ಮಂದಾರ ನ್ಯೂಸ್,ಹರಿಹರ: ಪ್ರತಿಯೊಬ್ಬ ಮಕ್ಕಳು ತನ್ನದೇ ಆದ ಪ್ರತಿಭೆಯನ್ನು ಹೊಂದಿರುತ್ತಾರೆ, ತಮ್ಮ ಮನಸ್ಸಿನಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನ ಹೊರೆ ತರಲು ಒಂದು ವೇದಿಕೆ ಅವಶ್ಯಕತೆ ಇರುತ್ತದೆ. ಅವರಲ್ಲಿ ಅಡಗಿರುವ ಭಾವನಾತ್ಮಕ ಮತ್ತು ದೈಹಿಕ ಪ್ರತಿಭೆಯನ್ನು ಹೊರಹಾಕಲು ಪ್ರತಿಭಾ ಕಾರಂಜಿ ಅಂತ ಕಾರ್ಯಕ್ರಮಗಳು ಸಹಕಾರಿಯಾಗುತ್ತಿದೆ ಎಂದು ಹರಿಹರದ ಜನಪ್ರಿಯ ಶಾಸಕರಾದ ಬಿಪಿ ಹರೀಶ್ ಅವರು ಹೇಳಿದರು.
ನಗರದ ಕಾಳಿದಾಸ ವಿದ್ಯಾ ಸಂಸ್ಥೆಯ ಸಹಯೋಗದೊಂದಿಗೆ *ಹಳ್ಳದಕೆರೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ* ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪ್ರತಿಯೊಬ್ಬರಲ್ಲು ಅಡಗಿರುವ ಪ್ರತಿಭೆಯನ್ನು ಹೊರತರಲು ಈ ತರಹದ ಪ್ರತಿಭಾ ಕಾರಂಜಿ ಕಾರ್ಯ ಕ್ರಮಗಳು ಸಹಾಯವಾಗುತ್ತದೆ .
ಮಕ್ಕಳು ಈ ವಯಸ್ಸಿನಲ್ಲಿ ತಮ್ಮ ಪ್ರತಿಭೆಯನ್ನು ಯಾವುದೇ ಸ್ಟೇಜ್ ಫಿಯರ್ ಇಲ್ಲದೆ ಅಭಿವ್ಯಕ್ತ ಪಡಿಸುವುದು ಕಲಿತರೆ ಮುಂದಿನ ಅವರ ಜೀವನದಲ್ಲಿ ಸ್ಟೇಜ್ ಫಿಯರ್ ಕಾಣಸಿಗುವುದಿಲ್ಲ.
ಪ್ರತಿಭಾ ಕಾರಂಜಿ ಕಾರ್ಯಕ್ರಮವು ಒಂದು ಉತ್ತಮ ಕಾರ್ಯವಾಗಿದ್ದು ಶಿಕ್ಷಕರು ಮಕ್ಕಳ ಪ್ರತಿಭೆಯನ್ನು ಗುರುತಿಸುವುದು ಬಹು ಮುಖ್ಯ ಕಾರ್ಯವಾಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಸ್ ರಾಮಪ್ಪನವರು , ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹನುಮಂತಪ್ಪನವರು, ಕಾಳಿದಾಸ ವಿದ್ಯಾ ಸಂಸ್ಥೆಯ ಅಧ್ಯಕ್ಷರು ,ನಿರ್ದೇಶಕರು, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಐರಣಿ ಅಣ್ಣೇಶ್, ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಶ್ರೀಮತಿ ರಜಿನಿ ಕೆ ಜಿ ಸಮೂಹ ಸಂಪನ್ಮೂಲ ವ್ಯಕ್ತಿ, ನಿಜಲಿಂಗಪ್ಪ,ಕೃಷ್ಣಮೂರ್ತಿ ಕಾಳಿದಾಸ ಪ್ರೌಢ ಮತ್ತು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಿಬ್ಬಂದಿಗಳು ,ಹಳ್ಳದ ಕೆರೆ ಹರಿಹರ ನಗರ ವ್ಯಾಪ್ತಿಯ ಎಲ್ಲ ಶಾಲೆಗಳ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
0 Comments