"ಧರ್ಮಸ್ಥಳ ಸ್ವಸಹಾಯ ಸಂಘ"


ಈ ಸಂಘದ ವಿರುದ್ಧ ಮಾತಾಡಿದ್ರೆ ಖಂಡಿತವಾಗಿಯೂ ಆ ಮಂಜುನಾಥ ನಮ್ಮನ್ನು ಕ್ಷಮಿಸಲ್ಲ, 
ಈ ಒಂದು ಸಂಘವು ರಾಜ್ಯದ ಎಲ್ಲಾ ಗ್ರಾಮ, ತಾಲೂಕುಗಳಲ್ಲಿ ಮಾಡಿದ್ದ ಕ್ರಾಂತಿ ಸರ್ಕಾರದ ಯಾವ ಕಾರ್ಯಕ್ರಮವು ಮಾಡಿರೋಕೆ ಸಾಧ್ಯವೆ ಇಲ್ಲ 

ನಿಮಗೆ ಗೊತ್ತಿರಲಿ, ಬ್ಯಾಂಕ್ ಗಳಲ್ಲಿ 10, 20 ಸಾವಿರ ಸಾಲ ಕೊಡಲು ಹಿಂದೆ ಮುಂದೆ ನೋಡುತ್ತಿದ್ದ ಸಂಧರ್ಭದಲ್ಲಿ ಜನ ಮುಖ ಮಾಡಿದ್ದು ಇದೆ ಧರ್ಮಸ್ಥಳ ಸ್ವಸಹಾಯ ಸಂಘದ ಕಡೆಗೆ 
ಮಗಳ ಮದುವೆಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ, ಮನೆ ರಿಪೇರಿಗೆ, ಕುಟುಂಬ ನಿರ್ವಹಣೆಗೆ, ಬದುಕು ಕಟ್ಟಿಕೊಳ್ಳಲು,ಪ್ರತಿಯೊಂದಕ್ಕು ಧರ್ಮಸ್ಥಳ ಸ್ವಸಹಾಯ ಅವರ ಬೆನ್ನಿಗೆ ನಿಂತಿದೆ 
ಈಗ ಅಡಿಕೆ ಮಾರಿ ಲಕ್ಷ ಲಕ್ಷ ಎಣಿಸುತ್ತಿರುವ ಮಂಗ್ಳೂರ್ ಕಡೆಯ ಸಣ್ಣ ಸಣ್ಣ ಅಡಿಕೆ ಬೆಳೆಗಾರರಲ್ಲಿ ಹೆಚ್ಚಿನವರು ಅವೊತ್ತು ಅಡಿಕೆ ಬೆಳೆಯಲು ಕಾರಣ ಇದೆ ಧರ್ಮಸ್ಥಳ ಸ್ವಸಹಾಯ ಸಂಘದಲ್ಲಿ ಸುಲಭವಾಗಿ ಸಿಗುತ್ತಿದ್ದ ಸಾಲದ ಹಣ 

ಧರ್ಮಸ್ಥಳ ಸ್ವಸಹಾಯ ಸಂಘದಿಂದ, ಹೆಗ್ಗಡೆಯವರ ಕುಟುಂಬಕ್ಕೆ ದೊಡ್ಡ ಲಾಭ ಇದೆಯೋ ಇಲ್ವಾ ಗೊತ್ತಿಲ್ಲ 
ಆದರೆ ಈ ಸಂಘದಿಂದ ಹಲವು ಕುಟುಂಬಗಳು ಬೆಳಕು ಕಂಡಿರೋದು, ಬದುಕು ಕಟ್ಟಿಕೊಂಡಿರುವುದು ಸುಳ್ಳಲ್ಲ .

ಅದೆಷ್ಟು ಗ್ರಾಮೀಣ ಭಾಗದ ಬಡ ಹಾಗೂ ಮಾಧ್ಯಮ ಕುಟುಂಬದವರು ಇಂದು ಸಾವಲಂಭಿಗಳಾಗಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ ಆರ್ಥಿಕವಾಗಿ ಶೈಕ್ಷಣಿಕವಾಗಿ ಮುಂದೆ ಬರಲು ಧರ್ಮಸ್ಥಳ ಸ್ವಸಹ ಸಂಘ ಹಲವು ರೀತಿಯಲ್ಲಿ ಸಹಾಯ ಮಾಡಿದೆ.

ಇಂದಿಗೂ ಗ್ರಾಮೀಣ ಭಾಗದ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಧರ್ಮಸ್ಥಳ ಗ್ರಾಮ್ ಅಭಿವೃದ್ದಿ ಸಂತೆ ಜಾತಿ -ಮತ- ಭೇದವಿಲ್ಲದೆ ಆರ್ಥಿಕ ಧನ ಸಹಾಯವನ್ನು ಮಾಡುತ್ತಲೇ ಬಂದಿದೆ.

ಸರ್ಕಾರಿ ಶಾಲೆಗಳ ಜೀರ್ಣೋದ್ಧಾರಕ್ಕಾಗಿ ಶಾಲೆಗಳಿಗೆ ಬೇಕಾದ ಅಗತ್ಯ ಸೌಲಭ್ಯಗಳನ್ನ ನೀಡುವಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಒಂದು ಹೆಜ್ಜೆ ಮುಂದೆ.
ಒಮ್ಮೆ ಯೋಚನೆ ಮಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಯಾವ ರೀತಿಯಲ್ಲಿ ಎಷ್ಟರಮಟ್ಟಿಗೆ ಸಹಕಾರಿಯಾಗಿದೆ ಎಂಬುದನ್ನ ಒಂದು ಕ್ಷಣ ಶಾಂತವಾಗಿ ಕುಳಿತು ಯೋಚನೆ ಮಾಡಿ.

ಸೌಜನ್ಯಳಿಗೆ ನ್ಯಾಯ ಕೇಳುವ ಭರದಲ್ಲಿ, ಧರ್ಮಸ್ಥಳದ, ದೈವ ದೇವರುಗಳನ್ನು, ಧರ್ಮಸ್ಥಳದ ಪುಣ್ಯಭೂಮಿಯನ್ನು, ಧರ್ಮಸ್ಥಳದ ಸ್ವಸಹಾಯ ಸಂಘವನ್ನು ಹೀಯ್ಯಾಳಿಸೊದು ಸರಿಯಲ್ಲ 

Post a Comment

0 Comments