ಓಂ ಜುವೆಲರ್ಸ್ ನಲ್ಲಿ ಕಳ್ಳತನಕ್ಕೆ ಯತ್ನ, ಮೂರು ಜನ ಮಹಿಳೆಯರನ್ನು ವಶಕ್ಕೆ ಪಡೆದ ಪೊಲೀಸರು.!!

ಮಂದಾರ ನ್ಯೂಸ್ ,ಹರಿಹರ: ನಗರದ ಹೃದಯ ಭಾಗವಾಗಿರುವ ಶಿವಮೊಗ್ಗ ರಸ್ತೆ ಹೆಡ್ ಪೋಸ್ಟ್ ಆಫೀಸ್ ಎದುರುಗಡೆ ಇರುವ ಓಂ ಜುವೆಲರ್ಸ್ ಶಾಪ್ ನಲ್ಲಿ ಚಿನ್ನವನ್ನು ಖರೀದಿ ಮಾಡುವ ನೆಪದಲ್ಲಿ ಮೂರು ಜನ ಮಹಿಳೆಯರು ಕಳ್ಳತನಕ್ಕೆ ಯತ್ನಿಸಿದ್ದು ಕೂಡಲೇ ಎಚ್ಚೆತ್ತುಕೊಂಡ ಅಂಗಡಿಯ ಮಾಲೀಕರು ಅವರನ್ನು  ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಕೂಡಲೆ ಅಂಗಡಿಯ ಮಾಲೀಕರು ನಗರ ಪೊಲೀಸ್ ಠಾಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದು ಠಾಣಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮೂರು ಮಹಿಳೆಯರನ್ನು ತಮ್ಮ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಇವರು ಅಂಗಡಿಯ ಗ್ರಾಹಕರ ಸೋಗಿನಲ್ಲಿ ಬಂದು ಕಳ್ಳತನಕ್ಕೆ ಯತ್ನಿಸಿದ್ದರೆ? ಅಥವಾ ಇವರು ನಿಜವಾದ ಕಳ್ಳರೇ? ಅಥವಾ ಅಮಾಯಕರೇ? ಒಂದು ವೇಳೆ ಇವರು ಕಳ್ಳತನ ಯತ್ನಿಸಿದ್ದೆ ಆಗಿದ್ದರೆ ಈ ಹಿಂದೆ ಎಲ್ಲೆಲ್ಲಿ ಕಳ್ಳತನ ಮಾಡಿದ್ದಾರೆ ಎಂಬ ಸಮಗ್ರ ಮಾಹಿತಿಯನ್ನು ಪಡೆಯುವ ಉದ್ದೇಶದಿಂದ ನಗರ ಪೊಲೀಸ್ ಠಾಣೆಯಲ್ಲಿ ತೀವ್ರ ವಿಚಾರಣೆ ನಡೆಯುತ್ತಿದ್ದು. ಮುಂದಿನ ಮಾಹಿತಿ ಸ್ಥಳೀಯ ಠಾಣಾಧಿಕಾರಿಗಳು ನೀಡುವವರೆಗೂ ಕಾಯಬೇಕಾಗಿದೆ.

Post a Comment

0 Comments