ಜಿಲ್ಲಾ ಆರೋಗ್ಯ ಅಧಿಕಾರಿಗಳೇ ನಿಮ್ಮ ಇಲಾಖೆಯ ಸಿಬ್ಬಂದಿಗಳಿಗೆ ಕನಿಷ್ಠ ಜ್ಞಾನದ ತರಬೇತಿ ನೀಡಿ.


ಮಂದಾರ ನ್ಯೂಸ್, ಹರಿಹರ: ಜಿಲ್ಲಾ ಆರೋಗ್ಯ ಅಧಿಕಾರಿಗಳೇ ನಿಮ್ಮ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವಂತಹ ನೌಕರರು ಮತ್ತು ಸಿಬ್ಬಂದಿಗಳ ಕನಿಷ್ಠ ಜ್ಞಾನದ ಪರಾಕ್ರಮವನ್ನು ನೀವು ಒಮ್ಮೆ ನೋಡಿ.

ಕೇವಲ ಸಂಬಳಕ್ಕಾಗಿ ಮತ್ತು ಸಿಂಬಳಕ್ಕಾಗಿ ಕೆಲಸ ಮಾಡುವಂಥ ನಿಮ್ಮ ನೌಕರರು ಮತ್ತು ಸಿಬ್ಬಂದಿಗಳು ಆರೋಗ್ಯ ಇಲಾಖೆಗೆ ಸಂಬಂಧಿಸಿದ ಜಾಗೃತ ಕಾರ್ಯಕ್ರಮವನ್ನು ಕೇವಲ ನೆಪ ಮಾತ್ರಕ್ಕೆ ನಡೆಸಿಕೊಂಡು ಬರುತ್ತಿದ್ದಾರೆ ಎಂಬ ಅನುಮಾನ ಕಾಡುತ್ತಿದೆ.
ಕೆಲವು ಸಾಂಕ್ರಾಮಿಕ ರೋಗಗಳ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನೀವು ಕೈಗೊಳ್ಳುವಂತಹ ಕಾರ್ಯಕ್ರಮಗಳಲ್ಲಿ ಕಳೆದ ಮೂರು ವರ್ಷದಿಂದ ನಿಮ್ಮ ಸಿಬ್ಬಂದಿಗಳು ಎಡವಟ್ಟು ಮಾಡಿಕೊಂಡು ಬಂದಿದ್ದಾರೆ .ಇದು ನಿಮ್ಮ ಗಮನಕ್ಕೆ ಇದುವರೆಗೂ ಬಾರದೆ ಇರುವುದು ಆಶ್ಚರ್ಯವನ್ನು ಮೂಡಿಸುತ್ತದೆ.

ಕಳೆದ ಒಂದು ವಾರದ ಹಿಂದೆ ನಿಮ್ಮ ಇಲಾಖೆಯವರ ಒತ್ತಡಕ್ಕೆ ಮಣಿದು ಕಾಟಾಚಾರಕ್ಕೆ ಎಂಬಂತೆ ನಿಮಗೆ ವರದಿ ಸಲ್ಲಿಸುವ ನೆಪದ ಕಾರಣದಿಂದ ಹರಿಹರ ತಾಲೂಕು ಬಿಳಸನೂರು ಆರೋಗ್ಯ ಕೇಂದ್ರ ವ್ಯಾಪ್ತಿಯ ರಾಜನಹಳ್ಳಿ ಉಪ ಕೇಂದ್ರದ ನಿಮ್ಮ ಆರೋಗ್ಯ ಸಿಬ್ಬಂದಿಗಳು ಕ್ಷಯ ರೋಗಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಪ್ರದೇಶದಲ್ಲಿ ಜಾಗೃತ ಕಾರ್ಯಕ್ರಮವನ್ನು ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಕಳೆದ ಮೂರು ವರ್ಷದ ಹಿಂದಿನ ಪ್ಲೆಕ್ಸ್ ಒಂದನ್ನು ಹಿಡಿದು ಜಾಗೃತಿ ಮೂಡಿಸುತ್ತಿದ್ದರು. ಅದರಲ್ಲಿ ರಾಜ್ಯದ ಮುಖ್ಯಮಂತ್ರಿ ಆಗಿ ಬಿಎಸ್ ಯಡಿಯೂರಪ್ಪನವರು ಹಾಗೂ ಆರೋಗ್ಯ ಸಚಿವರಾಗಿ ಡಾಕ್ಟರ್ ಸುಧಾಕರ್ ಅವರ ಭಾವಚಿತ್ರ ಹೊಂದಿತ್ತು.
ಯಡಿಯೂರಪ್ಪನವರ ಮುಖ್ಯಮಂತ್ರಿಯ ನಂತರ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾರೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾರೆ. ಆರೋಗ್ಯ ಸಚಿವರು ಸಹ ಬದಲಾಗಿದ್ದಾರೆ. ಆದರೆ ನಿಮ್ಮ ಇಲಾಖೆಯ ಸಿಬ್ಬಂದಿಗಳಿಗೆ ಮಾತ್ರ ಇನ್ನೂ ಯಡಿಯೂರಪ್ಪನವರು ಹಾಗೂ ಡಾಕ್ಟರ್ ಸುಧಾಕರ್ ಅವರ ಜಪದಲ್ಲಿ ಮುಳುಗಿ ಹೋಗಿದ್ದಾರೆ. ಹಾಗಾದರೆ ಕಳೆದ ವರ್ಷ ನಡೆಸಿದ ಕಾರ್ಯಕ್ರಮದಲ್ಲೂ ಇದೆ ಫ್ಲೆಕ್ಸ್ ಇದೆ ಅಲ್ಲವೇ? ನಿಮಗೆ ಕಳಿಸಿದ್ದ ಭಾವಚಿತ್ರದಲ್ಲೂ ಇದೆ ಫ್ಲೆಕ್ಸ್ ಹೊಂದಿದ್ದ ಫೋಟೋವನ್ನು ಕಳಿಸಿರುತ್ತಾರೆ ಅಲ್ಲವೇ? ಹಾಗಾದರೆ ನಿಮ್ಮ ಇಲಾಖೆಯವರು ಇವರು ಕಳಿಸಿದ ಫೋಟೋಗಳನ್ನು ಪಡೆದಿದ್ದಾರೆ ಎಂದಾಯಿತಲ್ಲವೇ? ಅಲ್ಲಿಗೆ ನಿಮ್ಮ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವಂಥ ನೌಕರರು ಮತ್ತು ಸಿಬ್ಬಂದಿಗಳಿಗೆ ಕನಿಷ್ಠ ಜ್ಞಾನದ ಕೊರತೆ ಇದೆ ಎಂದಾಯಿತಲ್ಲವೇ? ಹಾಗಾದರೆ ಇವರಿಗೆ ಸಾಮಾನ್ಯ ಜ್ಞಾನದ ತರಬೇತಿಯನ್ನ ಮೊದಲು ನೀಡುವುದು ಒಳಿತು ಅಲ್ಲವೇ? ಆ ಕೆಲಸವನ್ನ ಜಿಲ್ಲಾ ಆರೋಗ್ಯಧಿಕಾರಿಗಳು ಮೊದಲು ಮಾಡಿ. ನಿಮ್ಮ ಇಲಾಖೆಯವರು ಎಚ್ಚರ ತಪ್ಪಿದರೆ ಹೇಗೆ ಸ್ವಾಮಿ.

ಬಿಳಸನೂರು ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಶಿಷ್ಟಾಚಾರವನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ. ಸರ್ಕಾರದ ನೀತಿ ಸಂಹಿತೆಗೆ ಅವಮಾನಿಸಿದ್ದಾರೆ. ಇವರ ಮೇಲೆ ಕೂಡಲೇ ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ತೆಗೆದುಕೊಳ್ಳಬಹುದಾದ ಎಲ್ಲಾ ರೀತಿಯ ಕಾನೂನು ಕ್ರಮವನ್ನು ಕೂಡಲೇ ತೆಗೆದುಕೊಳ್ಳಿ. ಆ ಮೂಲಕ ತಮ್ಮ ಇಲಾಖೆಯ ಮಾನವನ್ನ ಕಾಪಾಡಿಕೊಳ್ಳಿ.
ಕನಿಷ್ಠ ಜ್ಞಾನದ ಕೊರತೆಯನ್ನ ಅನುಭವಿಸುತ್ತಿರುವ ಬಿಳಸನೂರು ಆರೋಗ್ಯ ಸಿಬ್ಬಂದಿಗಳಿಗೆ ತುರ್ತು ಚಿಕಿತ್ಸೆಯ ಅವಶ್ಯಕತೆ ತುಂಬಾ ಇದೆ. ಇನ್ನು ನಿಮ್ಮ ಇಲಾಖೆಯ ನಟರಾಜ್ ಮತ್ತು ಹೊರಕೇರಿ ಹಾಗೂ ಉಮಣ್ಣ ಇವರ ನಿರ್ಲಕ್ಷಕ್ಕೆ ಸಂಬಂಧಿಸಿದಂತೆ ಕೂಡಲೇ ನೋಟಿಸ್ ಜಾರಿ ಮಾಡಿ. ನಿಮ್ಮ ನೋಟಿಸ್ ಜಾರಿಗಾಗಿ ನಾವು ಕಾಯುತ್ತೇವೆ ರಾಜ್ಯ ಸರ್ಕಾರದ ಮಾನ್ಯ ಮುಖ್ಯಮಂತ್ರಿ ಅವರ ಗಮನಕ್ಕೆ ಈಗಾಗಲೇ ತರುವ ಪ್ರಯತ್ನಕ್ಕೆ ಸಿದ್ದರಾಗಿದ್ದೇವೆ.

ಆರೋಗ್ಯ ಅಧಿಕಾರಿಗಳು ಕೇವಲ ಮಾತಿನಲ್ಲಿ ಜಾಣ್ಮೆ ಇದ್ದರೆ ಸಾಲದು, ನಿಮ್ಮ ಇಲಾಖೆಯ ಸಿಬ್ಬಂದಿಗಳ ಕಾರ್ಯವೈಖಾರಿಗಳನ್ನು ಗಮನಿಸುವ ಚಾಣಾಕ್ಷತೆ ಇರಬೇಕು. ಅದಕ್ಕಾಗಿ ನಿಮಗೆ ಜಿಲ್ಲಾ ಆರೋಗ್ಯಧಿಕಾರಿಗಳ ಕುರ್ಚಿಯ ಮೇಲೆ ಕೂರಿಸಿರುವುದು. ಅದರ ಮಹತ್ವವನ್ನ ಅರಿತು ಆ ಕುರ್ಚಿಗೆ ತಕ್ಕಂತೆ ಕರ್ತವ್ಯ ನಿರ್ವಹಿಸಿ ಎಂಬುದೇ ನಮ್ಮ ಮಾಧ್ಯಮದ ಆಶಯ.

Post a Comment

0 Comments