ಮಂದಾರ ನ್ಯೂಸ್, ದಾವಣಗೆರೆ; ಆ. 7 (ಕರ್ನಾಟಕ ವಾರ್ತೆ) : ಹರಿಹರ ತಾಲ್ಲೂಕಿನಲ್ಲಿ ಆಗಸ್ಟ್ 12 ರವರೆಗೆ ಮಿಷನ್ ಇಂದ್ರಧನುμï 5.0 ಅಭಿಯಾನದ ಮೊದಲ ಹಂತ ನಡೆಯಲಿದ್ದು, ಉಚಿತ ಲಸಿಕೆಯನ್ನು ಹಾಕಿಸಿಕೊಂಡು ಖಚಿತ ಆರೋಗ್ಯ ರಕ್ಷಣೆ ಪಡೆದುಕೊಳ್ಳಿ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಮೋಹನ ತಿಳಿಸಿದರು.
ಹರಿಹರ ತಾಲ್ಲೂಕಿನ ಬೆಳ್ಳೂಡಿಯ ಶಂಷಿಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಗಸ್ಟ್ 7 ರಂದು ಮಿಷನ್ ಇಂದ್ರಧನುμï 5.0 ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಉಪ ಕೇಂದ್ರಗಳು, ಅಂಗನವಾಡಿ ಕೇಂದ್ರಗಳು ಮತ್ತು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇಂದಿನಿಂದ ಆಗಸ್ಟ್ 12 ರವರೆಗೆ ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ಮಿಷನ್ ಇಂದ್ರಧನುμï 5.0 ಅಭಿಯಾನ ಕಾರ್ಯಕ್ರಮ ನಡೆಯಲಿದ್ದು, ರೋಟಾ. ದಡಾರ-ರುಬೆಲ್ಲಾ, ಡಿಪಿಟಿ ಬೂಸ್ಟರ್ ಜೊತೆಗೆ ಓಪಿವಿ ಮತ್ತು ಓಪಿವಿ ಬೂಸ್ಟರ್ ಡೋಸ್‍ಗಳಿಂದ ತಪ್ಪಿಸಿಕೊಂಡವರು ಲಸಿಕೆಯನ್ನು ತಪ್ಪದೇ ಹಾಕಿಸಿಕೊಳ್ಳಿ ಇದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದರು.
ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಉಮಣ್ಣ ಮಾತನಾಡಿ ತೀವ್ರ ತರವಾದ ಮಿಷನ್ ಇಂದ್ರಧನುμï ಕಾರ್ಯಕ್ರಮವು ನಾಲ್ಕು ವರ್ಷಗಳನ್ನು ಸಂಪೂರ್ಣವಾಗಿಸಿ, ಐದನೇ ವರ್ಷದಲ್ಲಿ ಪ್ರಾರಂಭವಾಗಿದೆ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು, 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಿ ಆರೋಗ್ಯವಂತ ಮಕ್ಕಳನ್ನಾಗಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಆಡಳಿತ ವೈದ್ಯಾಧಿಕಾರಿಗಳಾದ ಡಾ. ಶಿಲ್ಪ ಮಾತನಾಡಿ ಗರ್ಭಿಣಿ ಮಹಿಳೆಯರಿಗೆ ತಮ್ಮ ಸುರಕ್ಷತೆ ಮತ್ತು ಮಗುವಿನ ಆರೈಕೆ ಬಗ್ಗೆ ತಾಯಿ ಕಾರ್ಡ್‍ನಲ್ಲಿ ಸಂಪೂರ್ಣವಾದ ಮಾಹಿತಿ ಲಭ್ಯವಿರುತ್ತದೆ. ಗರ್ಭಿಣಿ ಅವಧಿಯಲ್ಲಿ ಟಿ.ಟಿ ಲಸಿಕೆ ಕಬ್ಬಿಣಾಂಶದ ಮತ್ತು ಕ್ಯಾಲ್ಸಿಯಂ ಮಾತ್ರೆಗಳನ್ನು ಸೇವಿಸಬೇಕು ಎಂದು ಗರ್ಭಿಣಿಯರಿಗೆ ಮತ್ತು ತಾಯಂದಿರಿಗೆ ಮಾಹಿತಿ ನೀಡಿದರು
ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮೀನಾಕ್ಷಮ್ಮ. ತಾಲ್ಲೂಕು ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಯಾದ ಶ್ರೀಮತಿ ಸುಧಾ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಶ್ರೀಮತಿ ಭಾನುಮತಿ, ಸಿ.ಹೆಚ್.ಒ ಪ್ರತಿಭಾ. ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ್ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
0 Comments