ಹರಿಹರ ನಗರಸಭೆಯ ಕಮಿಷನರ್ ಬಸವರಾಜ್ ಐಗೂರ್ ವರ್ಗಾವಣೆ, ನೂತನ ಆಯುಕ್ತರಾಗಿ ಎಸ್. ಅಂಬಿಕಾ ನಿಯೋಜನೆ.

ಮಂದಾರ ನ್ಯೂಸ್ ,ಹರಿಹರ: ಹರಿಹರದಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳ ವರ್ಗಾವಣೆಯ ಪರ್ವ ಮುಂದುವರೆದಿದೆ.

ರಾಜಕೀಯ ನಾಯಕರ ಪ್ರತಿಷ್ಠೆಯ ಹೋರಾಟದ ಫಲವಾಗಿ ನಿಷ್ಠಾವಂತ ಅಧಿಕಾರಿಗಳ ವರ್ಗಾವಣೆ ನಡೆಯುತ್ತಿದೆ.

ಈಗಾಗಲೇ ತಾಲೂಕು ದಂಡಾಧಿಕಾರಿಗಳು ,ಕ್ಷೇತ್ರ ಶಿಕ್ಷಣಾಧಿಕಾರಿಗಳ ವರ್ಗಾವಣೆಗೆ ಕೈಹಾಕಿ ಸುಟ್ಟುಕೊಂಡ ರಾಜಕೀಯ ನಾಯಕರು ಇದೀಗ ಆಯುಕ್ತರ ವರ್ಗಾವಣೆಗೆ ಕೈ ಹಾಕಿದ್ದಾರೆ.

ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಹರಿಹರ ನಗರಸಭೆಯ ಆಯುಕ್ತರಾಗಿ ಜನಸ್ನೇಹಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಬಸವರಾಜ್ ಐಗೂರ ಇವರನ್ನು ವರ್ಗಾವಣೆ ಮಾಡಲಾಗಿದ್ದು, ಇವರ ಜಾಗಕ್ಕೆ ಎಸ್. ಅಂಬಿಕಾ ಇವರನ್ನು ಹರಿಹರ ನಗರ ಸಭೆಯ ಆಯುಕ್ತರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ನಿನ್ನೆ ದಿನ ಆದೇಶ ಹೊರಡಿಸಿದೆ.
ಈ ಬಾರಿ ರಾಜಕೀಯ ನಾಯಕರ ಪ್ರತಿಷ್ಠೆಯ ಹೋರಾಟಕ್ಕೆ ಜಯ ಸಿಗುವ ಸಾಧ್ಯತೆ ಇದೆ. ಬಸವರಾಜ್ ಐಗೋರಿವರು ತಮ್ಮ ವರ್ಗಾವಣೆಯನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರುವುದು ಅನುಮಾನವಿದೆ ಆದ್ದರಿಂದ ಈ ಬಾರಿಯ ವರ್ಗಾವಣೆಯಲ್ಲಿ ರಾಜಕೀಯ ಪ್ರತಿಷ್ಠೆಗಾಗಿ ಹೋರಾಟ ಮಾಡುತ್ತಿರುವ ನಾಯಕರಿಗೆ ಜಯ ಸಿಗಬಹುದು.

ಈಗಾಗಲೇ ದಂಡಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಆರೋಗ್ಯ ಇಲಾಖೆ ವೈದ್ಯಧಿಕಾರಿಗಳು,ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ, ನಗರಸಭೆಯ ಆಯುಕ್ತರ ವರ್ಗಾವಣೆಯ ಪರ್ವ ಮುಗಿದಿದ್ದು. ಮುಂದೆ ತಾಲ್ಲೂಕು ಪಂಚಾಯತ್ , ಡಿಪೋ ಮ್ಯಾನೇಜರ್, ಸಬ್ ರಿಜಿಸ್ಟರ್ ಕಚೇರಿ, ಅಬಕಾರಿ ಇಲಾಖೆ, ಲೋಕೋಪಯೋಗಿ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಮುಖವಾಗಿ ಉಳಿದ ಇಲಾಖೆಯಾಗಿದೆ. ಈ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳ ವರ್ಗಾವಣೆಯ ಕಸರತ್ತು ತೆರೆ ಮರೆಯಲ್ಲಿ ನಡೆಯುತ್ತಿದೆ. ಯಾವಾಗ ಬೇಕಾದರೂ ಈ ಇಲಾಖೆ ಅಧಿಕಾರಿಗಳ ವರ್ಗಾವಣೆ ಆಗಬಹುದು.

ಹರಿಹರ ನಗರ ಅಭಿವೃದ್ಧಿಯ ಸುಧಾರಣೆಗಾಗಿ ವರ್ಗಾವಣೆಯು ಅಥವಾ ರಾಜಕೀಯ ಪ್ರತಿಷ್ಠೆಯ ಕಣವಾಗಿ ಮಾಡಿಕೊಳ್ಳಲು ವರ್ಗಾವಣೆಯ ತಿಳಿಯದಾಗಿದೆ.

ಸದ್ಯ ರಾಜಕೀಯ ನಾಯಕರ ನಡುವೆ ಹರಿಹರ ವಿಧಾನಸಭಾ ಕ್ಷೇತ್ರವನ್ನು ತಮ್ಮ ನಿಯಂತ್ರಣಕ್ಕೆ ಪಡೆಯುವ ನಿಟ್ಟಿನಲ್ಲಿ ಬಾರಿ ಕಸರತ್ತು ನಡೆಯುತ್ತಿರುವುದಂತೂ ಸತ್ಯ.

Post a Comment

0 Comments