ಕಾವೇರಿ ಹಾಗೂ ಭದ್ರ ನೀರಿಗೆ ಆಗ್ರಹಿಸಿ ನಾಳೆ ಹರಿಹರ ಬಂದ್: ಪ್ರೀತಂ ಬಾಬು.


ಮಂದಾರ ನ್ಯೂಸ್ ,ಹರಿಹರ: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ಸ್ಥಗಿತಗೊಳಿಸಲು ಹಾಗೂ ಭದ್ರ ನೀರನ್ನು ದಾವಣಗೆರೆ ಜಿಲ್ಲೆ ಕಾಲುವೆಗಳಿಗೆ ಹರಿಸಲು ಆಗ್ರಹಿಸಿ ಸೆ.29 ರಂದು ಹರಿಹರ ಬಂದ್‌ಗೆ ಕರೆ ನೀಡಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ ಬಣ) ತಾಲ್ಲೂಕು ನಗರ ಘಟಕ ಅಧ್ಯಕ್ಷ ಪ್ರೀತಂ ಬಾಬು ತಿಳಿಸಿದ್ದಾರೆ.

ಈ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಂದ್ ಪ್ರತಿಭಟನೆಗೆ ಆಟೋ ಚಾಲಕರು ಮತ್ತು ಮಾಲಿಕರ ಸಂಘ, ಜಯ ಕರ್ನಾಟಕ ಸಂಘಟನೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ), ಕರವೇ (ಎಚ್.ಶಿವರಾಮೇಗೌಡ ಬಣ), ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ಧ್ವನಿ), ಹರಿಹರ ವರ್ತಕರ ಸಂಘ, ಯಶಸ್ವಿ ಕಿರಣ ಸೇವಾ ಸಂಸ್ಥೆ, ಹರಿಹರ ಹೋಟಲ್ ಮತ್ತು ಬೇಕರಿ ಮಾಲಿಕರ ಸಂಘ, ವಿಷ್ಣು ಸೇನಾ ಸಮಿತಿ, ಜಮಾಅತೆ ಇಸ್ಲಾಮಿ ಹಿಂದ್, ಜೈ ಕರುನಾಡು ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
ಅಂದು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ನಡೆಯಲಿದೆ. ವ್ಯಾಪಾರಿಗಳು, ವಾಹನ ಚಾಲಕರು, ಶಾಲಾ, ಕಾಲೇಜು, ಚಲನಚಿತ್ರ ಮಂದಿರ ಮಾಲಿಕರು ಬಂದ್ ಯಶಸ್ವಿಗೆ ಸಹಕಾರ ನೀಡಬೇಕೆಂದು ಅವರು ಕೋರಿದ್ದಾರೆ.
,,,,,,,,,,,,,,,,,,,,,,,,,,,,

Post a Comment

0 Comments