ಮಂದಾರ ನ್ಯೂಸ್,ಸಾಗರ: ಅದೇನೋ ಗೊತ್ತಿಲ್ಲ ಕಣ್ರೀ. ರಾಜಕಾರಣದಲ್ಲಿರುವರ ಮಾತು ಬಾರಿ ಚಂದವಾಗಿರುತ್ತದೆ .ಅದು ಯಾವ ಮಹಾನುಭಾವ ಜಾದುಗಾರನಿಂದ ಮಾತು ಕಲಿತಿರುತ್ತಾರೋ ಗೊತ್ತಿಲ್ಲ.
ಮಾತಿನಲ್ಲೇ ತಮ್ಮ ತಮ್ಮ ಗ್ರಾಮಗಳನ್ನ ಇಂದಿರಾ- ಚಂದಿರವನ್ನಾಗಿ ಮಾಡುತ್ತಾರೆ. ಸ್ವರ್ಗವನ್ನೇ ಭೂಮಿಗೆ ಕ್ಷಣಮಾತ್ರದಲ್ಲಿ ಇಳಿಸಿಬಿಡುತ್ತಾರೆ. ಮತದಾರರು ಇವರ ಮಾತಿನ ಮೋಡಿಗೆ ಮರುಳಾಗಿ ಚಪ್ಪಾಳೆ ತಟ್ಟುತ್ತಾರೆ.
ಒಮ್ಮೊಮ್ಮೆ ಈ ಚಪ್ಪಾಳೆಗಳ ಸದ್ದಿನ ಹಿಂದೆ ಇವರೇ ಕರೆದುಕೊಂಡು ಬಂದ ಜನರೇ ಎಂಬ ಅನುಮಾನ ಕಾಡುತ್ತದೆ.
ಕಳೆದ ಐದು ವರ್ಷದಿಂದ ಆನಂದಪುರ ಜಿಲ್ಲಾ ಪಂಚಾಯತಿ ಅಭಿವೃದ್ಧಿಗೆ ಶ್ರಮ ವಹಿಸಿದವರು ಇಂದು ನೂತನ ಶಾಸಕರಾದ ಬೇಳೂರು ಗೋಪಾಲಕೃಷ್ಣ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವ ಮೂಲಕ ತಮ್ಮ ಅಸ್ತಿತ್ವವನ್ನ ಉಳಿಸಿಕೊಳ್ಳಲು ಪ್ರಯತ್ನವನ್ನು ಮಾಡಿದರು.
ಕಳೆದ ಎರಡು ದಿನಗಳ ಹಿಂದೆ ನೂತನ ಶಾಸಕರಾದ ಬೇಳೂರು ಗೋಪಾಲಕೃಷ್ಣ ಅವರು ಚುನಾವಣೆ ಸಂದರ್ಭದಲ್ಲಿ ಶ್ರಮವಹಿಸಿ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಿದ ಕಾರ್ಯಕರ್ತರಿಗೆ ಅಭಿನಂದನೆಯನ್ನು ಸಲ್ಲಿಸುವ ಕಾರ್ಯಕ್ರಮವನ್ನು ತ್ಯಾಗರ್ತಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದರು.
ಈ ಅಭಿನಂದನಾ ಸಮಾರಂಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶ್ರೀಮತಿ ಅನಿತಾ ಕುಮಾರಿ ಇವರು ವೇದಿಕೆಯನ್ನ ಅಲಂಕರಿಸಿದ್ದರು.
ಅತಿಥಿಯಾಗಿ ಭಾಗವಹಿಸಿದ ಅನಿತಾ ಕುಮಾರಿ ಇವರು ತಮ್ಮ ಭಾಷಣದಲ್ಲಿ ತ್ಯಾಗರ್ತಿ ಗ್ರಾಮದ ಅಗಸನ ಕೆರೆಯ ಅಭಿವೃದ್ಧಿಯ ಬಗ್ಗೆ ದೊಡ್ಡ, ದೊಡ್ಡ ಭಾಷಣವನ್ನು ಮಾಡಿದರು. ಕೆರೆ ಅಭಿವೃದ್ಧಿ ಮಾಡುವುದು ನಮ್ಮ ಮೊದಲ ಆದ್ಯತೆ ಎಂಬ ರೀತಿಯಲ್ಲಿ ಜನರನ್ನ ನಂಬಿಸಲು ಹೊರಟರು. ಆದರೆ ಇವರ ಭಾಷಣದಲ್ಲಿ ಕೆರೆ ಒತ್ತುವರಿಯ ಬಗ್ಗೆ ಧ್ವನಿ ಬರಲೇ ಇಲ್ಲ.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರೇ ತ್ಯಾಗರ್ತಿ ಪಂಚಾಯ್ತಿ ವ್ಯಾಪ್ತಿಯಲ್ಲಿ ದೇವರ ಅಭಿವೃದ್ಧಿಯ ಹೆಸರಿನಲ್ಲಿ ಸರ್ಕಾರಿ ಕೆರೆಗಳನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಇದು ನಿಮ್ಮ ಗಮನಕ್ಕೂ ಬಂದಿದೆ. ಏಕೆ ಈ ಸರ್ಕಾರಿ ಜಾಗದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದರ ಬಗ್ಗೆ ತಾವು ಏಕೆ ತಮ್ಮ ಭಾಷಣದಲ್ಲಿ ದೊಡ್ಡ ಮಟ್ಟದ ಧ್ವನಿ ಎತ್ತಲಿಲ್ಲ? ಅಗಸನಕೆರೆ ಅಭಿವೃದ್ಧಿಯ ಬಗ್ಗೆ ಮಾತನಾಡುವ ನೀವು ಈ ಸರ್ಕಾರಿ ಕೆರೆ ಒತ್ತುವರಿಯ ಬಗ್ಗೆಯೂ ಮಾತನಾಡಬೇಕು ಅಲ್ಲವೇ? ಉಳಿದ ಕೆರೆಗಳ ಅಭಿವೃದ್ಧಿಯು ಆಗಬೇಕು ಅಲ್ಲವೇ? ಕೇವಲ ಆಗಸನ ಕೆರೆಗೆ ಬಂದು ಜಾನುವಾರಗಳು ನೀರು ಕುಡಿಯುತ್ತಾವೆ ಎಂದು ಭಾವಿಸಬೇಡಿ. ಉಳಿದ ಕೆರೆಗಳಲ್ಲೂ ಜಾನುವಾರುಗಳು ಮತ್ತು ಜನರು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಸಾಧ್ಯವಿದೆ.
ಕೆರೆಗಳ ಅಭಿವೃದ್ಧಿ ಎಂದ ಮೇಲೆ ಪಂಚಾಯತಿ ವ್ಯಾಪ್ತಿಯ ಎಲ್ಲಾ ಕೆರೆಗಳು ಅಭಿವೃದ್ಧಿಯಾಗಬೇಕು. ಅದಕ್ಕೂ ಮೊದಲು ಕೆರೆಗಳ ರಕ್ಷಣೆ ಆಗಬೇಕು. ಕೆರೆಗಳ ರಕ್ಷಣೆಯಾದಾಗ ಮಾತ್ರ ಅವುಗಳನ್ನು ಅಭಿವೃದ್ಧಿ ಮಾಡಲು ಸಾಧ್ಯ ಎಂಬ ಅರಿವು ನಿಮ್ಮಲ್ಲಿರಬೇಕು. ಅದು ಬಿಟ್ಟು ವೇದಿಕೆ ಸಿಕ್ಕಿದೆ, ಕೈಯಲ್ಲಿ ಮೈಕ್ ಇದೆ ,ಕೇಳಲು ಜನರಿದ್ದಾರೆ ಎಂದು ಮಾತುಗಳನ್ನಾಡುವುದಲ್ಲ. ಮಾತಿನಲ್ಲಿ ಸ್ಪಷ್ಟತೆ ಇರಬೇಕು, ಮನಸ್ಸಿನಲ್ಲಿ ಅಭಿವೃದ್ಧಿಯ ಚಿಂತನೆ ಇರಬೇಕು, ಇನ್ನೊಬ್ಬರನ್ನು ಮೆಚ್ಚಿಸುವ ಉದ್ದೇಶವಿರಬಾರದು. ಇಂಥಹ ಅಂದ- ಚಂದದ ಮಾತುಗಳನ್ನ ಜನರು ಈ ಹಿಂದೆ ಅರ್ಥ ಮಾಡಿಕೊಂಡಿದ್ದಾರೆ. ಮುಂದಿನ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ನೀವು ಯಾವುದಾದರೂ ಒಂದು ಕ್ಷೇತ್ರದಿಂದ ಸ್ಪರ್ಧಿಸಿದರು ಮತದಾರರು ನಿಮಗೆ ತಕ್ಕ ಪಾಠವನ್ನು ಕಲಿಸುತ್ತಾರೆ. ಏಕೆಂದರೆ ಆನಂದಪುರ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ನಿಮ್ಮ ಅಭಿವೃದ್ಧಿಯ ಮಂತ್ರ ಏನು ಎಂಬುದು ಸಾಗರ ವಿಧಾನಸಭಾ ಕ್ಷೇತ್ರದ ಮತದಾರರಿಗೆ ತಿಳಿದಿದೆ.
ಮೊದಲು ಅಗಸನ ಕೆರೆ ಅಭಿವೃದ್ಧಿ ಮಾಡುವ ಮಾತನ್ನು ಬದಿಗಿಟ್ಟು ಸರ್ವೇ ನಂಬರ್ 70 ಸರಿಸುಮಾರು 13 ಎಕರೆ ಕೆರೆ ಒತ್ತುವರಿಯ ಬಗ್ಗೆ ಮಾತನಾಡಿ. ಗ್ರಾಮದಲ್ಲಿರುವ ಉಳಿದ ಕೆರೆಗಳನ್ನ ಸಂರಕ್ಷಿಸುವತ್ತ ಗಮನಹರಿಸಿ.
ತ್ಯಾಗರ್ತಿ ಗ್ರಾಮದ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಯಲ್ಲಿ ನಡೆದ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಮಾತು ಸಾರ್ವಜನಿಕರ ವಲಯದಿಂದ ಕೇಳಿ ಬಂದಿದೆ. ಉಪಯೋಗಕ್ಕೆ ಬಾರದ ಜಾಗದಲ್ಲಿ ಕಳಪೆ ಕಾಮಗಾರಿಯ ಮೂಲಕ ಆಟೋ ನಿಲ್ದಾಣ ನಿರ್ಮಾಣವಾಗಿದೆ. ತ್ಯಾಗರ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜಾಗ ಪ್ರಭಾವಿ ವ್ಯಕ್ತಿಗಳಿಂದ ಒತ್ತುವರಿಯಾಗಿದೆ. ಸರ್ಕಾರಿ ಕೆರೆಯ ಸರ್ವೇ ನಂಬರ್ 70ರ 13 ಎಕರೆ ಪ್ರದೇಶದಲ್ಲಿ ದೇವರ ಹೆಸರಿನಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಗಳು, ರಾಜಾರೋಶವಾಗಿ ನಡೆಯುತ್ತಿದೆ. ಕಲ್ಲೇಶ್ವರ ದೇವಸ್ಥಾನ ಮತ್ತು ಜನಾರ್ಧನ ಸ್ವಾಮಿ ದೇವಸ್ಥಾನದ ವಿಚಾರದಲ್ಲಿ ಪ್ರಭಾವಿ ವ್ಯಕ್ತಿಗಳ ಪ್ರವೇಶದಿಂದ ದೇವಸ್ಥಾನಗಳು ಭಕ್ತರ ಆಗಮನವಿಲ್ಲದೆ ಸೊರಗುತ್ತಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯ ಜನರಿಗೆ ಅಗತ್ಯ ಮೂಲಭೂತ ಸೌಲಭ್ಯಗಳು ಮರೀಚಿಕೆಯಾಗಿದೆ. ಗ್ರಾಮ ಪಂಚಾಯತಿಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಾಗುತ್ತಿದೆ. ಗ್ರಾಮದ ಅದೆಷ್ಟೋ ರಸ್ತೆಗಳು ಕಳಪೆ ಕಾಮಗಾರಿಯಿಂದ ಗುಂಡಿ ಬಿದ್ದಿದ್ದಾವೆ. ಚರಂಡಿಗಳಲ್ಲಿ ಸರಗವಾಗಿ ನೀರು ಹರಿಯುತ್ತಿಲ್ಲ. ಗ್ರಾಮದ ಜನರಿಗೆ ಇದುವರೆಗೂ ಸಮರ್ಪಕವಾದ ನೀರಿನ ಪೂರೈಕೆ ಆಗುತ್ತಿಲ್ಲ. ಸಮರ್ಪಕವಾದ ವಿದ್ಯುತ್ತಿನ ವ್ಯವಸ್ಥೆ ಇಲ್ಲ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಯೋಜನೆಯನ್ನ ರೂಪಿಸಿಲ್ಲ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರವಾಗಿದೆ. ಗ್ರಾಮದ ಸರ್ಕಾರಿ ಶಾಲೆಗಳು ಸುಣ್ಣ- ಬಣ್ಣವಿಲ್ಲದೆ ಸೊರಗುತ್ತಿವೆ. ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಅಭಿವೃದ್ಧಿಗೆ ಕೈಜೋಡಿಸಬೇಕಿದೆ. ಆಸ್ಪತ್ರೆಯ ವೈದ್ಯರು ಸೇರಿದಂತೆ ಸಿಬ್ಬಂದಿಗಳಿಗೆ ಅಗತ್ಯ ವಸತಿಯ ಸೌಲಭ್ಯ ಆಗಬೇಕಾಗಿದೆ. ವಸತಿ ನಿಲಯದ ವಿದ್ಯಾರ್ಥಿಗಳಿಗೆ ಸಮರ್ಪಕವಾದ ಮೂಲಭೂತ ಸೌಲಭ್ಯ ಒದಗಿಸಬೇಕಾಗಿದೆ. ಆಟೋ ಮಾಲೀಕರು ಮತ್ತು ಚಾಲಕರಿಗೆ ಉತ್ತಮ ಆಟೋ ನಿಲ್ದಾಣ ವಾಗಬೇಕಾಗಿದೆ. ಪರ ಊರಿನಿಂದ ಬರುವ ಪ್ರಯಾಣಿಕರಿಗೆ ಬಸ್ ನಿಲ್ದಾಣದ ಅವಶ್ಯಕತೆ ಇದೆ. ಹೀಗೆ 10 ಹಲವಾರು ಸಮಸ್ಯೆಗಳಿಂದ ತ್ಯಾಗರ್ತಿ ಗ್ರಾಮ ಹಿಂದೆ ಉಳಿದಿದೆ.ಗ್ರಾಮದ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸಿ
0 Comments