ಮಂದಾರ ನ್ಯೂಸ್ ತ್ಯಾಗರ್ತಿ: ತ್ಯಾಗರ್ತಿ ಗ್ರಾಮ ಪಂಚಾಯತಿಯ ಇತಿಹಾಸವನ್ನು ಒಮ್ಮೆ ಗಮನಿಸಿದರೆ ಇಲ್ಲಿ ಅಧಿಕಾರಿಗಳಿಗಿಂತ ಸಿಬ್ಬಂದಿಗಳದ್ದೇ ದರ್ಬಾರ್ ನಡೆಸಿರುವುದುನ್ನು ನಾವು ಕಾಣಬಹುದು.
ತ್ಯಾಗರ್ತಿ ಪಂಚಾಯಿತಿಗೆ ಯಾವುದೇ ಅಭಿವೃದ್ಧಿ ಅಧಿಕಾರಿಗಳು ಬಂದರೂ ಅವರು ಸಿಬ್ಬಂದಿಗಳ ಕಪಿಮುಷ್ಠಿಯಲ್ಲಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆಯೇ? ಎಂಬ ಅನುಮಾನ ಪಂಚಾಯತಿ ವ್ಯಾಪ್ತಿಯ ಜನರಲ್ಲಿ ಕಾಡುತ್ತಿದೆ.
ತ್ಯಾಗರ್ತಿ ಗ್ರಾಮ ಪಂಚಾಯತಿಯಲ್ಲಿ ಈ ಹಿಂದೆ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಭ್ರಷ್ಟಾಚಾರದ ಆರೋಪವನ್ನು ಹೊತ್ತು ಪಂಚಾಯತಿಯಿಂದ ವರ್ಗಾವಣೆಯಾದ ಮಂಜು ನಾಯ್ಕ ಇವರ ಜಾಗಕ್ಕೆ ಮೋಹನ್ ಇವರು ವರ್ಗಾವಣೆಯಾಗಿ ಕಳೆದ ಒಂದು ವರ್ಷದ ಪಂಚಾಯ್ತಿಯ ಅಧಿಕಾರವನ್ನು ವಹಿಸಿಕೊಂಡಿರುತ್ತಾರೆ.
ಅಭಿವೃದ್ಧಿ ಅಧಿಕಾರಿ ಮೋಹನ್ ಇವರು ಭಾರತಮಾತೆಯ ಸೇವೆಯನ್ನ ಮಾಡಿ ನಿವೃತ್ತಿ ಹೊಂದಿ ಅಭಿವೃದ್ಧಿ ಅಧಿಕಾರಿಯಾಗಿ ನಿಯೋಜನೆಯಾದ ಅಧಿಕಾರಿಯಾಗಿರುತ್ತಾರೆ.
ಹೇಳಿ-ಕೇಳಿ ಸೈನಿಕರು ಕರ್ತವ್ಯ ಪ್ರಜ್ಞೆ ,ಶಿಸ್ತು ,ತಾಳ್ಮೆ, ಹಾಗೂ ಸಮಯ ಪಾಲನೆ ಅಂತರ್ಗತವಾಗಿ ಮೈಗೂಡಿಸಿಕೊಂಡಿರುತ್ತಾರೆ. ಇವರು ತಮ್ಮ ಕರ್ತವ್ಯದಲ್ಲೂ ಸಹ ಪ್ರಾಮಾಣಿಕತೆಯನ್ನು ತೋರುವ ಅಧಿಕಾರಿಯಾಗಿರುತ್ತಾರೆ.
ತ್ಯಾಗರ್ತಿ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಯಾಗಿ ಮೋಹನ್ ಇವರಿಗೆ ತಮ್ಮ ಕರ್ತವ್ಯವನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲವೇ? ಎಂಬ ಅನುಮಾನ ಕಾಡುತ್ತಿದೆ. ಎಲ್ಲೋ ಒಂದು ಕಡೆ ಅಭಿವೃದ್ಧಿ ಅಧಿಕಾರಿಗಳು ಒತ್ತಡಕ್ಕೆ ಮಣಿಯುತ್ತಿದ್ದಾರೆಯೇ? ಅವರಿಗೆ ಒತ್ತಡವನ್ನ ಎದುರಿಸಲು ಸಾಧ್ಯವಾಗುತ್ತಿಲ್ಲವೇ? ಹೀಗೆ ಹತ್ತು ಹಲವು ಅನುಮಾನಗಳು ಪಂಚಾಯತಿ ವ್ಯಾಪ್ತಿಯ ಜನರಲ್ಲಿ ನಿರಂತರವಾಗಿ ಕಾಡುತ್ತಿದೆ.
ಇವರ ಮುಗ್ದತೆಯನ್ನು ಪಂಚಾಯತಿಯಲ್ಲಿ ಕರ್ತವ್ಯ ನಿರ್ವಹಿಸುವ ಕೆಲವು ಸಿಬ್ಬಂದಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದ್ದಾರೆ. ಈ ಪಂಚಾಯತಿಯಲ್ಲಿ ಸಿಬ್ಬಂದಿಗಳದ್ದೇ ದರ್ಬಾರು ಎಂಬ ಮಾತು ಸಾರ್ವಜನಿಕರ ವಲಯದಿಂದ ಕೇಳಿ ಬರುತ್ತಿದೆ.
ಸಿಬ್ಬಂದಿಗಳು ತಾವು ಪಡೆಯುವ ಸಂಬಳಕ್ಕೆ ತಕ್ಕಂತೆ ತಮ್ಮ ಕರ್ತವ್ಯವನ್ನ ಪ್ರಾಮಾಣಿಕವಾಗಿ ನಿಭಾಯಿಸುತ್ತಿಲ್ಲ ಎಂಬ ಆರೋಪವಿದೆ. ಪುಂಡ- ಪೋಕರಿ, ಪುಡಾರಿ ರಾಜಕಾರಣಿಗಳ ಜೊತೆ ಸೇರಿಕೊಂಡು ಪಂಚಾಯಿತಿಯ ಗೌಪ್ಯ ಮಾಹಿತಿಗಳನ್ನು ಹೊರಗಿರುವಂತಹ ಪುಡಾರಿ ರಾಜಕಾರಣಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ ಎಂಬ ಮತ್ತೊಂದು ಆರೋಪವು ಸಾರ್ವಜನಿಕರ ವಲಯದಿಂದ ಪ್ರಬಲವಾಗಿ ಕೇಳಿ ಬರುತ್ತದೆ.
ಜನಸಾಮಾನ್ಯರು ತಮ್ಮ ಕೆಲಸ ಕಾರ್ಯ ನಿಮಿತ್ತ ಪಂಚಾಯತಿ ಅಭಿವೃದ್ಧಿ ಅಧಿಕಾರಿಯನ್ನು ಕಾಣಲು ಬಂದರೆ ಅವರು ಯಾವ ವಿಚಾರಕ್ಕೆ ಬಂದಿದ್ದಾರೆ, ಏತಕ್ಕೆ ಬಂದಿದ್ದಾರೆ ಎಂಬ ಮಾಹಿತಿಯನ್ನು ಸಂಗ್ರಹಿಸಿ, ಅವರ ಎದುರಾಳಿಗಳಿಗೆ ರವಾನಿಸುವ ಕೆಲಸವನ್ನು ಸಹ ಪಂಚಾಯತಿಯಲ್ಲಿ ಕರ್ತವ್ಯ ನಿರ್ವಹಿಸುವ ಕೆಲವು ಸಿಬ್ಬಂದಿಗಳು ಮಾಡುತ್ತಿದ್ದಾರೆ.
ಇದರ ಜೊತೆಗೆ ಕೆಲವು ಚುನಾಯಿತ ಜನಪ್ರತಿನಿಧಿಗಳೊಂದಿಗೆ ಸೇರಿಕೊಂಡು ಪಂಚಾಯಿತಿಯ ಆಡಳಿತ ಯಂತ್ರವನ್ನು ದುರ್ಬಲಗೊಳಿಸುವ ಪ್ರಯತ್ನವನ್ನು ಕೆಲವು ಸಿಬ್ಬಂದಿಗಳು ಮಾಡುತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕರ ವಲಯದಲ್ಲಿ ಹರಿದಾಡುತ್ತಿದೆ.
ಗ್ರಾಮ ಪಂಚಾಯತಿಯಲ್ಲಿ ಚುನಾಯಿತ ಜನಪ್ರತಿನಿಧಿಗಳಿಗಿಂತ ಸಿಬ್ಬಂದಿಗಳ ಸಂಖ್ಯೆ ಹೆಚ್ಚಾಗಿದೆ. ಇವರಿಗೆ ಪ್ರತಿ ತಿಂಗಳು ಜನಸಾಮಾನ್ಯರಿಂದ ಸಂಗ್ರಹಿಸಿದ ತೆರಿಗೆ ಹಣವನ್ನು ಸಂಬಳವಾಗಿ ನೀಡಲಾಗುತ್ತಿದೆ. ಪಂಚಾಯತಿಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳ ಪ್ರತಿ ತಿಂಗಳ ಸಂಬಳ ಸರಿಸುಮಾರು 15,000 ದಿಂದ 17,000 ತನಕ ನೀಡುತ್ತಿದ್ದಾರೆ ಎಂಬ ಮಾಹಿತಿಯು ಇದೆ. ಇಷ್ಟೊಂದು ಸಂಬಳ ಪಡೆಯುವ ಸಿಬ್ಬಂದಿಗಳ ಕೆಲಸದ ಸಮಯ ಎಷ್ಟು ಗೊತ್ತೇ? ಕೇವಲ 2 ರಿಂದ 3 ಗಂಟೆಗಳು ಮಾತ್ರ. ಪ್ರತಿ ದಿನ 2 ರಿಂದ 3 ಗಂಟೆ ಕೆಲಸ ಮಾಡಿದರೆ ಇವರಿಗೆ 500 ರೂಪಾಯಿಗಳ ಸಂಬಳದಂತೆ ಪ್ರತಿ ತಿಂಗಳು 15 ಸಾವಿರ ಸಂಬಳ ಸಿಗುತ್ತದೆ. ಇದರ ಜೊತೆಗೆ ಐಷಾರಾಮಿ ಜೀವನ ಶೈಲಿ, ಪುಕ್ಕಟೆ ವಿದ್ಯುತ್, ಮಳೆಗಾಲ ಚಳಿಗಾಲದಲ್ಲಿ ಉಚಿತವಾದ ಫ್ಯಾನಿನ ತಂಗಾಳಿ, ಫ್ಯಾನಿನ ತಂಗಾಳಿಯಲ್ಲಿ ಮೊಬೈಲ್ನ ವೀಕ್ಷಣೆ, ಅಬ್ಬಾ ಎಂತಹ ಸುಖಕರ ಜೀವನ ಅಲ್ಲವೇ? ಇಂತಹ ಅವಕಾಶವನ್ನ ಯಾರು ತಪ್ಪಿಸಿಕೊಳ್ಳುತ್ತಾರೆ ಹೇಳಿ.
ತ್ಯಾಗರ್ತಿ ಗ್ರಾಮ ಪಂಚಾಯತಿಯ ಕೆಲವು ಸಿಬ್ಬಂದಿಗಳಿಗೆ ಮೂಗುದಾರ ಹಾಕಲು ಸಮರ್ಥ ಜನಪ್ರತಿನಿಧಿ ಇಲ್ಲದೆ ಇರುವುದು ಮತದಾರರ ದುರದೃಷ್ಟಕರ.
ಮೊನ್ನೆ ದಿನ ತ್ಯಾಗರ್ತಿ ಗ್ರಾಮ ಪಂಚಾಯತಿಯ ಸಿಬ್ಬಂದಿ ಓರ್ವ ಜಿಟಿ,ಜಿಟಿ ಮಳೆಗಾಲದಲ್ಲಿ, ಮೈ ನಡುಗುವ ಚಳಿಯಲ್ಲಿ ಪಂಚಾಯ್ತಿಯ ಕಚೇರಿಯಲ್ಲಿ ಫ್ಯಾನನ್ನು ಹಾಕಿಕೊಂಡು ಮೈಮೇಲೆ ಪ್ರಜ್ಞೆ ಇಲ್ಲದ ರೀತಿಯಲ್ಲಿ ಮೊಬೈಲ್ ವೀಕ್ಷಣೆ ಮಾಡುತ್ತಿರುವ ದೃಶ್ಯ ನಮ್ಮ ಮಾಧ್ಯಮ ಪ್ರತಿನಿಧಿಯ ಕ್ಯಾಮರದಲ್ಲಿ ಸೆರೆಯಾಯಿತು.
ನಿಜವಾಗಿಯೂ ಪಂಚಾಯ್ತಿಯ ಕೆಲವು ಸಿಬ್ಬಂದಿಗಳು ಪುಣ್ಯವಂತರು. ಬಿಸಿಲು- ಮಳೆ- ಚಳಿ ಅನ್ನದೆ ಮೈ ಮೇಲೆ ಸರಿಯಾದ ಬಟ್ಟೆ ಇಲ್ಲದೆ ತನ್ನ ಕುಟುಂಬದ ನಿರ್ವಹಣೆಗಾಗಿ ದಿನದ 8 ತಾಸು ಹೊರಗಡೆ ಕೆಲಸ ಮಾಡಿದರು ನಮ್ಮ ಕೂಲಿ ಕಾರ್ಮಿಕರಿಗೆ ಸಿಗುವ ಸಂಬಳ ಕೇವಲ 250 ರಿಂದ 300 ಗಳು ಮಾತ್ರ. ಅದು ದಿನದ 8 ತಾಸು ಕೆಲಸ ಮಾಡಲೇಬೇಕು. ಒಬ್ಬ ವ್ಯಾಪಾರಸ್ಥ ಬೆಳಗ್ಗೆಯಿಂದ ಸಂಜೆವರೆಗೂ ತನ್ನ ಅಂಗಡಿಯಲ್ಲಿ ಕುಳಿತು ವ್ಯಾಪಾರ ಮಾಡಿದ್ದರು ತನ್ನೆಲ್ಲ ಖರ್ಚುಗಳನ್ನು ಕಳೆದ ಮೇಲೆ ಅವನಿಗೆ ಸಿಗುವುದು 400 ರೂಪಾಯಿಗಳು ಮಾತ್ರ. ಆದರೆ ಅದೇ ಒಬ್ಬ ಪಂಚಾಯತಿಯ ಸಿಬ್ಬಂದಿಗಳು ಕೇವಲ 2 ರಿಂದ 3 ತಾಸಿಗೆ 500 ರೂಪಾಯಿಗಳ ಸಂಬಳ ನಿಜವಾಗಿಯೂ ಸಿಬ್ಬಂದಿಗಳು ಪುಣ್ಯವಂತರು ಅಲ್ಲವೇ?
ಕೂಡಲೇ ಸಂಬಂಧಿಸಿದ ಇಲಾಖೆಯ ಮೇಲಧಿಕಾರಿಗಳು ತ್ಯಾಗರ್ತಿ ಗ್ರಾಮ ಪಂಚಾಯತಿಯಲ್ಲಿ ಕರ್ತವ್ಯ ನಿರ್ವಹಿಸುವ ಕೆಲವು ಸಿಬ್ಬಂದಿಗಳ ಮಾಹಿತಿಗಳನ್ನ ಪಡೆದು , ಪಂಚಾಯತಿ ವ್ಯಾಪ್ತಿಗೆ ಅಷ್ಟು ಸಿಬ್ಬಂದಿಗಳ ಅವಶ್ಯಕತೆ ಇದೆಯೇ? ಎಂಬುದನ್ನ ಮನಗಂಡು ಅವಶ್ಯಕತೆ ಇದ್ದವರನ್ನು ಮಾತ್ರ ನೇಮಕ ಮಾಡಿಕೊಂಡು ಉಳಿದವರನ್ನು ಕೆಲಸದಿಂದ ತೆಗೆಯುವ ಮೂಲಕ ಜನಸಾಮಾನ್ಯರ ತೆರಿಗೆ ಹಣ ದುಂದು ವೆಚ್ಚ ಆಗದಂತೆ ನೋಡಿಕೊಳ್ಳಬೇಕು ಎಂಬುದೇ ನಮ್ಮ ಮಾಧ್ಯಮದ ಆಶಯವಾಗಿದೆ.
0 Comments