ಖಡಕ್ ಐಪಿಎಸ್ ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಕನ್ನಿಕಾ ಸಿಕ್ರಿವಾಲ್ ವರ್ಗಾವಣೆ.!?ನೂತನ ಡಿವೈಎಸ್ಪಿ ಯಾಗಿ ಬಿ.ಎಸ್ ಬಸವರಾಜ್ ನೇಮಕ.!


ಮಂದಾರ ನ್ಯೂಸ್, ಹರಿಹರ: ಗ್ರಾಮಾಂತರ ಎಎಸ್ಪಿಯಾಗಿದ್ದ ಕನ್ನಿಕಾ ಸಕ್ರೀವಾಲ್ ಐಪಿಎಸ್ ಆಗಿದ್ದು, ಇನ್ನೂ ಸ್ಥಳ ತೋರಿಸಿಲ್ಲ. ದಾವಣಗೆರೆ ಗ್ರಾಮಾಂತರ ಪೊಲೀಸ್ ಉಪಾಧೀಕ್ಷಕರ ಕಚೇರಿಯಲ್ಲಿ ಮಂಜುನಾಥ್ ಗಂಗಲ್, ನರಸಿಂಹ ತಾಮ್ರಧ್ವಜ, ಕನ್ನಿಕ್ ಸಕ್ರಿವಾಲ್ ಕೆಲಸ ಮಾಡಿದ್ದು , ಇದೀಗ ಡಿಸಿಆರ್‌ಬಿ ಡಿಎಸ್ಪಿ ಬಸವರಾಜ್ ನೇಮಕವಾಗಿದ್ದಾರೆ. ಆಗಸ್ಟ್ ಒಂದು ಮಂಗಳವಾರ 11 ಗಂಟೆಗೆ ಅಧಿಕಾರ ಸ್ವೀಕರಿಸುವರು ಎಂದು ತಿಳಿದುಬಂದಿದೆ.


ಗ್ರಾಮಾಂತರ ಡಿಎಸ್ಪಿ ಆಗಿ ಕರ್ತವ್ಯ ನಿರ್ವಹಿಸಿದ ಕನ್ನಿಕಾ ಸಿಕ್ರಿವಾಳ ಅವರು ತಮ್ಮ ಅಧಿಕಾರ ಅವಧಿಯಲ್ಲಿ ತಮ್ಮ ಪೊಲೀಸ್ ಠಾಣ ಸರಹದ್ದಿನಲ್ಲಿ ಅಕ್ರಮ ಚಟುವಟಿಕೆಗಳಿಗೆ ಸಂಪೂರ್ಣ ಬ್ರೇಕ್ ಹಾಕಿದ್ದರು. ಅಕ್ರಮ ಚಟುವಟಿಕೆಯಲ್ಲಿ ತೊಡಗಿ ಕೊಂಡವರಿಗೆ ಸಿಂಹ ಸ್ವಪ್ನವಾಗಿ ಕಾಡಿದ್ದರು.

ಕನ್ನಿಕಾ ಸಿಕ್ರಿವಾಲ್ ಅವರಿಂದ ವರ್ಗಾವಣೆಯಾದ ಜಾಗಕ್ಕೆ ಎಸ್ಪಿ ಕಚೇರಿಯಲ್ಲಿ ಡಿಸಿಆರ್‌ಬಿ ಕ್ರೈಂ ಬ್ರಾಂಚ್‌ನಲ್ಲಿದ್ದ ಬಿ.ಎಸ್.ಬಸವರಾಜ್ ದಾವಣಗೆರೆ ಗ್ರಾಮಾಂತರ ಡಿಎಸ್ಪಿಯಾಗಿ ನೇಮಕಗೊಂಡಿದ್ದಾರೆ. ಈ ಹಿಂದೆ ಸೈದಾಪುರದಲ್ಲಿ ಪಿಎಸ್‌ಐಆಗಿ 4 ವರ್ಷ, ಹರಪನಹಳ್ಳಿಯಲ್ಲಿ ಸಿಪಿಐ ಆಗಿ 4 ವರ್ಷ, ತೀರ್ಥಹಳ್ಳಿ ಸಿಪಿಐ ಆಗಿ 2 ವರ್ಷ, ಬೆಂಗಳೂರು ಕರ್ನಾಟಕ ಲೋಕಾಯುಕ್ತದಲ್ಲಿ 6 ವರ್ಷ, ಚಿತ್ರದುರ್ಗ ಡಿಸಿಆರ್‌ಬಿಯಲ್ಲಿ 6 ತಿಂಗಳು, ದಾವಣಗೆರೆ ಡಿಸಿಆರ್‌ಬಿಯಲ್ಲಿ 3 ವರ್ಷ ಕೆಲಸ ಮಾಡಿದ್ದಾರೆ.

   
ಅಕ್ರಮ ಮರಳುಗಣಿಗಾರಿಕೆಯಲ್ಲಿ ತೊಡಗಿದ್ದ ಸಿದ್ದಿಖಿ ಬಂಧನ, ಕಕ್ಕರಗೊಳ್ಳ ಮರ್ಡರ್ ಕೇಸ್, ಮೆಕ್ಕೆಜೋಳ ವಂಚಕರ ಬಂಧನ, ಓಜಿಕುಪ್ಪಂ ಗ್ಯಾಂಗ್ ಬಂಧನ, ನಕಲಿ ಚಿನ್ನ ಮಾರಾಟಗಾರರ ಬಂಧನ , ಫೇಕ್ ಕರೆನ್ಸಿ ಹೀಗೆ ಹತ್ತಾರು ಹಲವು ಪ್ರಕರಣಗಳನ್ನು ಭೇದಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ದಾವಣಗೆರೆ ಹಾಗೂ ಶಿವಮೊಗ್ಗದಲ್ಲಿ ನಡೆಯುವ ಹಿಂದೂ ಮಹಾಸಭಾ ಗಣಪತಿ, ಕಮ್ಯೂನಿಯಲ್ ಗಲಾಟೆ ಸೇರಿದಂತೆ ಬಿಗಿ ಬಂದೋ ಬಸ್ತ್‌ಗಳಲ್ಲಿ ಇವರ ಪಾತ್ರ ಪ್ರಮುಖದ್ದಾಗಿದೆ.



Post a Comment

0 Comments