ಉಚಿತ ಬಸ್ ಪ್ರಯಾಣ. ಆಟೋ ,ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರು ಕಂಗಾಲು.!!

ಮಂದಾರ ನ್ಯೂಸ್, ಹರಿಹರ: ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಮೊದಲ ಗ್ಯಾರಂಟಿ ಉಚಿತ ಬಸ್ ಪ್ರಯಾಣ ಶಕ್ತಿ ಯೋಜನೆಗೆ ಕಳೆದ ಭಾನುವಾರ 11ನೇ ತಾರೀಕು ರಾಜ್ಯಾದ್ಯಂತ ಚಾಲನೆ ನೀಡಲಾಯಿತು.

ರಾಜ್ಯ ಸರ್ಕಾರದ ಆರ್ಥಿಕ ಬೊಕ್ಕಸಕ್ಕೆ ನಷ್ಟವಾದರೂ ಮತದಾರರಿಗೆ ತಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಸಲುವಾಗಿ ಗ್ಯಾರೆಂಟಿ ಯೋಜನೆಯನ್ನ ಜಾರಿಗೆ ತರುವ ಅನಿವಾರ್ಯತೆ ಒದಗಿ ಬಂದಿತ್ತು.

ರಾಜ್ಯ ಸರ್ಕಾರದ ಉಚಿತ ಬಸ್ ಪ್ರಯಾಣ ಶಕ್ತಿ ಯೋಜನೆಯಿಂದ ರಾಜ್ಯಾದ್ಯಂತ   ಇರುವ ಆಟೋ ,ಟ್ಯಾಕ್ಸಿ ಸೇರಿದಂತೆ ಖಾಸಗಿ ಬಸ್ ಮಾಲೀಕರು ಹಾಗೂ ಚಾಲಕರ ಬದುಕನ್ನೇ ಕಸಿದುಕೊಂಡಿದೆ.

ದುಡಿಮೆಯನ್ನು ನಂಬಿ ಬದುಕುತ್ತಿದ್ದ ಅದೆಷ್ಟೋ ಕುಟುಂಬಗಳು ಉಚಿತ ಯೋಜನೆಯಿಂದ ಬೀದಿ ಪಾಲಾಗಿದೆ. ಸಾಲ ಸೋಲ ಮಾಡಿ ತಮ್ಮ ಬದುಕನ್ನ ಕಟ್ಟಿಕೊಳ್ಳುವ ಸಲುವಾಗಿ ತಮ್ಮ ಕುಟುಂಬವನ್ನು ನಿರ್ವಹಣೆ ಮಾಡುವ ಉದ್ದೇಶದಿಂದ ಆಟೋ ,ಟ್ಯಾಕ್ಸಿ ಅಥವಾ ಇನ್ನಿತರ ಬಾಡಿಗೆ ವಾಹನವನ್ನು ಪಡೆದು ಜೀವನ ಸಾಗಿಸುತ್ತಿದ್ದ ಬಡ ಹಾಗೂ ಮಾಧ್ಯಮ ಜನರ ಜೀವನವನ್ನೇ ಈ ಉಚಿತ ಯೋಜನೆ ಕಸಿದುಕೊಂಡಿದೆ.

ರಾಜ್ಯ ಸರ್ಕಾರ ಉಚಿತ ಯೋಜನೆಯನ್ನ ಜಾರಿಗೆ ತರುವ ಮುನ್ನ ಆಟೋ ಟ್ಯಾಕ್ಸಿ ಹಾಗೂ ಖಾಸಗಿ ಬಸ್ ಮಾಲೀಕರು ಹಾಗೂ ಚಾಲಕರಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಬೇಕಿತ್ತು. ಅವರ ಬದುಕಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದ ರೀತಿಯಲ್ಲಿ ಯೋಜನೆಯನ್ನು ಜಾರಿಗೆ ತರುವಾಗ ನೀಲಿ ನಕಾಶೆಯನ್ನು ತಯಾರಿಸಿಕೊಳ್ಳಬೇಕಿತ್ತು. ಒಬ್ಬರು ,ಇನ್ನೊಬ್ಬರ ಮೇಲೆ ಅವಲಂಬಿತವಾಗಿರುವಂತಹ ಮಾನವ ಸಂಪನ್ಮೂಲಗಳ ಮೇಲೆ ಆರ್ಥಿಕ ಪರಿಣಾಮ ಬೀಳದಂತೆ ಎಚ್ಚರಿಕೆ ವಹಿಸಬೇಕಿತ್ತು.

ಈಗ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಉಚಿತ ಯೋಜನೆಯಿಂದ ರಾಜ್ಯದಲ್ಲಿ ನಿರೋದ್ಯೋಗ ಸಮಸ್ಯೆ ತಾಂಡವಾಡಲಿದೆ. ಕೆಲವರ ಬದುಕು ಬೀದಿ ಪಾಲಾಗಲಿದೆ. ಸಾಲ -ಸೋಲ ಮಾಡಿ ವಾಹನವನ್ನು ಪಡೆದವರು ತಮ್ಮ ಮನೆ-ಮಠವನ್ನ ಮಾರಿಕೊಳ್ಳುವ ಪರಿಸ್ಥಿತಿ ಬರುವುದರಲ್ಲಿ ಸಂಶಯವಿಲ್ಲ. ರಾಜ್ಯ ಸರ್ಕಾರ ಒಂದನ್ನು ಕೊಟ್ಟು ಇನ್ನೊಂದನ್ನ ಕಸಿದುಕೊಂಡಂತಾಗಿದೆ. ಇದರ ಗಂಭೀರತೆ ಮುಂದಿನ ದಿನದಲ್ಲಿ ಬಾರಿ ಗಂಡಾಂತರವನ್ನು ಸೃಷ್ಟಿಸಲಿದೆ. ಕೂಡಲೇ ರಾಜ್ಯ ಸರ್ಕಾರ ಆಟೋ ,ಟ್ಯಾಕ್ಸಿ ಹಾಗೂ ಖಾಸಗಿ ಬಸ್ ಮಾಲೀಕರ ಸಹಾಯಕ್ಕೆ ಬರಬೇಕಾಗಿದೆ. ಈ ಕೆಲಸ ಶೀಘ್ರವಾಗಿ ನಡೆಯಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ರಾಜ್ಯದಲ್ಲಿ ನಿರೋದ್ಯೋಗದ ಬೀಕರತೆ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ.

ಆಟೋ, ಟ್ಯಾಕ್ಸಿ ಹಾಗೂ ಖಾಸಗಿ ಬಸ್ ಗಳು ಪ್ರಯಾಣಿಕರಿಗಾಗಿ ದಿನವಿಡೀ ಕಾಯುತ್ತಿದ್ದಾರೆ. ದಿನವಿಡಿ ಕಾದರೂ ಆಟೋ ಬಸ್ಸುಗಳು ತುಂಬುತ್ತಿಲ್ಲ. ಪ್ರಯಾಣಿಕರಿಲ್ಲದೆ ಆಟೋ ನಿಲ್ದಾಣಗಳು ಬಿಕೋ ಎನ್ನುತ್ತಿರುವ ದೃಶ್ಯಗಳು ಕಂಡುಬಂದವು. ಮುಂದೆ ಹೇಗೆ ಎಂಬ ಆತಂಕ ಅವರ ಮುಖದಲ್ಲಿ ಮನೆ ಮಾಡಿತ್ತು. ಕೇವಲ ಪುರುಷ ಪ್ರಯಾಣಿಕರಿಗೆ ಮಾತ್ರ ಸೀಮಿತವಾದಂತೆ ಕಾಣುತ್ತಿದ್ದವು. ಒಟ್ಟಾರೆಯಾಗಿ ಉಚಿತ ಯೋಜನೆಯಿಂದ ಕೆಲವರ ಬದುಕು ಬರ್ಬಾತಾಗಿದೆ.

Post a Comment

0 Comments