ಮಂದಾರ ನ್ಯೂಸ್, ಹರಿಹರ: ಮೊಬೈಲ್ ಮಾರಾಟಗಾರರ ಹಿತವನ್ನ ಕಾಪಾಡುವ ಉದ್ದೇಶದಿಂದ ಹರಿಹರದಲ್ಲಿ ನೆನ್ನೆಯಿಂದ ಮೊಬೈಲ್ ಸೇಲ್ಸ್ ಅಸೋಸಿಯೇಷನ್ ಅಸ್ತಿತ್ವಕ್ಕೆ ಬಂದಿದೆ.
ಹರಿಹರದ 32ಕ್ಕೂ ಹೆಚ್ಚು ಮೊಬೈಲ್ ಸೇಲ್ಸ್ ಮಾಲೀಕರು ನೆನ್ನೆ ದಿನ ನಗರದ ಉಡುಪಿ ಕಾಮತ್ ಹೋಟೆಲ್ ನಲ್ಲಿ ಸಭೆ ಸೇರಿ ಮೊಬೈಲ್ ಸೇಲ್ಸ್ ಅಸೋಸಿಯೇಷನ್ ಸಂಘವನ್ನ ಜಾರಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು.
ಎಲ್ಲಾ ಮೊಬೈಲ್ ಸೇಲ್ಸ್ ಅಸೋಸಿಯೇಷನ್ ಮಾಲೀಕರು ಸ್ಯಾಮ್ಸಂಗ್ ಮೊಬೈಲ್ಸ್ ಸೇಲ್ಸ್ ಡಿಸ್ಟ್ರಿಬ್ಯೂಟರ್ ರವಿ ಟೆಲಿಕಾಂ ಇವರನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದರು.
ಅಧ್ಯಕ್ಷರಾಗಿ ಆಯ್ಕೆಯಾದ ರವಿ ಟೆಲಿಕಾಂ ಅವರು ನಮ್ಮ ಮಾಧ್ಯಮ ಪ್ರತಿನಿಧಿಯೊಂದಿಗೆ ತಮ್ಮ ಸಂತಸವನ್ನು ಹಂಚಿಕೊಂಡರು. ಮೊಬೈಲ್ ಮಾರಾಟಗಾರರ ಹಿತವನ್ನ ಕಾಪಾಡುವುದು ಹಾಗೂ ಎಲ್ಲಾ ಮಾಲಿಕರಿಗೆ ಕಾರ್ಮಿಕ ಇಲಾಖೆ ಹಾಗೂ ನಗರಸಭೆಯಿಂದ ಕಾನೂನು ಬದ್ಧವಾಗಿ ಸಿಗುವಂತ ಎಲ್ಲಾ ಸೌಲಭ್ಯವನ್ನು ಕೊಡಿಸುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತೇನೆ. ನಾವುಗಳು ಅಸಂಘಟಿತ ಕಾರ್ಮಿಕರಾಗಿದ್ದು ನಮಗೆ ಇದುವರೆಗೂ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಕರೋನ ಸಂಕಷ್ಟದ ಪರಿಸ್ಥಿತಿಯ ಸಂದರ್ಭದಲ್ಲಿ ನಮ್ಮೆಲ್ಲ ಮೊಬೈಲ್ ಸೇಲ್ಸ್ ಮಾಲೀಕರು ವ್ಯಾಪಾರವಿಲ್ಲದೆ ಆರ್ಥಿಕ ಸಂಕಷ್ಟವನ್ನು ಅನುಭವಿಸಿದ್ದಾರೆ. ಕುಟುಂಬದ ನಿರ್ವಹಣೆ ಮಾಡಲು ಆ ಸಂದರ್ಭದಲ್ಲಿ ಕಷ್ಟವಾಯಿತು. ಅಂದೆ ನಾವು ಒಂದು ತೀರ್ಮಾನಕ್ಕೆ ಬರಬೇಕಾಯಿತು ನಮ್ಮೆಲ್ಲಾ ಮಾರಾಟಗಾರರು ಸೇರಿಕೊಂಡು ಒಂದು ಸಂಘವನ್ನ ರಚನೆ ಮಾಡಿದರೆ ನಮ್ಮ ಮೊಬೈಲ್ ಮಾರಾಟಗಾರರಿಗೆ ಸಹಾಯ ಮಾಡಲು ಸಾಧ್ಯವಾಗುತ್ತದೆ. ನಮ್ಮ ಮೊಬೈಲ್ ಸೇಲ್ಸ್ ಮಾಲೀಕರು ಅನಾರೋಗ್ಯದಿಂದ ಬಳಲುತ್ತಿರುವ ಸಂದರ್ಭದಲ್ಲಿ ಅವರಿಗೆ ವೈದ್ಯಕೀಯ ಸೌಲಭ್ಯ ಕೊಡಿಸಲು ಸಹಾಯವಾಗುತ್ತದೆ .ಒಟ್ಟಾರೆಯಾಗಿ ನಮ್ಮ ಮೊಬೈಲ್ ಮಾರಾಟಗಾರರ ಹಿತವನ್ನ ಕಾಪಾಡಲು ಏನೆಲ್ಲ ಮಾಡಲು ಸಾಧ್ಯವೋ ಅದೆಲ್ಲವನ್ನ ಪ್ರಾಮಾಣಿಕವಾಗಿ ಮಾಡುತ್ತೇನೆ ಎಂಬ ಭರವಸೆಯನ್ನ ನೂತನ ಅಧ್ಯಕ್ಷರು ನೀಡಿದರು. ಅಸೋಸಿಯೇಷನ್ ಸ್ಥಾಪನೆ ಹಾಗೂ ಅಧ್ಯಕ್ಷರ ಆಯ್ಕೆಯ ಸಂದರ್ಭದಲ್ಲಿ
ಉಪಾಧ್ಯಕ್ಷರು ಅನಿಲ್ ಸಹನಾ ಎಲೆಕ್ಟ್ರಾನಿಕ್,ಪ್ರಧಾನ ಕಾರ್ಯದರ್ಶಿ ರೋಷನ್ ಓಷನ್ ಕಮ್ಯುನಿಕೇಶನ್ ,ಧನಂಜಯ್ ಸಂಗಮ್ ಮೊಬೈಲ್ ,ಗೌರವ ಅಧ್ಯಕ್ಷರು ವಿಲಾಸ್ ಲದ್ವ,ಕ್ಯಾಶರ್ ಅವಿನಾಶ್ ಎಚ್.ಎಮ್, ಇರ್ಫಾನ್ ಡಿಪಿ ಮೊಬೈಲ್,
ಡೈರೆಕ್ಟರ್ಸ್....
ಪ್ರವೀಣ್ ಎ ಮೊಯಿತೆ,ಪ್ರಮೋದ್ ಎ ಮೋಹಿತೆ,ಶಮಿ ಮೊಬೈಲ್ ಪಾಯಿಂಟ್,ಸನ ಸಿಟಿ ಮೊಬೈಲ್,ಅಶೋಕ್ ಮೊಬೈಲ್ ಮನೆ,ಗುರು ರೇಣುಕಾ ಕಮ್ಯುನಿಕೇಷನ,ಅಭಿ ಟೆಲಿಕಾಂ, ವಿಕಾಸ್,ಬಸಣ್ಣ ಪ್ರಗತಿ ಮೊಬೈಲ್,ಕೆ ಕೆ ಮೊಬೈಲ್,ಆರ್ ಕೆ ಮೊಬೈಲ್ಸ್ , ಫ್ರೆಂಡ್ಸ್ ಮೊಬೈಲ್ಸ್, ಶಾಮ್ ವೊಡಾಫೋನ್,ದುರ್ಗಾಭವಾನಿ ಮೊಬೈಲ್ಸ್,ಅಲ್ಪ ಮೊಬೈಲ್ಸ್,ಓಂಕಾರ್ ಮೊಬೈಲ್ಸ್ ಉಪಸ್ಥಿತರಿದ್ದರು .
0 Comments