ಮಂದಾರ ನ್ಯೂಸ್, ಬೆಂಗಳೂರು : 211 ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆಯನ್ನು ಸರ್ಕಾರ ತಡೆ ಹಿಡಿದಿದೆಯೇ?. DG ಕಚೇರಿಯಿಂದ ವರ್ಗಾವಣೆ ಆರ್ಡರ್ ಗೆ ತಡೆ ಹಿಡಿದಿದ್ದಾರೆಯೇ?. ನಿನ್ನೆ 211 ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆಗೆ ಆರ್ಡರ್ ನೀಡಿದ್ದು, ಇಂದು ತಡೆ ಆರ್ಡರ್ ನೀಡಿದ್ದಾರೆ. ಪೊಲೀಸ್ ಟ್ರಾನ್ಸ್ ಫರ್ ಭಾರೀ ಗೊಂದಲಕ್ಕೆ ಸಿಲುಕಿದ್ದು, ಇಂದು ಬೆಳಗ್ಗೆ 19 ಜನರ ಟ್ರಾನ್ಸ್ ಫರ್ ಗೆ ತಡೆ ಹಿಡಿದಿದ್ದರು, ಈಗ 211 ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ತಡೆ ಹಿಡಿದಿದ್ದಾರೆ. DG ವೈರ್ಲೆಸ್ ಮೂಲಕ ಸಂದೇಶ ರಿಲೀಸ್ ಮಾಡಿದ್ದಾರೆ.
ನಿನ್ನೆ ರಾಜ್ಯಾದ್ಯಂತ 211 ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಇಂದು ಬೆಳಗ್ಗೆ ಸರ್ಕಾರದಿಂದ ದಿಢೀರ್ ತಡೆ ಹಿಡಿಯಲಾಗಿದೆ. ವರ್ಗಾವಣೆ ಆದೇಶ ಬರುತ್ತಿದ್ದಂತೆ ಇಂದು ಚಾರ್ಜ್ ತೆಗೆದುಕೊಳ್ಳಲು ಮುಂದಾಗಿದ್ದ 11 ಇನ್ಸ್‌ಪೆಕ್ಟರ್‌ಗಳ ವರ್ಗಾವಣೆಗೆ ಬೆಳ್ಳಂಬೆಳಗ್ಗೆ ತಡೆ ನೀಡಲಾಗಿದೆ.
ಇಂದು ಬೆಳಿಗ್ಗೆ 11 ಇನ್ಸ್‌ಪೆಕ್ಟರ್‌ಗಳು ತಡೆಹಿಡಿದಿದ್ದು, ನಂತರ ಮಧ್ಯಾಹ್ನದ ವೇಳೆ ಪುನಃ 8 ಇನ್ಸ್‌ಪೆಕ್ಟರ್‌ಗಳು ಸೇರಿ ಒಟ್ಟು 19 ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆಗೆ ತಡೆ ನೀಡಿ ಆದೇಶ ಹೊರಡಿಸಿದೆ. ಇದೀಗ ಮತ್ತೆ 211 ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆಗೂ ತಡೆಹಿಡಿದಿದ್ದಾರೆ
0 Comments