"ಸರಳತೆಯ ಸಾಹುಕಾರ" ಬೇಳೂರು ಗೋಪಾಲ್ ಕೃಷ್ಣ....!

ಮಂದಾರ ನ್ಯೂಸ್, ಸಾಗರ: ಮಾನವೀಯತೆ, ಸರಳತೆ ಹಾಗೂ ಸಹಾನುಭೂತಿಯ ಗುಣಗಳು ಬರುವುದು ಜನ ಸಾಮಾನ್ಯರ ಕಷ್ಟ- ಕಾರ್ಪಣ್ಯಗಳನ್ನು ಹತ್ತಿರದಿಂದ ಬಲ್ಲವರಿಗೆ ಮಾತ್ರ ಈ ಮೇಲಿನ ಗುಣಗಳು ಬರಲು ಸಾಧ್ಯ.

ಉತ್ತಮ ನಾಯಕ ಹಾಗೂ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕಾದರೆ ಅವರಲ್ಲಿ ಮೊದಲು ಸರಳತೆ ಇರಬೇಕು ,ನಂತರ ಮಾನವೀಯ ಮೌಲ್ಯಗಳನ್ನ ಹೊಂದಿರಬೇಕು. ಇಂತಹ ಗುಣಗಳು ಹೊಂದಿರುವ ವ್ಯಕ್ತಿಗಳು ತಮಗರಿವಿಲ್ಲದೆ ಅತ್ಯಂತ ಎತ್ತರದ ಸ್ಥಾನಕ್ಕೆ ಹೋಗುತ್ತಾರೆ. ಅವರ ಗುಣಗಳೇ ಅವರ ವ್ಯಕ್ತಿತ್ವದ ಪರಿಚಯ ಮಾಡಿಸುತ್ತದೆ.
ಉತ್ತಮ ಸಂಸ್ಕಾರವಂತ ಕುಟುಂಬದಿಂದ ಬಂದಂತಹ ವ್ಯಕ್ತಿಗಳು ಮೇಲಿನ ಎಲ್ಲಾ ಗುಣಗಳನ್ನು ಹೊಂದಿರುತ್ತಾರೆ. 

ಈಗ ಏಕೆ ಈ ಮಾತನ್ನು ಹೇಳುತ್ತೇನೆ ಅಂದುಕೊಂಡಿದ್ದೀರಾ.!ಅಂತಹ ಗುಣಗಳನ್ನು ಹೊಂದಿದಂತ ಅಪರೂಪದ ವ್ಯಕ್ತಿ ನಮ್ಮ- ನಿಮ್ಮ ಮಧ್ಯದಲ್ಲೇ, ನಮ್ಮ ಜೊತೆಯಲ್ಲೇ, ನಿರಂತರವಾಗಿ ನಮ್ಮೊಟ್ಟಿಗೆ ಇದ್ದು .ನಮ್ಮ ಕಷ್ಟ-ಕಾರ್ಪಣ್ಯಗಳನ್ನ, ಸಮಯ ಚಿತ್ತದಿಂದ ಆಲಿಸುತ್ತಿರುವ ರಾಜ್ಯ ರಾಜಕಾರಣದ ಅಪರೂಪದ "ಮಾಣಿಕ್ಯ" ಬೇಳೂರು ಗೋಪಾಲಕೃಷ್ಣ ಇವರ ಬಗ್ಗೆ ಹಾಗೂ ಇವರ ಸರಳತೆಯ ಬಗ್ಗೆ ಹೇಳಲೇಬೇಕು ಅಲ್ಲವೇ?

ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಚುನಾಯಿತ ಜನಪ್ರತಿನಿಧಿ ಬೇಳೂರು ಗೋಪಾಲಕೃಷ್ಣ ಅವರು ತಾವೊಬ್ಬ ಕ್ಷೇತ್ರದ ಶಾಸಕ ,ತಾನು ಎಲ್ಲಾ ಸ್ಥಾನ-ಮಾನವನ್ನ ಹೊಂದಿರುವ ನಾಯಕ ,ಮುಂದೆ ಉನ್ನತ ಸ್ಥಾನವನ್ನ ಅಲಂಕರಿಸುವ ಶಾಸಕ ಎಂಬ ದುರಹಂಕಾರದ ಪ್ರವೃತ್ತಿಯನ್ನ ಹೊಂದಿದೆ ಸರಳತೆಯಲ್ಲೇ  ಜನರೊಂದಿಗೆ ಬೆರೆಯುತ್ತಾ ಅವರಿದ್ದಲ್ಲಿಗೆ ಹೋಗಿ ಅವರ ಸಮಸ್ಯೆಯನ್ನ ಆಲಿಸುತ್ತಾ ಸ್ಥಳದಲ್ಲೇ ತಮ್ಮ ಕೈಯಲಾಗುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾ, ಸರ್ಕಾರದ ಪರಿಹಾರಕ್ಕಾಗಿ ಕಾಯದೆ. ತಾವೇ ತಮ್ಮ ಸ್ವಂತ ಖರ್ಚಿನಲ್ಲೇ ಸಹಾಯವನ್ನು ನೀಡುತ್ತಾ ,ಕ್ಷೇತ್ರದ ಜನರಿಗೆ ಧೈರ್ಯವನ್ನ ತುಂಬುತ್ತಿರುವ ಬೇಳೂರು ಗೋಪಾಲಕೃಷ್ಣ ಅವರು ಮೊನ್ನೆ ದಿನ ತಾವು ಸಂಚರಿಸುವ ಮಾರ್ಗದ ಮಧ್ಯೆ ನಿರ್ಮಲಾ- ನಿಷ್ಕಲ್ಮಶ ಮನಸ್ಸು ಹೊಂದಿದ ವಯೋವೃದ್ದೆ ತಾಯಿಯ ಜೊತೆ ಸರಳತೆಯಲ್ಲೇ ಆ ತಾಯಿಯ ಅಂತರಂಗದ ಮಾತುಗಳನ್ನ ಆಲಿಸಿದರು.
ತಂದೆ -ತಾಯಿಂದಿರು ವಯಸ್ಸಾದ ನಂತರ ಮಕ್ಕಳಂತಾಗುತ್ತಾರೆ. ಅವರ ಮನಸ್ಸಿನಲ್ಲಿ ಯಾವುದೇ ರೀತಿಯ ಕೆಟ್ಟ ಯೋಚನೆಗಳು ಇರುವುದಿಲ್ಲ. ಯಾರೇ ಬಂದರೂ ಅವರೊಂದಿಗೆ ತನ್ನ ಮಕ್ಕಳಂತೆ ಮಾತನಾಡಿಸುವ ಗುಣವನ್ನು ಅವರು ಹೊಂದಿರುತ್ತಾರೆ. ಅವರಿಗೆ ಹೊರ ಪ್ರಪಂಚದ ಸ್ವಾರ್ಥ, ಜನರ  ಕಪಟತನದ ಮಾತುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ತನ್ನ ಮುಂದೆ ಯಾರೇ ಬಂದರೂ ಅವರೊಬ್ಬ ದೊಡ್ಡ ವ್ಯಕ್ತಿ ಎಂಬ ಅರಿವು ಇರುವುದಿಲ್ಲ, ಅವರೊಂದಿಗೆ ಪ್ರೀತಿ ,ವಾತ್ಸಲ್ಯ, ಮಮಕಾರದೊಂದಿಗೆ ಕೆಲ ಹೊತ್ತು ತಮ್ಮ ಅಂತರಂಗದಲ್ಲಿ ಹುದುಗಿಟ್ಟಿಕೊಂಡ ಮಾತುಗಳನ್ನ ಅವರ ಮುಂದೆ ಹಂಚಿಕೊಳ್ಳುತ್ತಾರೆ. ಅದಕ್ಕೆ ಹೇಳುವುದು "ತಾಯಿ ಹೃದಯ ಎಲ್ಲಾ ಹೃದಯಕ್ಕಿಂತ ಶ್ರೇಷ್ಠ" ಎಂದು .ಅಂತಹ ಶ್ರೇಷ್ಠ ಹೃದಯವನ್ನು ಹೊಂದಿದ ಮಹಾಮಾತೆಯೊಂದಿಗೆ ಕೆಲಹೊತ್ತು ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣ ಅವರು ತಮ್ಮೆಲ್ಲ ಪ್ರತಿಷ್ಠೆಯನ್ನು ಬದಿಗಿಟ್ಟು, "ಸರಳತೆಯಲ್ಲೇ" ಆ ತಾಯಿಯೊಂದಿಗೆ ಕೆಲವೊಂದು ತಮಾಷೆಯ ಮಾತುಗಳೊಂದಿಗೆ ಆ ತಾಯಿಯ ಕಷ್ಟವನ್ನು ಆಲಿಸಿದರು. ಆ ತಾಯಿಯೊಂದಿಗೆ ಕೆಲ ಹೊತ್ತು ಸಮಯ ಕಳೆದ ಶಾಸಕರು ತಮ್ಮ ಕೈಲಾದ ಆರ್ಥಿಕ ಸಹಾಯವನ್ನು ನೀಡುವ ಮೂಲಕ "ಮಾನವೀಯತೆಯ ಜೊತೆಗೆ, ಸರಳತೆಯನ್ನ ಮೆರೆದರು". ಸಾಗರ ಕ್ಷೇತ್ರದ ಮತದಾರರು ಬೇಳೂರು ಗೋಪಾಲಕೃಷ್ಣ ಅವರಲ್ಲಿರುವ ಇಂತಹ ಗುಣಗಳನ್ನು ಮೆಚ್ಚಿ "ಸರಳತೆಯ ಸಾಹುಕಾರ ಎಂಬ ಮಾತಿನೊಂದಿಗೆ ಬಂಗಾರಪ್ಪನವರ ನೆರಳು" ಸಾಗರದಲ್ಲಿ ಕಾಣುತ್ತಿದೆ, ಮುಂದೊಂದು ದಿನ ನಮ್ಮ ಶಾಸಕರು ರಾಜ್ಯ ರಾಜಕಾರಣದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸುತ್ತಾರೆ ಎಂಬ ಭವಿಷ್ಯವನ್ನು ನುಡಿದರು.
ನಾಯಕ ತನ್ನ ಜನರ ಕಷ್ಟ- ಸುಖದಲ್ಲಿ ಭಾಗಿಯಾದಾಗ ಮಾತ್ರ ಅವರು ಜನನಾಯಕರಾಗಲು ಸಾಧ್ಯ ಇಂದು ಬೇಳೂರು ಗೋಪಾಲಕೃಷ್ಣ ಅವರು ಸಾಗರ ವಿಧಾನಸಭಾ ಕ್ಷೇತ್ರದ ಜನನಾಯಕರಾಗಿ ಮುಂದೊಂದು ದಿನ ರಾಜ್ಯ ರಾಜಕಾರಣದಲ್ಲಿ ಉನ್ನತವಾದ ಸ್ಥಾನದಲ್ಲಿ ಅಲಂಕರಿಸಲಿ ಎಂಬುವುದೇ ನಮ್ಮ ಮಾಧ್ಯಮದ ಆಶಯ.

"ಸರಳತೆಯ ಸಾಹುಕಾರ"ನಿಗೆ ನಮ್ಮ ಮಂದಾರ ಪತ್ರಿಕ ಬಳಗದ ವತಿಯಿಂದ ಬಿಗ್ ಸೆಲ್ಯೂಟ್.

Post a Comment

0 Comments