ಮಕ್ಕಳಿಗೆ ಸ್ವಾಭಿಮಾನದ ನೆಲೆಗಳನ್ನು ತಿಳಿಸಿಕೊಡಬೇಕಾಗಿದೆ : ಡಾ.ಶಶಿಕುಮಾರ ವಿ.ಮೆಹರ್ವಾಡೆ.

ಮಂದಾರ ನ್ಯೂಸ್, ದಾವಣಗೆರೆ :ಆಧುನಿಕತೆ-ಯಾಂತ್ರಿಕತೆಯ ಹಿನ್ನೆಲೆಯಲ್ಲಿ ಶಿಕ್ಷಕರು ಅತ್ಯಂತ ಸಂಕಷ್ಟದ ಪರಿಸ್ಥಿಯಲ್ಲಿದ್ದು ಅವರು ಅನಿವಾರ್ಯವಾಗಿ ಮಕ್ಕಳಿಗೆ ಸ್ವಾಭಿಮಾನದ ನೆಲೆಗಳನ್ನು ತಿಳಿಸಿಕೊಡಬೇಕಾಗಿದೆ ಎಂದು ತಪ್ಪುವನ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ನಿರ್ದೇಶಕರಾದ  ಡಾ.ಶಶಿಕುಮಾರ ವಿ.ಮೆಹರ್ವಾಡೆ ಹೇಳಿದರು.

ತಪ್ಪೋನ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ನರ್ಸಿಂಗ್ ಕಾಲೇಜ್ ದೊಡ್ಡಬಾತಿ ಇವರ ಸಂಯುಕ್ತ ಆಶ್ರಯದಲ್ಲಿ ತಪೋವನ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಲಾದ ಶಿಕ್ಷಕರ ದಿನಾಚರಣೆಯಲ್ಲಿ ಅಧ್ಯಕ್ಷತೆಯನ್ನ ವಹಿಸಿ ಮಾತನಾಡಿದರು 

  ಪ್ರಸ್ತುತ ಆಲೋಚನಾ ಕ್ರಮಗಳಲ್ಲಿ ವ್ಯತ್ಯಾಸವಿದೆ. ಆಧುನಿಕತೆ ವೇಗದಲ್ಲಿ, ಯಾಂತ್ರಿಕತೆಯ ಭರಾಟೆಯಲ್ಲಿ ವಿವೇಕ, ಪರಂಪರೆ ಮರೆ ಮಾಚುತ್ತಿರುವ ಇಂದಿನ ಕಾಲಘಟ್ಟದಲ್ಲಿ ಶಿಕ್ಷಕರಿಗೆ ಪಾಠ ಮಾಡಲು ನೂರಾರು ಸವಾಲುಗಳಿವೆ. ಇಂತಹ ಸಂಕಷ್ಟ ಸ್ಥಿತಿಯನ್ನು ಎದುರಿಸಲು ಆತ್ಮಸ್ಥೈರ್ಯ ಮತ್ತು ವಿವೇಕವನ್ನು ಶಿಕ್ಷಕರು ಸ್ಪಷ್ಟಪಡಿಸಿಕೊಳ್ಳಬೇಕಿದೆ.  ಮಕ್ಕಳಿಗೆ ಸ್ವಾಭಿಮಾನವನ್ನು ಕಲಿಸಬೇಕಿದೆ.

ಸತ್ಯದ ಆವಿಷ್ಕಾರ ಮಾಡಿಸಿಕೊಡಬೇಕಿದೆ. ಕಾರುಣ್ಯದ ತಂತುಗಳನ್ನು ಹುಡುಕಿಕೊಡಬೇಕಿದೆ. ಸಹಜತೆಯನ್ನು ರೂಪಿಸಿಕೊಡಬೇಕಿದೆ. ಹಕ್ಕಿಯ ಹಾಡು, ಧನ-ಕರುಗಳ ಸಪ್ಪಳ, ಅಪ್ಪನ ಹಾಡು, ಕೊರಳಿನ ಗಂಟೆ ಮಕ್ಕಳಿಗೆ ಕೇಳಿಸಬೇಕು. ಬರಡುತನ, ಕ್ರೌರ್ಯ, ಹಿಂಸೆ, ದುಷ್ಟತನದಿಂದ ದೂರ ತರಬೇಕಿದೆ.

ಮಾನವೀಯತೆಯ ಕಥೆಗಳನ್ನು ಕಟ್ಟಿಕೊಡಬೇಕಾದ ಅನಿವಾರ್ಯತೆ ಇದ್ದು, ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಬೇಕು. ಅಕ್ಷರ ಕಲಿತು ವೀರರಾಗಬೇಕು, ಜಾಣನಾಗಬೇಕು. ಪುಣ್ಯವಂತರಾಗಬೇಕು. ಅಕ್ಷರ ಅಹಂಕಾರ ನೀಡಬಾರದು. ಅಕ್ಷರ ವಿವೇಕ, ವಿಜ್ಞಾನ,ವೈಶಿಷ್ಟ್ಯ, ಕಾರುಣ್ಯವನ್ನು ನೀಡಬೇಕು.

ಬಹುತ್ವದ ಗುಣ ಹೊಂದಿರುವ ನಮ್ಮ ದೇಶದಲ್ಲಿ ನಮ್ಮ ಪರಂಪರೆ, ಸಂಸ್ಕøತಿ ಮತ್ತು ನೆಲದ ಗುಣವನ್ನು ಮಕ್ಕಳಲ್ಲಿ ಬೆಳೆಸಬೇಕಿದೆ ಎಂದರು.

ಶಿಕ್ಷಕರು ಮತ್ತು ಕಾಲೇಜಿನ ಪ್ರಾಂಶುಪಾಲರು ಶಿಕ್ಷಕ ದಿನಾಚರಣೆಯ ಮಹತ್ವವನ್ನು ಮತ್ತು ಶಿಕ್ಷಕರ ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ನಿಭಾಯಿಸಿದಾಗ ಮಾತ್ರ ನೀವು ಮಕ್ಕಳಿಗೆ ನೀಡಿದ ಶಿಕ್ಷಣಕ್ಕೆ ಒಂದು ಮಹತ್ವ ಬರಲು ಸಾಧ್ಯವಾಗುತ್ತದೆ ಎಂದು ತಪವನ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಡಾ. ಶಶಿಕುಮಾರ್ ವಿ.ಮೆಹಾರ್ವಾಡೆ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ  ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದ ಸಂದರ್ಭದಲ್ಲಿ ತಪವನ ವಿದ್ಯಾಸಂಸ್ಥೆಯ ಎಲ್ಲಾ ಶಿಕ್ಷಕ ವೃಂದದವರು ಹಾಗೂ ಸಿಬ್ಬಂದಿ ವರ್ಗದವರು ಮತ್ತು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Post a Comment

0 Comments