ಮಂದಾರ ನ್ಯೂಸ್, ಹರಿಹರ:ಇಂದು ಬೆಂಗಳೂರು ವಿಧಾನಸೌದದಲ್ಲಿ ಕರ್ನಾಟಕ ಸರ್ಕಾರ ಗೃಹ ಸಚಿವರಾದ ಜಿ ಪರಮೇಶ್ವರ್* ಅವರ ಕಚೇರಿಗೆ ಭೇಟಿ ನೀಡಿ ಹರಿಹರ ನಗರದಲ್ಲಿ ಇತ್ತೀಚೆಗೆ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು ಇದರಿಂದಾಗಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ, ಹೀಗಾಗಿ ಹರಿಹರ ನಗರಕ್ಕೆ ನೂತನ ಸಂಚಾರ ಪೊಲೀಸ್ ಠಾಣೆ ಮಂಜೂರು ಮಾಡಬೇಕೆಂದು ಸಾರ್ವಜನಿಕರ ಪರವಾಗಿ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಗೃಹ ಸಚಿವರು ಮುಂದಿನ ವರ್ಷದ ಬಜೆಟ್ ನಲ್ಲಿ ಸೇರಿಸಿ ನೂತನ ಠಾಣೆ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ನಗರಕ್ಕೆ ಸಂಚಾರಿ ಪೊಲೀಸ್ ಠಾಣೆಯ ಅವಶ್ಯಕತೆ ಇದೆ ಎಂದು ಆಗ್ರಹಿಸಿ ಹಿಂದೆ ಹಲವು ಕನ್ನಡಪರ ಸಂಘಟನೆ ಸೇರಿದಂತೆ ಇತರ ಸಂಘಟನೆ ಕಾರ್ಯಕರ್ತರು ನಿರಂತರವಾದ ಹೋರಾಟದ ಮೂಲಕ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಹರಿಹರ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು ಸಂಚಾರಿ ದಟ್ಟಣೆ ಅಧಿಕವಾಗುತ್ತಿದೆ ಇದರಿಂದ ಅಪಘಾತಗಳ ಸಂಖ್ಯೆಯು ಏರುತಿದೆ ಜೊತೆ ಜೊತೆಗೆ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಈಗಿರುವ ನಗರ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಗಳ ಕೊರತೆಯು ಹೆಚ್ಚಾಗಿದ್ದು ಎರಡು ಕೆಲಸವನ್ನ ಒಂದೇ ಠಾಣೆಯ ಸಿಬ್ಬಂದಿಗಳು ಒತ್ತಡದಲ್ಲಿ ನಿರ್ವಹಿಸಬೇಕಾಗಿದೆ.
ಇಂದು ನಂದಿಗಾವಿ ಶ್ರೀನಿವಾಸ್ ರವರು ಗೃಹ ಸಚಿವರಲ್ಲಿ ಮನವಿ ಮಾಡಿಕೊಂಡ ಪರಿಣಾಮ ಮುಂದಿನ ದಿನದಲ್ಲಿ ಹರಿಹರ ನಗರಕ್ಕೆ ನೂತನ ಸಂಚಾರಿ ಪೊಲೀಸ್ ಠಾಣೆಯ ಭಾಗ್ಯ ಒದಗಿ ಬರಬಹುದು ಎಂಬ ಇಚ್ಛೆಯನ್ನ ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.
0 Comments