ಮಂದಾರ ನ್ಯೂಸ್ ,ಹರಿಹರ: ಕಳೆದ ಎರಡು ದಿನಗಳ ಹಿಂದೆ ಹರಿಹರ ನಗರಸಭೆಯ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಸವರಾಜ್ ಐಗೂರು ಇವರನ್ನು ವರ್ಗಾವಣೆ ಮಾಡಿ ಇವರ ಜಾಗಕ್ಕೆ ಎಸ್ ಅಂಬಿಕಾ ಇವರನ್ನು ನಗರಸಭೆಯ ಆಯುಕ್ತರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.
ಹರಿಹರ ನಗರಸಭೆಯ ಆಯುಕ್ತರಾಗಿ ನಿಯೋಜನೆಗೊಂಡಿರುವ ಎಸ್ ಅಂಬಿಕಾ ಇವರು ಇಂದು ನಗರ ಸಭೆಯ ಆಯುಕ್ತರಾಗಿ ಅಧಿಕಾರವನ್ನು ಸ್ವೀಕರಿಸಬೇಕಾಗಿತ್ತು. ಆದರೆ ಇವರು ಹರಿಹರ ನಗರಸಭೆಯ ಆಯುಕ್ತರಾಗಿ ಅಧಿಕಾರ ಸ್ವೀಕರಿಸುವುದು ಅನುಮಾನ ಎಂಬ ಮಾತು ಕೇಳಿ ಬರುತ್ತಿದೆ.
ವರ್ಗಾವಣೆಯ ವಿಚಾರದಲ್ಲಿ ರಾಜಕೀಯ ಪ್ರತಿಷ್ಠೆಗಾಗಿ ಹೋರಾಟ ಮಾಡುತ್ತಿರುವ ನಾಯಕರುಗಳು ಎಲ್ಲೋ ಒಂದು ಕಡೆ ಕಾರ್ಯಾಂಗದ ವಿಚಾರದಲ್ಲಿ ಅತಿ ಹೆಚ್ಚಿನ ಹಸ್ತಕ್ಷೇಪ ನಡೆಸುತ್ತಿದ್ದು ಅಧಿಕಾರಿಗಳ ಮಧ್ಯೆ ವೈಮನಸ್ಸಿಗೆ ಕಾರಣರಾಗುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಎಸ್ ಅಂಬಿಕಾ ಇವರನ್ನು ಹರಿಹರ ನಗರ ಸಭೆಯ ಆಯುಕ್ತರಾಗಿ ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದ್ದರು ಪ್ರಮುಖ ಪಕ್ಷದ ರಾಜಕೀಯ ನಾಯಕರು ಎಚ್ ಅಂಬಿಕಾ ಇವರು ಹರಿಹರ ನಗರಸಭೆಯ ಆಯುಕ್ತರಾಗಿ ಅಧಿಕಾರ ಸ್ವೀಕರಿಸದಂತೆ ಒತ್ತಡ ಹೇರುತ್ತಿದ್ದಾರೆ ಎಂಬ ಮಾತು ಸಾರ್ವಜನಿಕರ ವಲಯದಿಂದ ಕೇಳಿ ಬರುತ್ತಿದೆ.
ಸಾರ್ವಜನಿಕರ ವಲಯದಿಂದ ಕೇಳು ಬರುತ್ತಿರುವ ಮಾತಿಗೆ ಸಮಂಜಸ ಉತ್ತರ ಪಡಿಯುವ ನಿಟ್ಟಿನಲ್ಲಿ ನಮ್ಮ ಮಂದಾರ ನ್ಯೂಸ್ ಮಾಧ್ಯಮವು ಎಸ್ ಅಂಬಿಕಾ ಇವರಿಗೆ ಫೋನ್ ಕರೆ ಮಾಡಿದರೆ ಅವರ ಫೋನ್ ಸ್ವಿಚ್ ಆಫ್ ಬರುತ್ತಿದೆ. ಮತ್ತೊಂದು ಮಾಹಿತಿಯ ಪ್ರಕಾರ ಎಸ್. ಅಂಬಿಕಾ ಇವರು ಕೋರ್ಟ್ ಮೆಟ್ಟಿಲೇರಬಹುದು ಎಂಬ ಮಾತು ಸಹ ಕೇಳಿ ಬರತೊಡಗಿದೆ.
ಮತ್ತೊಮ್ಮೆ ಅಧಿಕಾರಿಗಳ ನಡುವೆ ಕೋರ್ಟ್ ಮೆಟ್ಟಿಲೇರುವ ಸಮರ ನಡೆಯಲಿದ್ದು ಯಾರ ಪರವಾಗಿ ನ್ಯಾಯಾಲಯ ಆದೇಶ ನೀಡುತ್ತದೆ ಎಂಬುದು ಕಾದು ನೋಡುವಂತಾಗಿದೆ.
ಒಟ್ಟಾರೆಯಾಗಿ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಹರಿಹರ ತಾಲ್ಲೂಕಿನ ಜನಸಾಮಾನ್ಯರಿಗೆ ಪುಕ್ಕಟೆ ಮನರಂಜನೆ ಕಳೆದ ಒಂದು ತಿಂಗಳಿಂದ ದೊರೆಯುತ್ತಿದೆ.
ಸದ್ಯ ಹರಿಹರ ಡಿಪೋ ಮ್ಯಾನೇಜರ್ ತಮ್ಮ ವರ್ಗಾವಣೆಯ ಸುಳಿವು ದೊರೆಯುತ್ತಿದ್ದಂತೆ ಸರ್ಕಾರದ ಮಟ್ಟದಲ್ಲಿ ಎಲ್ಲರಿಗಿಂತ ಮೊದಲೇ ತಮ್ಮ ಅಧಿಕಾರಕ್ಕೆ ತೊಂದರೆ ಆಗಬಾರದು ಎಂಬ ಮುಂದಾಲೋಚನೆಯಿಂದ ಎಚ್ಚೆತ್ತುಕೊಂಡು ತಮ್ಮ ಕುರ್ಚಿಯನ್ನ ಸೇಪ್ ಮಾಡಿಕೊಂಡ ಬುದ್ಧಿವಂತ ಅಧಿಕಾರಿಯಾಗಿದ್ದಾರೆ.
0 Comments