"ಗೃಹ ಲಕ್ಷ್ಮಿ" ಯೋಜನೆ ಅರ್ಜಿ ಸಲ್ಲಿಕೆಗೆ ಅಧಿಕೃತ ಚಾಲನೆ,ರೇಷನ್ ಕಾರ್ಡ್ ಇದ್ದವರಿಗೆ ಮಾತ್ರ "ಲಕ್ಷ್ಮಿ"....!



ಮಂದಾರ ನ್ಯೂಸ್, ಹರಿಹರ:- ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ  ಯೋಜನೆಗಳಲ್ಲಿ  ನಾಲ್ಕನೇ ಯೋಜನೆ  ಗೃಹಲಕ್ಷ್ಮಿ ಯೋಜನೆಗೆ ಇಂದಿನಿಂದ ಅಧಿಕೃತ ಚಾಲನೆ ದೊರೆತಿದ್ದು ಪ್ರಮುಖ ಗ್ರಾಮ 1 ಕೇಂದ್ರಗಳಲ್ಲಿ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ.
 
ಗೃಹಲಕ್ಷ್ಮಿ ಯೋಜನೆಯು ಪ್ರಮುಖವಾಗಿ ಪಡಿತರ ಚೀಟಿಯ ಮುಖ್ಯಸ್ಥೆ ಮನೆ ಯಜಮಾನಿಗೆ ಈ ಯೋಜನೆಯ ಲಾಭ ದೊರಕಲಿದೆ.

ಆಧಾರ್ ಕಾರ್ಡ್ ಲಿಂಕ್ ಆಗಿರುವ  ಬ್ಯಾಂಕ್ ಅಕೌಂಟ್ ಗೆ ಹಣ ಸಂದಾಯವಾಗಲಿದೆ.
ಪಡಿತರ ಕಾರ್ಡ್ ಇರುವವರಿಗೆ ಮಾತ್ರ ಯೋಜನೆ ಲಾಭ ದೊರಕಲಿದ್ದು,
ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದವರಿಗೆ, ರೇಷನ್ ಕಾರ್ಡ್ ಇಲ್ಲದವರಿಗೆ ಸದ್ಯಕೆ ಯೋಜನೆ ಲಾಭ ಇಲ್ಲ,
 
ಸರ್ಕಾರ ಕಳೆದ ಆರು ತಿಂಗಳಿಂದ ಅಂದರೆ ಫೆಬ್ರವರಿ ಇಂದ ಹೊಸದಾಗಿ ಪಿ.ಹೆಚ್.ಹೆಚ್.(ಬಿಪಿಎಲ್)ಏನ್.ಪಿ.ಹೆಚ್.ಹೆಚ್.(ಎಪಿಎಲ್),ಎಎವೈ, ಕಾರ್ಡುಗಳನ್ನು ನೀಡದೆ,  ಅರ್ಜಿ ಸಲ್ಲಿಸುವುದಕ್ಕೂ, ಸೇರ್ಪಡೆಗೂ,ವೆಬ್ ಸೈಟ್ ನಲ್ಲಿ ಅವಕಾಶ ನೀಡದೆ ಇರುವ ಪರಿಣಾಮ ಇದೀಗ ಅನ್ನಭಾಗ್ಯ ಯೋಜನೆ ಮತ್ತು  ಗೃಹಲಕ್ಷ್ಮಿ ಯೋಜನೆ ಲಾಭ ಪಡೆಯುವಲ್ಲಿ  ಲಕ್ಷಾಂತರ ಮಹಿಳೆಯರು ವಂಚಿತರಾಗುತ್ತಿದ್ದಾರೆ.

ಹರಿಹರ ತಾಲೂಕಿನಲ್ಲಿ ಕಳೆದ  ಫೆಬ್ರವರಿಯಿಂದ ಸುಮಾರು 2000 ಕ್ಕೂ ಹೆಚ್ಚು  ಮಂದಿ  ಹೊಸ ರೇಷನ್ ಕಾರ್ಡಿಗೆ  ಅರ್ಜಿ ಸಲ್ಲಿಸಿದ್ದು ಇವರಿಗೆ ಈವರೆಗೂ ಪಡಿತರ ಕಾರ್ಡ್ ಸಿಕ್ಕಿಲ್ಲ,
 
ರಾಜ್ಯ ಸರ್ಕಾರ ತಕ್ಷಣ  ಪಡಿತರ ಕಾರ್ಡಿಗೆ  ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಮಾಡಿಕೊಟ್ಟು ಮತ್ತು ಅರ್ಜಿ ಸಲ್ಲಿಸಿದವರಿಗೆ ಕೂಡಲೇ ಪಡಿತರ ಕಾರ್ಡ್  ನೀಡಿದರೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಈ ಜನಪರ ಗ್ಯಾರಂಟಿ ಯೋಜನೆಯ ಲಾಭ ಎಲ್ಲರಿಗೂ ಸಿಕ್ಕಿದಂತಾಗುತ್ತದೆ.
ಇಲ್ಲವಾದಲ್ಲಿ ಸಾಕಷ್ಟು  ಮಹಿಳೆಯರಿಗೆ ಈ ಗೃಹ ಲಕ್ಷ್ಮಿ ಯೋಜನೆ ರಾಜ್ಯದ  ಗೃಹಲಕ್ಷ್ಮಿಯರಿಗೆ ಇಲ್ಲದಂತಾಗುತ್ತದೆ.

ಕೂಡಲೇ ರಾಜ್ಯ ಸರ್ಕಾರ ರಾಜ್ಯದ ಪ್ರತಿ ಮನೆಯ ಬಿಪಿಎಲ್ ಕಾರ್ಡುದಾರರ ಗೃಹಲಕ್ಷ್ಮಿಯರಿಗೆ ಪಡಿತರ ಕಾರ್ಡನ್ನು ನೀಡುವ ಕೆಲಸಕ್ಕೆ ಮುಂದಾಗಲಿ ಆ ಮೂಲಕ ಗೃಹಲಕ್ಷ್ಮಿ ಮನೆಯಲ್ಲಿ ಸಂತೋಷದಿಂದ ಕಾಲ ಕಳೆಯುವಂತಾಗಲಿ ಎಂಬುವುದೇ ನಮ್ಮ ಮಾಧ್ಯಮದ ಆಶಯವಾಗಿದೆ.

ಇಂದು ಹರಿಹರ ತಾಲೂಕು ಭಾನುವಳ್ಳಿ ಗ್ರಾಮ ಪಂಚಾಯತಿಯ ಬಾಪೂಜಿ ಸೇವ ಕೇಂದ್ರದಲ್ಲಿ ಗೃಹಲಕ್ಷ್ಮಿಯ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು. 

ಹರಿಹರ ತಾಲ್ಲೂಕ್ ಕಚೇರಿಯ ಆಹಾರ ಶಾಖೆಯ ಮುಂಬಾಗದಲ್ಲಿ ಪಡಿತರ ಚೀಟಿಯಲ್ಲಿ ಮನೆಯ ಮುಖ್ಯಸ್ಥೆ ಯಜಮಾನಿಕೆಯ ಹೆಸರು ಸೇರ್ಪಡೆಗೆ ಸಾಲುಗಟ್ಟಿ ನಿಂತ ದೃಶ್ಯಗಳು ನಮ್ಮ ಮಾಧ್ಯಮ ಪ್ರತಿನಿಧಿಯ ಕ್ಯಾಮೆರಾದಲ್ಲಿ ಸೆರೆಯಾದವು.

Post a Comment

0 Comments