ಮಂದಾರ ನ್ಯೂಸ್, ಹರಿಹರ:ಪೊಲೀಸ್ ಅಧೀಕ್ಷಕರವರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ಮುಂಬರಲಿರುವ ಗಣೇಶ ಹಬ್ಬ ಹಾಗು ಈದ್ ಮಿಲಾದ್ ಹಬ್ಬದ ಪ್ರಯುಕ್ತ ದಾವಣಗೆರೆ ಗ್ರಾ. ಪೊಲೀಸ್ ಉಪವಿಭಾಗದ ವತಿಯಿಂದ ಹರಿಹರದಲ್ಲಿ ಹಮ್ಮಿಕೊಂಡಿದ್ದ ನಾಗರೀಕ ಸೌಹಾರ್ಧತೆ ಸಭೆಯಲ್ಲಿ ಭಾಗವಹಿಸಿದರು, ಸಭೆಯಲ್ಲಿ ಗಣೇಶ ಹಬ್ಬ ಹಾಗು ಈದ್ ಮಿಲಾದ್ ಹಬ್ಬವನ್ನು ಎಲ್ಲಾ ನಾಗರಿಕರು ಸೌಹಾರ್ಧಯುತವಾಗಿ ಆಚರಿಸಲು ತಿಳಿಸಲಾಯಿತು. ಹಾಗೂ ವಿವಿಧ ಕೋಮಿನ ಮುಖಂಡರುಗಳು ಗಣೇಶ ಹಬ್ಬ ಹಾಗು ಈದ್ ಮಿಲಾದ್ ಹಬ್ಬದ ಆಚರಣೆಯ ಬಗ್ಗೆ ತಮ್ಮ ತಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ನೀಡಿದರು.
ಸಭೆಯಲ್ಲಿ ಶ್ರೀ ಆರ್ ಬಿ ಬಸರಗಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರವರು, ಶ್ರೀ ಬಸವರಾಜ್ ಬಿ ಎಸ್,, ಡಿವೈಎಸ್ಪಿ ದಾವಣಗೆರೆ ಗ್ರಾ. ಉಪವಿಬಾಗ ಹಾಗೂ ದಾವಣಗೆರೆ ಗ್ರಾ. ಉಪವಿಭಾಗದ ಪೊಲೀಸ್ ಅಧಿಕಾರಿಗಳು, ವಿವಿಧ ಕೋಮಿನ ಧಾರ್ಮಿಕ ಮುಖಂಡರುಗಳು ಹಾಗೂ ನಾಗರೀಕರು ಉಪಸ್ಥಿತರಿದ್ದರು
112davanagere DIPR Davanagere Karnataka State Police
0 Comments