ಹರಿಹರ ಗ್ರಾಮಾಂತರ ಪೊಲೀಸರ ಮಿಂಚಿನ ಕಾರ್ಯಾಚರಣೆ, ಮೋಟಾರು ಕಳ್ಳರ ಬಂಧನ.!!

 
ಮಂದಾರ ನ್ಯೂಸ್, ಹರಿಹರ: ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ವಿವಿಧ ಗ್ರಾಮಗಳಲ್ಲಿ ಹಲವು ದಿನಗಳಿಂದ 
ರೈತರ ನೀರೆತ್ತುವ ಮೋಟಾರುಗಳ ಕಳ್ಳತನವಾಗಿದ್ದು ಸದರಿ ಪ್ರಕರಣಗಳಲ್ಲಿ ಆರೋಪಿ ಮತ್ತು
ಮಾಲು ಪತ್ತೆಗಾಗಿ  ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರ್ರೀ ಆರ್.ಬಿ.ಬಸರಗಿರವರು,
ದಾವಣಗೆರೆ 
ಗ್ರಾಮಾಂತರ ಉಪವಿಭಾಗ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಬಸವರಾಜ ಬಿ.ಎಸ್ ರವರುಗಳ ಮಾರ್ಗದರ್ಶನದಲ್ಲಿ  ವೃತ್ತ ನಿರೀಕ್ಷಕರಾದ ಶ್ರೀ ಸುರೇಶ್ ಸಗರಿ ಹರಿಹರ ವೃತ್ತ ರವರ 
ನೇತೃತ್ವದಲ್ಲಿ ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ಪಿ.ಎಸ್.ಐ ರವರುಗಳಾದ ಶ್ರೀ ಅರವಿಂದ 
ಬಿ.ಎಸ್ ಮತ್ತು ಶ್ರೀ ಅಬ್ದುಲ್ ಖಾದರ ಜಿಲಾನಿ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ
ಸದರಿ ಪ್ರಕರಣಗಳಿಗೆ ಸಂಬಂಧಿಸಿದಂತೆ ದಿನಾಂಕ: 17-09-2023 ರಂದು ಮೇಲ್ಕಂಡ ಪ್ರಕರಣಕ್ಕೆ ಸಂಬಂಧಿಸಿದಂತೆ  01) ಸೈಯದ್ ಖಲಂದರ್ 24 ವರ್ಷ ಹರಿಹರ ನಗರ ಹಾಗೂ02) ಸೈಯದ್ ಅಲಿ 
@ ಸಜ್ಜು, 22 ವರ್ಷ ಹರಿಹರ ನಗರ. ದಾವಣಗೆರೆ ಜಿಲ್ಲೆ ಇವರುಗಳನ್ನು ದಸ್ತಗಿರಿ ಮಾಡಿದ್ದು, 
ಸದರಿ ಆರೋಪಿತರಿಂದ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 
- ಹರಿಹರ ಗ್ರಾಮಾಂತರ 
ಠಾಣೆಯಲಿ ಗುನ್ನೆ ನಂ:195/23, 197/23, 213/23, 221/23, 225/23, ಮಲೇಬೆನ್ನೂರು ಠಾಣೆಯಲ್ಲಿ 
ಗುನ್ನೆ ನಂ:208/23 ಮತ್ತು ದಾವಣಗೆರೆ ಗ್ರಾಮಾಂತರ ಠಾಣೆಯಲಿ ಗುನ್ನೆ ನಂ:320/23 ರಲ್ಲಿ 
ಕಲಂ 379 ಐಪಿಸಿ ರೀತ್ಯಾ ದಾಖಲಾಗಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ 14 ವಿವಿಧ
ಕಂಪನಿಗಳಿಗೆ ಸೇರಿದ ಸುಮಾರು 03 ಲಕ್ಷ ಬೆಲೆ ಬಾಳುವ ನೀರೆತ್ತುವ ಮೋಟಾರುಗಳನ್ನು
ಅಮಾನತ್ತು ಪಡಿಸಿಕೊಂಡಿರುತ್ತಾರೆ ಉಳಿದ ಆರೋಪಿತರ ಪತ್ತೆ ಕಾರ್ಯ ಮುಂದುವರಿದಿದೆ.
 
ಸದರಿ ಮೋಟಾರು ಕಳ್ಳರ ಪತ್ತೆ ಕಾರ್ಯದಲ್ಲಿ ಶ್ರೀ ಸುರೇಶ್ ಸಗರಿ ಪೊಲೀಸ್ ವೃತ್ತ ನಿರೀಕ್ಷಕರು ಹರಿಹರ ವೃತ್ತ ಇವರ ನೇತೃತ್ವದಲ್ಲಿ ಹರಿಹರ ಗ್ರಾಮಾಂತರ ಠಾಣೆಯ ಪಿಎಸ್ಐ ಶ್ರೀ 
ಅರವಿಂದ, ಬಿ.ಎಸ್ ಮತ್ತು ಶ್ರೀ  ಅಬ್ದುಲ್ ಖಾದರ ಜಿಲಾನಿ ಪಿಎಸ್ಐ, ಸಿಬ್ಬಂದಿಗಳಾದ  ಶ್ರೀ 
ತಿಪ್ಪೇಸ್ವಾಮಿ ಎಎಸ್ಐ, ಶ್ರೀ  ಮಹಮ್ಮದ್ ಇಲಿಯಾಜ್, ಶ್ರೀ  ರಮೇಶ್ ಎನ್. ಶ್ರೀ  ಬಣಕಾರ
ಶ್ರೀಧರ್, ಶ್ರೀ  ಅನಿಲ್ ಕುಮಾರ್ ನಾಯ್ಕ, ಶ್ರೀ  ಸಂತೋಷ್ ನಾಯ್ಕ, ಶ್ರೀ  ಮಹೇಂದ್ರ, ಶ್ರೀ 
ಪ್ರಸನ್ನಕಾಂತ್, ಶ್ರೀ  ರಮೇಶ್, ಶ್ರೀ  ಫೈರೋಜ್, ಶ್ರೀ  ವೆಂಕಟರಮಣ ರವರು ಪತ್ತೆ ಕಾರ್ಯದಲ್ಲಿ 
ಭಾಗವಹಿಸಿದ್ದು, ಇವರುಗಳನ್ನು ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ಮಾನ್ಯ 
ಪೊಲೀಸ್ ಅಧೀಕ್ಷಕರು, ದಾವಣಗೆರೆ ಜಿಲ್ಲೆ ರವರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.

Post a Comment

0 Comments