ಮಂದಾರ ನ್ಯೂಸ್ ,ತ್ಯಾಗರ್ತಿ: ಸಾಗರ ತಾಲೂಕಿನ ಕೆಲವು ಗ್ರಾಮಗಳಲ್ಲಿ ಗಾಂಜಾ ಬೆಳೆ ವಿಪರೀತವಾಗಿ ಬೆಳೆಯುತ್ತಿದ್ದಾರೆ. ಪೊಲೀಸ್, ಅಬಕಾರಿ ಹಾಗೂ ಅರಣ್ಯ ಇಲಾಖೆಯವರ ಕಣ್ಣು ತಪ್ಪಿಸಿ ಬೆಳೆದಿರುವ ಗಾಂಜಾವನ್ನು ಖರೀದಿಸಿ, ಸದ್ದಿಲ್ಲದೆ ಮಾರಾಟ ಮಾಡುವ ದೊಡ್ಡ ಮಟ್ಟದ ಮಾಫಿಯಾ ಸಾಗರದಲ್ಲಿ ತಲೆಯೆತ್ತಿದೆ.
ನಿನ್ನೆ ದಿನ ಸಾಗರ ತಾಲೂಕು ಆನಂದಪುರ ಪೊಲೀಸ್ ಠಾಣಾ ಸರಹದ್ದು ತ್ಯಾಗರ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಡುಗೆರೆ ಗ್ರಾಮದಲ್ಲಿ ಗಾಂಜಾ ಬೆಳೆಗಾರರಿಂದ ಖರೀದಿ ಮಾಡಿದ ವ್ಯಕ್ತಿ ಒಬ್ಬರನ್ನು ಆನಂದಪುರ ಪೊಲೀಸ್ ಇಲಾಖೆಯವರು ಬಂಧಿಸಿದ್ದಾರೆ.
ಪೊಲೀಸ್ ಇಲಾಖೆಯವರು ಬಂದಿಸಿದ ವ್ಯಕ್ತಿಯನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಂತೆ ತಾನು ಗಾಂಜಾವನ್ನ ಯಾರಿಂದ ಖರೀದಿಸಿದ್ದೇನೆ ಎಂಬುದನ್ನು ಬಾಯಿಬಿಟ್ಟಿದ್ದಾನೆ.
ಬಂಧಿಸಲ್ಪಟ್ಟ ವ್ಯಕ್ತಿಯಿಂದ ಮಾಹಿತಿ ಪಡೆದ ಪೊಲೀಸ್ ಇಲಾಖೆಯವರು ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಸಹ ಬಂಧಿಸಿದ್ದಾರೆ. ಇವರಿಬ್ಬರ ಜೊತೆ ಇನ್ನೂ ನಾಲ್ಕು ಜನರು ಇದ್ದಾರೆ ಎಂಬ ಮಾಹಿತಿ ಪಂಚಾಯ್ತಿ ವ್ಯಾಪ್ತಿಯ ಜನರಲ್ಲಿ ಹರಿದಾಡುತ್ತಿದೆ.
ಕುಡುಗೆರೆ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಕೆಲವು ಗ್ರಾಮದಲ್ಲಿ ಸದ್ದಿಲ್ಲದೆ ತಮ್ಮ ಬೆಳೆಯ ಮಧ್ಯೆ ವಿಪರೀತವಾದ ಗಾಂಜಾವನ್ನು ಬೆಳೆದಿದ್ದಾರೆ. ಬೆಳೆದ ಗಾಂಜಾದ ಪುಡಿಯನ್ನು ತಮ್ಮ ಮನೆ ಮತ್ತು ತಾಯಿ ಜಮೀನಿನ ರಹಸ್ಯ ಜಾಗದಲ್ಲಿ ಶೇಖರಣೆ ಮಾಡಿ ಇಟ್ಟುಕೊಂಡಿದ್ದಾರೆ ಎಂಬ ಮಾಹಿತಿ ಸಾರ್ವಜನಿಕರ ವಲಯದಲ್ಲಿ ಹರಿದಾಡುತ್ತಿದೆ.
ಗಾಂಜಾವನ್ನು ಕುಡೆಗೇರಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಕೆಲವು ಗ್ರಾಮದ ಜನರು ತಮ್ಮ ಜಮೀನಿನ ಮಧ್ಯೆ ಗಾಂಜಾ ಬೆಳೆದಿರುವುದು ಮತ್ತು ಮಾರಾಟ ಮಾಡುತ್ತಿರುವುದು ಸ್ಥಳೀಯ ಅರಣ್ಯ ಇಲಾಖೆಯವರ ಗಮನದಲ್ಲಿ ಇದೆ ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬಂದಿದೆ.
ಸ್ಥಳೀಯ ಅರಣ್ಯ ಇಲಾಖೆಯವರ ಕುಮ್ಮಕ್ಕಿನಿಂದಲೇ ಗಾಂಜಾವನ್ನ ಕೆಲವರು ಬೆಳೆಯುತ್ತಿದ್ದಾರೆ. ಇದು ಅರಣ್ಯ ಇಲಾಖೆಯವರ ಕಣ್ಣ ಮುಚ್ಚಾಲೆ ಆಟ ಎಂಬ ಮಾತು ಜನರು ಆಡಿಕೊಳ್ಳುತ್ತಿದ್ದಾರೆ.
ಆನಂದಪುರ ಪೊಲೀಸ್ ಇಲಾಖೆಯವರು ಮಾದಕ ವಸ್ತು ಗಾಂಜಾ ಮಾರಾಟಗಾರ ಹಾಗೂ ಖರೀದಿದಾರ ಇಬ್ಬರನ್ನು ಬಂಧಿಸಿದ್ದು, ಇನ್ನೂ ನಾಲ್ಕು ಜನರನ್ನು ಬಂಧಿಸುವ ವಿಚಾರದಲ್ಲಿ ವಿಳಂಬ ತಂತ್ರ ಅನುಸರಿಸುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿದ್ದು, ಪೋಲಿಸ್ ಇಲಾಖೆಯವರ ವಿಳಂಬಕ್ಕೆ ಯಾವುದಾದರೂ ರಾಜಕೀಯ ಒತ್ತಡ ಇರಬಹುದೇ? ಎಂಬ ಅನುಮಾನ ಕಾಡುತ್ತಿದೆ.
ಅನಂದಪುರ ಪೊಲೀಸ್ ಠಾಣೆಯಲ್ಲಿ ಖಡಕ್ ಪಿಎಸ್ಐ ಯುವರಾಜ್ ಕರ್ತವ್ಯ ನಿರ್ವಹಿಸುತ್ತಿದ್ದು ತ್ಯಾಗರ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮದಲ್ಲಿ ಕಂಡುಬಂದಿರುವ ಗಾಂಜಾವನ್ನು ಸಂಪೂರ್ಣವಾಗಿ ಮಟ್ಟ ಹಾಕುವಲ್ಲಿ ಯಶಸ್ವಿಯಾಗುತ್ತಾರ ಕಾದು ನೋಡಬೇಕಾಗಿದೆ.
ಕೂಡಲೆ ಪೊಲೀಸ್ ಇಲಾಖೆಯವರು ತಲೆಮರಿಸಿಕೊಂಡಿರುವ ಇನ್ನು ನಾಲ್ಕು ಜನರು ಗಾಂಜಾ ಮಾರಾಟದಲ್ಲಿ ಶಾಮೀಲಾಗಿದ್ದಾರೆ ಎಂಬ ಮಾತು ಕೇಳಿಬಂದಿದ್ದು ಅವರನ್ನು ಕೂಡಲೇ ಬಂಧಿಸಬೇಕು ಎಂಬುದು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಲವು ನಾಗರಿಕರು ಒತ್ತಾಯಿಸಿದ್ದಾರೆ.
0 Comments