ದಾವಣಗೆರೆ ಲೋಕಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಬಸವರಾಜ್ ಕಣಕ್ಕೆ!?

ಮಂದಾರ ನ್ಯೂಸ್, ದಾವಣಗೆರೆ: 2024ರಲ್ಲಿ ದೇಶಾದ್ಯಂತ ಲೋಕಸಭಾ ಚುನಾವಣೆ ನಡೆಯಲಿದೆ. ಈಗಾಗಲೇ ವಿವಿಧ ಪಕ್ಷದ ನಾಯಕರು ಚುನಾವಣೆ ಗೆಲ್ಲುವ ಉದ್ದೇಶದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ.

ಮತದಾರರ ಮನವನ್ನು ಗೆಲ್ಲಲು ವಿವಿಧ ರೀತಿಯ ಕಸರತ್ತುಗಳನ್ನು ಪಕ್ಷದ ಅಭ್ಯರ್ಥಿಗಳು ಶುರು ಮಾಡಿದ್ದಾರೆ.

ಎಲ್ಲಾ ಪಕ್ಷದ ಅಭ್ಯರ್ಥಿಗಳಿಗಿಂತ ಮುಂಚಿತವಾಗಿ ಆಮ್ ಆದ್ಮಿ ಪಕ್ಷ ಈಗಾಗಲೇ ರಾಜ್ಯದಲ್ಲಿ ತನ್ನ ಪ್ರಚಾರ ಕಾರ್ಯವನ್ನು ಆರಂಭಿಸಿದೆ ಎಂದೇ ಹೇಳಬಹುದು.

ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ ಹರಿಹರ ತಾಲೂಕ ಘಟಕದ ಅಧ್ಯಕ್ಷರಾದ ಬಸವರಾಜ್ ಇವರು ಕಣಕ್ಕಿಳಿಯುವ ಇಚ್ಛೆಯನ್ನ ವ್ಯಕ್ತಪಡಿಸಿದ್ದು ತಾವು ಆಮ್ ಆದ್ಮಿ ಪಕ್ಷದ ಪ್ರಬಲ ಆಕಾಂಕ್ಷಿ ಎಂದು ನಮ್ಮ ಮಾಧ್ಯಮ ಪ್ರತಿನಿಧಿಯೊಂದಿಗೆ ಹಂಚಿಕೊಂಡರು.

ವಿಧಾನಸಭಾ ಚುನಾವಣೆಯಲ್ಲಿ ಬಸವರಾಜ್ ಹಲಸಬಾಳು ಇವರು ಪಕ್ಷ ಸಂಘಟನೆಯಲ್ಲಿ ಅತ್ಯಂತ ಪ್ರಾಮಾಣಿಕವಾಗಿ ತಮ್ಮ ಜವಾಬ್ದಾರಿಯನ್ನ ನಿಭಾಯಿಸಿದ್ದು ಆಮ್ ಆದ್ಮಿ ಪಕ್ಷದ ನಾಯಕರ ಗಮನವನ್ನು ಸೆಳೆದಿದ್ದಾರೆ.

ಈಗಾಗಲೇ ಬಸವರಾಜ್ ಹಳಸಬಾಳು ಇವರಿಗೆ ಹೊನ್ನಾಳಿ- ನ್ಯಾಮತಿ, ಚನ್ನಗಿರಿ ಹಾಗೂ ದಾವಣಗೆರೆ ಭಾಗದ ಜನರೊಡನೆ ಉತ್ತಮವಾದ ಒಡನಾಟವಿದೆ.

ಪಕ್ಷ ಸಂಘಟನೆಯಲ್ಲಿ ಅತ್ಯಂತ ಚತುರತೆಯಿಂದ ಓಡಾಡುವ ಬಸವರಾಜ್ ಹಳಸಬಾಳು ಅವರು ಪ್ರಮುಖ ಪಕ್ಷದ ಅಭ್ಯರ್ಥಿಗಳಿಗೆ ಪ್ರಬಲ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಆಮ್ ಆದ್ಮಿ ಪಕ್ಷದ ದೆಹಲಿಯ ನಾಯಕರೊಂದಿಗೆ ಬಸವರಾಜ್ ಅವರು ನಿರಂತರ ಸಂಪರ್ಕದಲ್ಲಿದ್ದು ಮುಂದಿನ ಚುನಾವಣೆಯ ದೃಷ್ಟಿಯಿಂದ ಈಗಿನಿಂದಲೇ ತಮ್ಮ ಪ್ರಚಾರ ಕಾರ್ಯವನ್ನ ಶುರು ಹಚ್ಚಿಕೊಂಡಿದ್ದಾರೆ.

2024ರ ದಾವಣಗೆರೆ ಲೋಕಸಭಾ ಕ್ಷೇತ್ರದ  ಚುನಾವಣೆ ಅತ್ಯಂತ ರಂಗೆರುವುದರಲ್ಲಿ ಯಾವುದೇ ಅನುಮಾನವಿಲ್ಲ.

Post a Comment

0 Comments