ಹರಿಹರದ ತಾಲೂಕು ದಂಡಾಧಿಕಾರಿಯಾಗಿ ಪೃಥ್ವಿ ಸಾನಿಕಂ.!!


ಮಂದಾರ ನ್ಯೂಸ್, ಹರಿಹರ: ಕಳೆದ ಎರಡು ದಿನಗಳ ಹಿಂದೆ ಹರಿಹರ ತಾಲೂಕ್ ದಂಡಾಧಿಕಾರಿಗಳಾಗಿ ಗುರುಬಸವರಾಜ್ ಕೆ ಎಂ ಇವರನ್ನ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಪೃಥ್ವಿ ಈ ಹಿಂದಿನ ತಾಹಶೀಲ್ದಾರ್ ಆಗಿದ್ದ ಪೃಥ್ವಿ ಸಾನಿಕಂ ಇವರಿಗೆ ಯಾವುದೇ ಸ್ಥಳವನ್ನು ತೋರಿಸಿರಲಿಲ್ಲ. ಅಲ್ಲದೆ ಇವರು ಹರಿಹರ ತಾಲೂಕ್ ದಂಡಾಧಿಕಾರಿಗಳಾಗಿ ಇನ್ನು ನಾಲ್ಕು ತಿಂಗಳು ಕಳೆದಿರಲಿಲ್ಲ. ಇದನ್ನು ಪ್ರಶ್ನಿಸಿ ಪೃಥ್ವಿ ಸಾನಿಕಂ ಇವರು ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ನಿನ್ನೆ ದಿನ ಪೃಥ್ವಿ ಸಾನಿಕಂ ಪರವಾಗಿ ತೀರ್ಪು ನೀಡಿದೆ.

ಯಾವುದೇ ಸರ್ಕಾರಿ ನೌಕರರನ್ನು ವರ್ಗಾವಣೆ ಮಾಡಬೇಕಾದರೆ ಕನಿಷ್ಠ ಒಂದು ವರ್ಷ ಆಗಿರಬೇಕು ಆದರೆ ಹರಿಹರ ತಾಲೂಕು ದಂಡಾಧಿಕಾರಿಗಳನ್ನು ಕೇವಲ ನಾಲ್ಕು ತಿಂಗಳಿಗೆ ವರ್ಗಾವಣೆ ಮಾಡಲಾಯಿತು. ಆದ್ದರಿಂದ ಪೃಥ್ವಿ ಕಾರ್ಯಕ್ರಮ ಇವರು ತಮ್ಮ ವರ್ಗಾವಣೆಯನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದರು.

ಕೋರ್ಟ್ ಆದೇಶದಂತೆ ಪೃಥ್ವಿ ಸಾನಿಕಂ ಇವರು ಹರಿಹರದ ತಾಲೂಕ ದಂಡೆಧಿಕಾರಿಗಳಾಗಿ ಇಂದಿನಿಂದ ತಮ್ಮ ಕಾರ್ಯವನ್ನು ಆರಂಭಿಸಿದ್ದಾರೆ.

ರಾಜಕಾರಣಿಗಳ ಪ್ರತಿಷ್ಠೆಗೆ ಪ್ರಾಮಾಣಿಕ ಅಧಿಕಾರಿಗಳ ವರ್ಗಾವಣೆ ಸರಿಯಲ್ಲ. ಸರ್ಕಾರಿ ಅಧಿಕಾರಿಗಳು ಮುಕ್ತವಾಗಿ ತಮ್ಮ ವ್ಯಾಪ್ತಿಯಲ್ಲಿ ಕೆಲಸ ಕಾರ್ಯಗಳನ್ನು ನಡೆಸಿಕೊಂಡು ಹೋಗಲು ಎಲ್ಲರೂ ಸಹಕಾರ ನೀಡಬೇಕು. ಪದೇ ಪದೇ ವರ್ಗಾವಣೆ ಮಾಡುವುದರಿಂದ ಆಡಳಿತ ಯಂತ್ರ ದುರ್ಬಲಗೊಳ್ಳುತ್ತದೆ.

ಪೃಥ್ವಿ ಸಾನಿಕಂ ಹರಿಹರ ತಾಲೂಕ್ ದಂಡಾಧಿಕಾರಿಗಳಾಗಿ ತಮ್ಮ ಕಾರ್ಯ ಆರಂಭಿಸಿದ್ದರು, ಈ ಹಿಂದಿನ ದಂಡಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಗುರುಬಸವರಾಜ್ ಕೆ.ಎಂ ಇವರು ತಾವು ಯಾವ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕಾಗಿದೆ. 

ಸದ್ಯಕ್ಕೆ ಎಲ್ಲ ಗೊಂದಲಕ್ಕೆ ಪರಿಹಾರ ಸಿಕ್ಕಂತಾಗಿದೆ.


Post a Comment

0 Comments