ಅನುಮತಿ ಪಡೆದ ತೂಕಕ್ಕಿಂತ ಅತ್ಯಧಿಕ ಮರಳು ತುಂಬಿದ ಲಾರಿಗಳನ್ನು ವಶಕ್ಕೆ ಪಡೆದ ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆ.!

ಮಂದಾರ ನ್ಯೂಸ್, ಹರಿಹರ.ದಿನಾಂಕ: 08-09-2023 ರಂದು ರಾಣೆಬೆನ್ನೂರು ತಾ|| ನಾಗೇನಹಳ್ಳಿ & ಮುದೇನೂರು ಮರಳು ಪಾಯಿಂಟ್ ನಿಂದ ಪಾಸ್ ಪಡೆದು ಬರುವ ಲಾರಿಗಳಲ್ಲಿ ಮರಳನ್ನು ಅನುಮತಿ ಪಡೆದ ತೂಕಕ್ಕಿಂತ ಹೆಚ್ಚಿನ ತೂಕದ ಮರಳನ್ನು ಹಾಕಿಕೊಂಡು ಬರುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹರಿಹರ ಪೊಲೀಸರು ಸದರಿ ಲಾರಿಗಳನ್ನು ತಡೆದು ಪರಿಶೀಲಿಸಿದ್ದು, ಅನುಮತಿ ಪಡೆದಿದ್ದಕ್ಕಿಂತ ಹೆಚ್ಚು ಮರಳನ್ನು ತುಂಬಿಕೊಂಡು ಸಾಗಟ ಮಾಡುತ್ತಿರುವುದು ಕಂಡು ಬಂದಿದ್ದು, ಈ ವಿಷಯನ್ನು ದಾವಣಗೆರೆ ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ  ಹಿರಿಯ ಗಣಿ & ಭೂ ವಿಜ್ಞಾನ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಸದರಿ ವಿಷಯಕ್ಕೆ ಸಂಬಂಧಿಸಿದಂತೆ  ಅನುಮತಿ ಪಡೆದಿದ್ದಕ್ಕಿಂತ ಹೆಚ್ಚು ಮರಳನ್ನು 02 ಲಾರಿಗಳಲ್ಲಿ ತುಂಬಿಕೊಂಡು ಸಾಗಟ ಮಾಡುತ್ತಿರುವುದು ಖಚಿತವಾಗಿದ್ದು, ಹಿರಿಯ ಗಣಿ & ಭೂ ವಿಜ್ಞಾನ ಅಧಿಕಾರಿಗಳು ಒಂದು ಲಾರಿಗೆ  21560/- ರೂಗಳು ಹಾಗೂ ಮತ್ತೊಂದು ಲಾರಿಗೆ  24640/- ರೂಗಳ ದಂಡ ವಿಧಿಸಿರುತ್ತಾರೆ.
 
ಎಲ್ಲಾ ಮರಳು ಸಾಗಟ ಮಾಡುವವರು ಅನುಮತಿ ಪಡೆದಿದ್ದಕ್ಕಿಂತ ಹೆಚ್ಚು ಮರಳನ್ನು ತುಂಬಿಕೊಂಡು ಸಾಗಟ ಮಾಡುತ್ತಿರುವುದು ಕಂಡು ಬಂದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ ಐಪಿಎಸ್ ರವರು ತಿಳಿಸಿರುತ್ತಾರೆ.

ಮಾನ್ಯ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿಗಳೇ ಲಾರಿಗಳಲ್ಲಿ ಅನುಮತಿಗಿಂತ ಹೆಚ್ಚಿನ ಮರಳು ಸಾಗಾಣಿಕೆ ಆಗುತ್ತಿದೆ . ಅಂತಹ ಲಾರಿಗಳನ್ನು ಪತ್ತೆ ಹಚ್ಚಿ ದಂಡ ವಿಧಿಸಿದ್ದು ಸ್ವಾಗತಾರ್ಹ. ಅದೇ ರೀತಿ ನಿಮ್ಮ ಪೊಲೀಸ್ ಇಲಾಖೆಯವರು ಪಾಸ್ ಗಳನ್ಏನು ಕೆ ಸರಿಯಾಗಿ ಪರಿಶೀಲನೆ ಮಾಡುತ್ತಿಲ್ಲ? ಬಹುತೇಕ ಮರುಳಿನ ಲಾರಿ ಅವರು ಒಂದೇ ಪಾಸಿನಲ್ಲಿ ಎರಡಕ್ಕಿಂತ ಹೆಚ್ಚು ಅತ್ಯಧಿಕ ತುಂಬಿದ ಮರಳನ್ನ ಸಾಗಾಣಿಕೆ ಮಾಡುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರ ವಲಯದಿಂದ ಕೇಳಿ ಬರುತ್ತಿದೆ. ಒಂದೇ ಪಾಸನ್ನು ಪಡೆದು ಒಂದಕ್ಕಿಂತ ಹೆಚ್ಚು ಅಧಿಕ ಮರಳು ಸಾಗಾಣಿಕೆಯಿಂದ ಸರ್ಕಾರದ ಆರ್ಥಿಕ ಬೊಕ್ಕ ಶಕ್ತಿ ನಷ್ಟವಾಗುತ್ತಿದೆ ಇದು ಪೊಲೀಸ್ ಇಲಾಖೆ ಮತ್ತು ಭೂ ಮತ್ತು ಗಣಿ ಹಾಗೂ ಸಾರಿಗೆ ಇಲಾಖೆಯ ಗಮನಕ್ಕೆ ಇಲ್ಲವೇ? ಎಂಬ ಮಾತನ್ನು ಸಹ ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ.

ನೂತನ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿಗಳು ಪಾಸುಗಳ ವಿತರಣೆ ಹಾಗೂ ಲಾರಿಯಲ್ಲಿ ಸಾಗಾಣಿಕೆ ಆಗುತ್ತಿರುವ ಮರಳು ಇವುಗಳ ಮೇಲು ಒಂದು ಕಣ್ಣು ಇಡುವಂತೆ ಸಾರ್ವಜನಿಕರು ನಿಮ್ಮಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಹಾವೇರಿ ಜಿಲ್ಲಾ ಲೋಕಾಯುಕ್ತರೆ ರಾಣೇಬೆನ್ನೂರು ತಾಲೂಕಿನ ಪೊಲೀಸ್ ಇಲಾಖೆಯ ಕಾರ್ಯವೈಖರಿ ಸಂಬಂಧಿಸಿದಂತೆ ನಿಮ್ಮ ತನಿಖೆ ಸಾಗಬೇಕು ಅಲ್ಲವೇ? ಅತ್ಯಧಿಕ ಮರಳು ತುಂಬಿದ ಲಾರಿಗಳು ರಾಣೇಬೆನ್ನೂರು ಮಾರ್ಗವಾಗಿ ದಾವಣಗೆರೆಗೆ ಬರುತ್ತವೆ ಅಲ್ಲವೇ? ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆಗೆ ಕಂಡುಬಂದಂತೆ ರಾಣೆಬೆನ್ನೂರು ಪೊಲೀಸ್ ಇಲಾಖೆಯವರೆಗೂ ಈ ಲೋಪಗಳು ಕಾಣಬೇಕು ಅಲ್ಲವೇ? ಇವರಿಗೆ ಮರಳು ಪಾಯಿಂಟಿನಲ್ಲಿ ನಡೆಯುತ್ತಿರುವ ಲೋಪ- ದೋಷಗಳು ಕಣ್ಣಿಗೆ ಕಾಣುತ್ತಿಲ್ಲ. ಇದರ ಬಗ್ಗೆ ಲೋಕಾಯುಕ್ತರು ಸಮಗ್ರವಾದ ತನಿಖೆ ನಡೆಸಬೇಕು. ಕಳೆದ ಒಂದು ವರ್ಷದಿಂದ ಮರಳು ಸಾಗಾಣಿಕೆ ಮತ್ತು ಮರಳು ಎತ್ತುವಿಕೆ ಹಾಗೂ ದಾಸ್ತಾನು ಮತ್ತು ಪಾಸ್ ಗಳ ವಿತರಣೆ ಅದೇ ರೀತಿ ಸಿಸಿ ಕ್ಯಾಮೆರಾಗಳ ಪರಿಶೀಲನೆ ಇವುಗಳ ಸಮಗ್ರವಾದ ಮಾಹಿತಿಗಳನ್ನು ಪಡೆದು ಪರಿಶೀಲಿಸಿದರೆ ಹಾವೇರಿ ಟಾರ್ಪೋರ್ಸ್ ಸಮಿತಿಯವರು ಯಾವ ರೀತಿಯಲ್ಲಿ ಮರಳು ನೀತಿಯನ್ನು ಉಲ್ಲಂಘಿಸಿದ್ದಾರೆ ಅದರಿಂದ ಸರ್ಕಾರದ ಆರ್ಥಿಕ ಬೊಕ್ಕಸಕ್ಕೆ ಯಾವ ಪ್ರಮಾಣದಲ್ಲಿ ನಷ್ಟವನ್ನು ಉಂಟು ಮಾಡಿದ್ದಾರೆ ಎಂಬುದನ್ನು ತನಿಖೆ ನಡೆಸಿದಾಗ ಸತ್ಯ ಹೊರಬರುತ್ತದೆ. ಸರ್ಕಾರಕ್ಕಾದ ನಷ್ಟವನ್ನು ಟಾರ್ಪೋರ್ಸ್ 
ಸಮಿತಿಯಲ್ಲಿ ಇರುವಂತ ಎಲ್ಲಾ ಇಲಾಖೆಯ ಅಧಿಕಾರಿಗಳಿಂದ ವಸೂಲಿ ಮಾಡಿ ಅವರನ್ನು ಕರ್ತವ್ಯದಿಂದ ವಜಾ ಮಾಡಿದಾಗ ಮಾತ್ರ ಈ ಎಲ್ಲ ಅಕ್ರಮಕ್ಕೆ ಬ್ರೇಕ್ ಬಿಡಲು ಸಾಧ್ಯ. ಈ ಕೆಲಸ ಆದಷ್ಟು ಬೇಗ ಆಗಬೇಕು. ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರೇನು ಬಿಟ್ಟರೆ ಏನು ಆ ರೀತಿ ಆಗಬಾರದು ಅಲ್ಲವೇ?

Post a Comment

0 Comments