್ಲದೇ, ನಿತ್ಯದ ಚಟುವಟಿಕೆಗಳು ಲವ ಲವಿಕೆಯಿಂದ ಸರಾಗವಾಗಿ ಸಾಗಲು ಶಕ್ತಿ ಬರಲಿದೆ ಎಂದು ತಿಳಿಸಿದರು.
ನಿತ್ಯದ ಬದುಕಿನಲ್ಲಿ ಸದಾ ಚುರುಕುತನ, ಸಕ್ರಿಯತೆ ಕಾಣಲು ನಿತ್ಯವೂ ಯೋಗಾಭ್ಯಾಸದಲ್ಲಿ ತೊಡಗಿಕೊಳ್ಳಬೇಕು. ಕೇವಲ ಯೋಗದ ದಿನದ ಆಚರಣೆಗಷ್ಟೇ ಸೀಮಿತವಾಗದೇ ನಮ್ಮ ದಿನನಿತ್ಯ ಬದುಕಿನಲ್ಲಿ ಯೋಗಾಭ್ಯಾಸವನ್ನು ಒಂದು ಭಾಗವಾಗಿಸಿಕೊಂಡು ಆರೋಗ್ಯವಂತರಾಗಿ ಸದೃಢರಾಗೋಣ. ಪ್ರಜೆಗಳು ಸದೃಢರಾಗಿದ್ದರೆ ದೇಶವು ಸದೃಢತೆ ಕಾಣಲಿದೆ ಎಂದು ಹೇಳಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆ ಮಟ್ಟದಲ್ಲಿ ಯೋಗಾಭ್ಯಾಸವನ್ನು ಕೈಗೊಂಡಿದ್ದು, ೧೨೦ ದೇಶದ ಪ್ರಮುಖರ ಜೊತೆಗೂಡಿ ಯೋಗಾಭ್ಯಾಸ ಮಾಡುತ್ತಿರುವುದು ನಮ್ಮ ದೇಶಕ್ಕೆ ದೊಡ್ಡ ಗೌರವವಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಮಾತನಾಡಿ, ಪ್ರಯತ್ನಕ್ಕೆ, ಸಾಧಕರಿಗೆ ಯಾವುದೇ ಅಡ್ಡಿ ಬಾರದು ಎಂಬುದಕ್ಕೆ ಶಶಿಕುಮಾರ್ ವಿ. ಮೆಹರ್ವಾಡೆ ಅವರು ತಪೋವನ ಸಂಸ್ಥೆ ಕಟ್ಟಿ ಸಾಧನೆ ಮಾಡಿದ್ದಾರೆ. ರಾಜ್ಯದಲ್ಲಿ ಹೆಸರಾಂತ ಸಂಸ್ಥೆಯಾಗಿ ತಪೋವನ ಬೆಳೆದಿದ್ದು, ಇದು ನನಗೂ ಹೆಮ್ಮೆ ಅನಿಸಿದೆ. ಈ ಸಂಸ್ಥೆಗೆ ನಾನು ವಿಶ್ವಾಸದಲ್ಲಿ ಪಾಲುದಾರ ಎಂದರು.
ಮೆಹರ್ವಾಡೆ ಅವರು ನನಗೆ ಆತ್ಮೀಯ ಗೆಳೆಯರು. ಅವರ ಆಹ್ವಾನಕ್ಕೆ ಮನ್ನಣೆ ನೀಡಿ ಅಭಿಮಾನ ಪೂರ್ವಕವಾಗಿ ಈ ಯೋಗದಲ್ಲಿ ಭಾಗವಹಿಸಿದ್ದು, ಖುಷಿ ತಂದಿದೆ. ತಪೋವನ ಸಂಸ್ಥೆ ಕಟ್ಟಿ ಇಂದಿಗೆ ೯ ವರ್ಷಗಳೇ ಕಳೆದಿವೆ. ಇಂದು ೯ನೇ ಅಂತರಾಷ್ಟಿçÃಯ ಯೋಗ ದಿನಾಚರಣೆಯಲ್ಲಿ ನಾನು ಭಾಗವಹಿಸಿರುವುದು ನನಗೆ ಯೋಗ ಮತ್ತು ಸುಯೋಗ. ನಾನು ಯೋಗ ಮಾಡಿರಲಿಲ್ಲ. ದಿನನಿತ್ಯ ಯೋಗಾಭ್ಯಾಸಕ್ಕೆ ಹೋಗ ಬೇಕೆಂದುಕೊAಡಿದ್ದರೂ ರಾಜಕೀಯ ಜೀವನದ ಒತ್ತಡದಿಂದಾಗಿ ಸಾಧ್ಯವಾಗಿರಲಿಲ್ಲ. ಈ ಯೋಗಾಭ್ಯಾಸದಲ್ಲಿ ಪಾಲ್ಗೊಂಡಿರುವುದು ನನಗೆ ಪ್ರೇರಣೆಯಾಗಿದೆ ಎಂದರು.
ಪ್ರಸ್ತುತ ಯೋಗವು ನಗರ ಮಟ್ಟದ ಜನರಿಗೆ ಬಹಳ ಅವಶ್ಯವಿದೆ. ಗ್ರಾಮೀಣ ಮಟ್ಟದಲ್ಲಿ ಜನರು ಹೊಲ-ಮನೆ ಕೆಲಸ ಮಾಡುವಾಗ ಒಂದಲ್ಲ ಒಂದು ರೀತಿಯಾಗಿ ಯೋಗದ ವಿವಿಧ ಆಸನಗಳ ಮಾಡುವುದು ಸಾಮಾನ್ಯ. ಗ್ರಾಮೀಣ ಭಾಗದ ಜನರ ಆರೋಗ್ಯವು ನಗರ ಮಟ್ಟದ ಜನರ ಆರೋಗ್ಯಕ್ಕಿಂತ ಉತ್ತಮವಾಗಿದೆ. ಹಾಗಾಗಿ ಅವರ ಜೀವನದಲ್ಲಿ ಯೋಗ ಒಂದು ಭಾಗವಾಗಿ ಬೆರತಿದ್ದು, ದೈಹಿಕ, ಮಾನಸಿಕವಾಗಿ ಸ್ವಸ್ಥö್ಯ ಆರೋಗ್ಯದ ಸುಯೋಗವು ಸಿಗುತ್ತಿದೆ ಎಂದರು.
ಯೋಗ ಪ್ರಸ್ತುತ ಜಗತ್ತನ್ನು ಗೆದ್ದಿದೆ. ಜಗತ್ತೇ ಯೋಗದಲ್ಲಿ ತೊಡಗಿದೆ. ಯೋಗವನ್ನು ಜಗತ್ತಿಗೇ ಪರಿಚಯಿಸಿ ಅದನ್ನು ಆಚರಣೆಗೆ ತರುವ ಮೂಲಕ ನಮ್ಮ ದೇಶದ ಪ್ರಧಾನಮಂತ್ರಿ ಅವರು ಯೋಗದ ಮಹತ್ವ ತಿಳಿಸಿ ಆರೋಗ್ಯಕರ ಬದುಕನ್ನು ತಿಳಿಸಿಕೊಟ್ಟಿರುವುದು ಸಂತಸದ ವಿಚಾರ ಎಂದು ಪ್ರಶಂಶಿಸಿದರು.
ಪ್ರಕೃತಿಯ ವಿರುದ್ಧವಾಗಿ ನಾವು ನಡೆದುಕೊಳ್ಳುತ್ತಿರುವುದರಿಂದ ನೆಮ್ಮದಿ ಕಾಣಲು ಸಾಧ್ಯವಾಗುತ್ತಿಲ್ಲ. ಪ್ರಕೃತಿಗೆ ಪೂರಕವಾಗಿ ನಡೆದರೆ ನೆಮ್ಮದಿಯ ಬದುಕನ್ನು ಕಾಣಲು ಸಾಧ್ಯ. ಪ್ರಕೃತಿಯ ಜೊತೆಯಲ್ಲಿ ನಮ್ಮ ಬದುಕು ಸಾಗಿಸುತ್ತಾ ಹಿಂದಿನ ಸಾಂಪ್ರದಾಯಿಕ ಜೀವನ ಶೈಲಿಯ ಇತಿಹಾಸ ಮರುಕಳಿಸುವಂತಾಗಬೇಕು. ಹಿತ, ಮಿತದ ಜತೆಗೆ ಖುತುವಿಗೆ (ಕಾಲ ಕಾಲಕ್ಕೆ ತಕ್ಕಂತೆ) ಅನುಗುಣವಾಗಿ ನಮ್ಮ ಆಹಾರ ಪದ್ಧತಿ ಅನುಸರಿಸಿದರೆ ಆಯಸ್ಸು, ಆರೋಗ್ಯ ವೃದ್ಧಿಸುವುದು ಎಂದರು.
ಮುಖ್ಯ ಅತಿಥಿಗಳಾಗಿ ಸೊರಬ ತಾಲ್ಲೂಕಿನ ಧ್ವನ್ವಂತರಿ ಯೋಗ ಮಂದಿರದ ಯೋಗ ಮತ್ತು ರೇಖಿ ಚಿಕಿತ್ಸಕರಾದ ವಿಶ್ವನಾಥ್ ಹರೀಶಿ, ದೊಡ್ಡಬಾತಿ ಗ್ರಾ.ಪಂ ಅಧ್ಯಕ್ಷ ಕೆ.ಜಿ. ಉಮೇಶ್, ಮಂದಾರ ಪಬ್ಲಿಕ್ ಸ್ಕೂಲ್ ಮುಖ್ಯೋಪಾಧ್ಯಾಯ ಪರಶುರಾಮ್ ಮಾತನಾಡಿದರು.
ಹರಿಹರ ಡಿಆರ್‌ಎಂ ಕಾಲೇಜಿನ ಪ್ರಾಂಶುಪಾಲರಾದ ರಾಜ್‌ಶೇಖರ್, ಆರ್. ಶ್ರೀನಿವಾಸ್, ಜಯಪ್ಪ, ರಾಜಶೇಖರ್ ಪಟೇಲ್, ಪ್ರಜಾಪಿತ ಬ್ರಹ್ಮಕುಮಾರಿ ಸಂಚಾರಕರು ಆದ ಗೌರಕ್ಕ ಸೇರಿದಂತೆ ಇತರರು ಇದ್ದರು.
ಯೋಗಾಚರಣೆ ಯಶಸ್ವಿ : ಯೋಗ ದಿನಾಚರಣೆ ಪ್ರಯುಕ್ತ ನಡೆದ ಯೋಗಾಭ್ಯಾಸದಲ್ಲಿ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಸಹ ತಪೋವನ ಸಮೂಹ ಸಂಸ್ಥೆಯ ಛೇರ್ಮನ್ ಡಾ. ಶಶಿಕುಮಾರ್ ವಿ. ಮೆಹರ್ವಾಡೆ ಅವರೊಂದಿಗೆ ಯೋಗದ ವಿವಿಧ ಆಸನಗಳ ಮಾಡಿದರು. ಇವರ ಜೊತೆಗೇ ತಪೋವನ ಸಮೂಹ ಸಂಸ್ಥೆಯ ಪ್ರಾಚಾರ್ಯರುಗಳು, ಬೋದಕರು, ಪದಾಧಿಕಾರಿಗಳು, ನೌಕರರು ಹಾಗೂ ಕಾಲೇಜಿನ ವಿದ್ಯಾರ್ಥಿಗಳಷ್ಟೇ ಅಲ್ಲದೇ ದೊಡ್ಡಬಾತಿಯ ಸರ್ಕಾರಿ ಶಾಲೆ, ಪದವಿ ಪೂರ್ವ ಕಾಲೇಜು ಸೇರಿ ಸುಮಾರು ೧೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಯೋಗಾಭ್ಯಾಸದಲ್ಲಿ ಪಾಲ್ಗೊಂಡು ಉಪಯುಕ್ತತೆ ಪಡೆದುಕೊಂಡರು.
0 Comments