ಮಂದಾರ ನ್ಯೂಸ್, ಹರಿಹರ: ದಾವಣಗೆರೆ ಜಿಲ್ಲಾ ನೂತನ ಜಿಲ್ಲಾಧಿಕಾರಿಗಳಾಗಿ ಅಧಿಕಾರವನ್ನು ಸ್ವೀಕರಿಸಿದ ಡಾ. ವೆಂಕಟೇಶ್ ಎಂ.ವಿ ಇವರನ್ನು ಇಂದು ಹರಿಹರ ನಗರಸಭೆಯ ಪೌರಾಯುಕ್ತರಾದ ಬಸವರಾಜ ಐಗೂರ ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಭೇಟಿಯಾಗಿ ಮಳೆ ಹಾನಿ ಸಂಬಂಧಿಸಿದಂತೆ ಚರ್ಚೆ ನಡೆಸಿದರು.
ಈಗಾಗಲೇ ನಗರ ಪ್ರದೇಶದ ವಾರ್ಡ್ಗಳಲ್ಲಿ ಮಳೆ ಹಾನಿ ಸಂಬಂಧಿಸಿದಂತೆ ನಗರಸಭೆ ವತಿಯಿಂದ ಕೈಗೊಳ್ಳಲಾದ ಮುಂಜಾಗ್ರತ ಕ್ರಮಗಳು, ನೆರೆ ಸಂತ್ರಸ್ತ ಪ್ರದೇಶದ ಜನರನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸುವ ಹಾಗೂ ನಗರಸಭೆ ವತಿಯಿಂದ ಈಗಾಗಲೇ ಕೈಗೊಳ್ಳಲಾದ ಅಗತ್ಯ ಕ್ರಮಗಳ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಮಾನ್ಯ ಪೌರಾಯುಕ್ತರು ಸುದೀರ್ಘ ಚರ್ಚೆಯನ್ನ ನಡೆಸಿದ್ದಾರೆ ಎಂಬ ಮಾಹಿತಿ ನಮ್ಮ ಮಾಧ್ಯಮಕ್ಕೆ ಲಭ್ಯವಾಗಿದೆ.
ಈಗಾಗಲೇ ಹರಿಹರ ನಗರಸಭೆಯ ಪೌರಾಯುಕ್ತರು ಮಳೆ ಹಾನಿ ಪ್ರದೇಶಗಳಿಗೆ ಹರಿಹರ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ಪಿ ಹರೀಶ್ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಸಕರ ಸಲಹೆಯಂತೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಮಾನ್ಯ ಜಿಲ್ಲಾಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಜನರ ಸುರಕ್ಷತೆಗೆ ಕೈಗೊಳ್ಳಲಾದ ಅಗತ್ಯ ಕ್ರಮಗಳ ಕುರಿತು ಇಂದು ನೂತನ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಇದೇ ಸಂದರ್ಭದಲ್ಲಿ ನೂತನ ಜಿಲ್ಲಾಧಿಕಾರಿಗಳಿಗೆ ಹರಿಹರ ನಗರಸಭಾ ವತಿಯಿಂದ ಹೂಗುಚ್ಛ ಹಾಗೂ ನೆನಪಿನ ಫಲಕವನ್ನು ನೀಡಿ ಗೌರವಿಸಿ, ಶುಭಾಶಯವನ್ನು ಕೋರಿದರು.
0 Comments