ಮಂದಾರ ನ್ಯೂಸ್, ಹರಿಹರ: ಸದ್ಯ ಹರಿಹರದಲ್ಲಿ ಕ್ಷೇತ್ರದ ಅಭಿವೃದ್ಧಿಗಿಂತ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ವರ್ಗಾವಣೆಯ ಬಗ್ಗೆ ರಾಜಕಾರಣಿಗಳು ಬಾರಿ ತಲೆಕೆಡಿಸಿಕೊಂಡಂತೆ ಕಾಣುತ್ತಿದೆ.
ಅಧಿಕಾರಿಗಳ ವರ್ಗಾವಣೆಯನ್ನು ತಮ್ಮ ರಾಜಕೀಯ ಪ್ರತಿಷ್ಠೆಗಾಗಿ ಒಬ್ಬರಿಗಿಂತ ಒಬ್ಬರು ಪೈಪೋಟಿಗೆ ಬಿದ್ದಿದ್ದಾರೆ. ಕಾನೂನುಗಳ ಅರಿವಿಲ್ಲದೆ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ನಡೆಯುತ್ತಿದೆಯೇ?
ಹರಿಹರ ತಾಲೂಕಿಗೆ ಅಧಿಕಾರಿಗಳು ವರ್ಗಾವಣೆಯಾಗಿ ಇನ್ನೂ ಆರೇಳು ತಿಂಗಳು ಕಳೆದಿಲ್ಲ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ತಮ್ಮ ಮಾತನ್ನು ಕೇಳದ ಹಾಗೂ ತಮ್ಮ ಅಣತಿಯಂತೆ ನಡೆದುಕೊಳ್ಳದ ಸರ್ಕಾರಿ ಅಧಿಕಾರಿಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ವರ್ಗಾವಣೆ ಮಾಡುತ್ತಿದ್ದಾರೆ. ಆದರೆ ಅಧಿಕಾರಿಗಳು ಕಾನೂನಿನ ಸಹಾಯದಿಂದ ರಾಜಕಾರಣಿಗಳಿಗೆ ತಕ್ಕ ತಿರುಗೇಟು ನೀಡುವ ಮೂಲಕ ಅವರ ಕೈಯನ್ನು ಕಟ್ಟಿ ಹಾಕುತ್ತಿದ್ದಾರೆ.
ಪ್ರತಿಷ್ಠೆಗಾಗಿ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿರುವ ರಾಜಕಾರಣಿಗಳು ಹರಿಹರ ಡಿಪೋ ಮ್ಯಾನೇಜರ್ ಸಂದೀಪ್ ಇವರ ವರ್ಗಾವಣೆಗೆ ಏಕೆ ಪ್ರಯತ್ನಿಸುತ್ತಿಲ್ಲ ,ಎಂಬ ಮಾತು ಸಾರ್ವಜನಿಕರ ವಲಯದಿಂದ ಕೇಳಿ ಬರುತ್ತಿದೆ.
ಹರಿಹರ ಡಿಪೋ ಮ್ಯಾನೇಜರ್ ವರ್ಗಾವಣೆ ಆಗಲೇಬೇಕು. ಇವರ ವರ್ಗಾವಣೆ ಆಗದೆ ತಾಲೂಕಿನ ಶಾಲಾ ಮಕ್ಕಳಿಗೆ ತಮ್ಮ ಭವಿಷ್ಯವನ್ನ ರೂಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಮಕ್ಕಳ ಅನುಕೂಲಕ್ಕೆ ತಕ್ಕಂತೆ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಬೇಕಾದ ಡಿಪೋ ಮ್ಯಾನೇಜರ್ ಸಂದೀಪ್ ದುರಾಂಕಾರಿಯಂತೆ ಮಕ್ಕಳು ಮತ್ತು ಅವರ ಪೋಷಕರು ಹಾಗೂ ಸಂಘ- ಸಂಸ್ಥೆಗಳೊಂದಿಗೆ ವರ್ತಿಸುತ್ತಾರೆ ಎಂಬ ಆರೋಪ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಆಗಾಗ ಕೇಳಿಬರುತ್ತದೆ.
ಡಿಪೋ ಮ್ಯಾನೇಜರ್ ಸಂದೀಪ್ ಹರಿಹರಕ್ಕೆ ಬಂದು ಈಗಾಗಲೇ ಸರಿಸುಮಾರು ನಾಲ್ಕು ವರ್ಷವನ್ನು ಕಳೆದಿದ್ದಾರೆ. ಇವರನ್ನು ತಾಲೂಕಿನಿಂದ ವರ್ಗಾವಣೆ ಮಾಡಲು ಕಾನೂನಿನಲ್ಲಿ ಯಾವುದೇ ಅಡೆ-ತಡೆಗಳು ಇಲ್ಲ. ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಹಾಗೂ ಪ್ರಯಾಣಿಕರ ಸುಖಕರ ಪ್ರಯಾಣಕ್ಕಾಗಿ ದುರಾಂಕಾರಿ ಡಿಪೋ ಮ್ಯಾನೇಜರ್ ಸಂದೀಪ್ ಇವರ ವರ್ಗಾವಣೆ ಆಗಲೇಬೇಕು.
ಹರಿಹರ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ಪಿ ಹರೀಶ್ ಅವರು ರಾಜನಹಳ್ಳಿ ಮಾರ್ಗವಾಗಿ ದೊಳೆಹೊಳೆ ವರೆಗೆ ಬೆಳಗಿನ ಸಮಯದಲ್ಲಿ ಶಾಲಾ ಮಕ್ಕಳ ಅನುಕೂಲಕ್ಕೆ ತಕ್ಕಂತೆ ಬಸ್ಸನ್ನ ಬಿಡುವಂತೆ ಖುದ್ದು ತಾವೇ ತಾಕಿತ್ತು ಮಾಡಿರುತ್ತಾರೆ. ಆದರೆ ಡಿಪೋ ಮ್ಯಾನೇಜರ್ ಸಂದೀಪ್ ಸರ್ವಧಿಕಾರಿಯಂತೆ ವರ್ತಿಸುತ್ತಿದ್ದು ಶಾಸಕರ ಮಾತಿಗೆ ಯಾವುದೇ ಕಿಮ್ಮತ್ತು ನೀಡುತ್ತಿಲ್ಲ ಎಂಬ ಆರೋಪವು ಸಾರ್ವಜನಿಕರ ವಲಯದಿಂದ ಕೇಳಿ ಬರುತ್ತಿದೆ.
ಕಳೆದ ಎರಡು ದಿನಗಳ ಹಿಂದೆ ಬಿಳಸನೂರು ಗ್ರಾಮಸ್ಥರು ಡಿಪೋ ಮ್ಯಾನೇಜರ್ ಸಂದೀಪ್ ಇವರಿಗೆ ಶಾಲಾ ಮಕ್ಕಳು ಮತ್ತು ಗ್ರಾಮಸ್ಥರ ಅನುಕೂಲಕ್ಕಾಗಿ ಬೆಳಗಿನ ಸಮಯದಲ್ಲಿ ಈ ಹಿಂದೆ ಓಡಾಡುತ್ತಿದ್ದ ಬಸ್ಸನ್ನು ಮತ್ತೆ ಪುನಾರಂಬಿಸುವಂತೆ ಒತ್ತಾಯಿಸಿ ಡಿಪೋ ಮ್ಯಾನೇಜರ್ ಸಂದೀಪ್ ಇವರಿಗೆ ಮನವಿಯನ್ನ ನೀಡಿದ್ದಾರೆ.
ಹರಿಹರ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ಪಿ ಹರೀಶ್ ಅವರು ತಮ್ಮ ಮಾತಿಗೆ ಕಿಮ್ಮತ್ತು ನೀಡದ ಡಿಪೋ ಮ್ಯಾನೇಜರ್ ಇವರನ್ನ ಕೂಡಲೇ ತಾಲೂಕಿನಿಂದ ವರ್ಗಾವಣೆ ಮಾಡುವ ನಿಟ್ಟಿನಲ್ಲಿ ಕೂಡಲೇ ಕಾರ್ಯ ಪ್ರವೃತ್ತರಾಗಬೇಕಾಗಿದೆ. ಆ ಮೂಲಕ ತಾಲೂಕಿನ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಶಾಸಕರು ಮುನ್ನುಡಿ ಬರೆಯಬೇಕು .ಅವರ ಜವಾಬ್ದಾರಿ ಹೆಚ್ಚಿದೆ.
ತಾಲೂಕಿನ ಪ್ರಗತಿ ಶಿಕ್ಷಣದ ವ್ಯವಸ್ಥೆಯ ಮೇಲೆ ನಿಂತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಿಗಬೇಕಾದರೆ ಉತ್ತಮ ಸಾರಿಗೆ ಸೌಲಭ್ಯವನ್ನು ಮೊದಲು ಕಲ್ಪಿಸಲೇಬೇಕು. ಆ ನಿಟ್ಟಿನಲ್ಲಿ ಹರಿಹರ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ಪಿ ಹರೀಶ್ ಅವರ ಜವಾಬ್ದಾರಿ ಹೆಚ್ಚಿದೆ ಎಂದೆಳಬಹುದು.
ಈಗಾಗಲೇ ಬಿಳಸನೂರು ಗ್ರಾಮಸ್ಥರು ಮಾರ್ಗ ಸಂಖ್ಯೆ -53 ಹರಿಹರ -ದೊಳೆಹೊಳೆ -ಹೊಳೆ ಸಿರಿಗೆರೆ ಮಾರ್ಗದ ಬಸ್ಸನ್ನು ನಿಲ್ಲಿಸಿದ್ದು ಇದರಿಂದ ಈ ಭಾಗದ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಆದ್ದರಿಂದ ಸಾರ್ವಜನಿಕರ ಅನುಕೂಲಕ್ಕೆ ಅನುಗುಣವಾಗಿ ಬಸ್ಸಿನ ವ್ಯವಸ್ಥೆಯನ್ನು ಪುನರ್ ಆರಂಭಿಸುವಂತೆ ಗ್ರಾಮಸ್ಥರು ಡಿಪೋ ಮ್ಯಾನೇಜರ್ ಅವರಲ್ಲಿ ಲಿಖಿತ ರೂಪದ ಬರಹದ ಮೂಲಕ ಮನವಿ ಮಾಡಿಕೊಂಡಿದ್ದಾರೆ. ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದ ಮಹಿಳಾ ಪ್ರಯಾಣಿಕರು ಹೆಚ್ಚಾಗಿ ಈಗ ಇರುವಂತಹ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದು ಇದರಿಂದ ಶಾಲಾ ವಿದ್ಯಾರ್ಥಿಗಳಿಗೆ, ಹಿರಿಯ ನಾಗರಿಕರಿಗೆ ಮತ್ತು ಇತರೆ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿದೆ.
ನಿಗದಿತ ಸಮಯದಲ್ಲಿ ಶಾಲಾ -ಕಾಲೇಜು ಮತ್ತು ಕೆಲಸಕ್ಕೆ ಹೋಗಲು ಸಾಧ್ಯವಾಗದ ಕಾರಣ ಮತ್ತು ಸರ್ಕಾರಿ ಬಸ್ಗಳ ವ್ಯವಸ್ಥೆ ಸಮರ್ಪಕವಾಗಿ ಇರದ ಕಾರಣ ಅನೇಕ ಬಸ್ ಗ್ರಾಮೀಣ ಭಾಗಕ್ಕೆ ಬರುವುದನ್ನು ನಿಲ್ಲಿಸಿರುವುದರಿಂದ ತಾವುಗಳು ಕೂಡಲೇ ಈ ಮಾರ್ಗದ ಜನರ ಅನುಕೂಲಕ್ಕೆ ತಕ್ಕಂತೆ ಬಸ್ಸಿನ ವ್ಯವಸ್ಥೆ ಕಲ್ಪಿಸಿ.
ಈ ಹಿಂದೆ ಹರಿಹರ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ಪಿ ಹರೀಶ್ ಅವರು ತಮಗೆ ಮೌಖಿಕವಾಗಿ ತಿಳಿಸಿದ್ದರೂ ತಾವು ಇದುವರೆಗೂ ಶಾಸಕರ ಮಾತಿಗೆ ಗೌರವವನ್ನು ನೀಡಿರುವುದಿಲ್ಲ.
ಡಿಪೋ ಮ್ಯಾನೇಜರ್ ಸಂದೀಪ್ ಅವರೇ.! ಮುಂದಿನ ದಿನದಲ್ಲಿ ತಮ್ಮ ಮನವಿಗೆ ಸ್ಪಂದಿಸಿ ಹರಿಹರ ದೊಳೆಹೊಳೆ- ಸಿರಿಗೆರೆ ಮಾರ್ಗದಲ್ಲಿ ಬಸ್ಸನ್ನು ಬಿಡಲಾಗದಿದ್ದರೆ ಯಾವ ಕಾರಣಕ್ಕಾಗಿ ಬಸ್ಸನ್ನು ಬಿಡಲು ಬರುವುದಿಲ್ಲ ಎಂಬುದರ ಬಗ್ಗೆ ಲಿಖಿತ ಉತ್ತರವನ್ನ ನೀಡುವವರೆಗೂ ತಾವು ಈಗ ಬರುತ್ತಿರುವ ಬಸ್ಸುಗಳನ್ನ ತಡೆದು ಪ್ರತಿಭಟಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಗ್ರಾಮಸ್ಥರು ಮ್ಯಾನೇಜರ್ ಸಂದೀಪ್ ಇವರಿಗೆ ನೀಡಿದ್ದಾರೆ.
ಒಟ್ಟಾರೆಯಾಗಿ ತಾಲೂಕಿನಲ್ಲಿ ಯಾವ ಅಧಿಕಾರಿ ವರ್ಗಾವಣೆಯಾಗಬೇಕು ಅವರು ಆಗುತ್ತಿಲ್ಲ ಯಾರು ಇರಬೇಕು ಅವರ ವರ್ಗಾವಣೆಯಾಗುತ್ತಿದೆ ಇದರಿಂದ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ತೊಂದರೆಯಾಗುತ್ತಿದೆ.
0 Comments