ಮಂದಾರ ನ್ಯೂಸ್, ಹರಿಹರ: ಒಮ್ಮೊಮ್ಮೆ ಲೋಕಾಯುಕ್ತ ದಾಳಿಗಳು ಮತ್ತೊಬ್ಬರಿಗೆ ವರದಾನವಾಗುತ್ತದೆ ಎಂಬುದಕ್ಕೆ ಹರಿಹರ ತಾಲೂಕಿನಲ್ಲಿ ಅಕ್ಷರ ದಾಸೋಹದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಮಕೃಷ್ಣಪ್ಪನವರಿಗೆ ಉದಾರಣೆಯಾಗಬಹುದು ಅಲ್ಲವೇ ?
ರಾಮಕೃಷ್ಣಪ್ಪ ನವರಿಗೆ ಈ ಲೋಕಾಯುಕ್ತ ದಾಳಿಗಳು ಒಂದು ರೀತಿಯಲ್ಲಿ ವರದಾನವಾಗುತ್ತಿದೆಯೇ? ಎಂಬ ಮಾತು ಹರಿಹರ ತಾಲೂಕಿನ ನಾಗರಿಕರಿಂದ ಕೇಳಿ ಬರುತ್ತಿದೆ.
ಹಿಂದೆ ಹರಿಹರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿಸಿ ಸಿದ್ದಪ್ಪ ಇವರ ಮೇಲೆ ಲೋಕಾಯುಕ್ತ ದಾಳಿ ಆದ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕುರ್ಚಿ ಖಾಲಿ ಇತ್ತು. ಆ ಸಂದರ್ಭದಲ್ಲಿ ಅಕ್ಷರ ದಾಸೋಹದ ರಾಮಕೃಷ್ಣಪ್ಪನವರು ಕೆಲ ದಿನಗಳ ಮಟ್ಟಿಗೆ ಪ್ರಭಾರಿ ಶಿಕ್ಷಣಾಧಿಕಾರಿಗಳಾಗಿ ಕೆಲದಿನಗಳ ವರೆಗೆ ಕರ್ತವ್ಯ ನಿರ್ವಹಿಸಿದ್ದರು.
ಕಳೆದ 15 ದಿನಗಳ ಹಿಂದೆ ಹರಿಹರ ತಾಲೂಕ್ ಪಂಚಾಯತ್ ಕಚೇರಿಯ ಮೇಲೆ ಲೋಕಾಯುಕ್ತರ ದಾಳಿ ಆಯಿತು. ಲೋಕಾಯುಕ್ತರ ದಾಳಿಯಿಂದ ಎ 1 ಆರೋಪಿಯಾಗಿ ಸಾರಥಿ ಗ್ರಾಮ ಪಂಚಾಯಿತಿಯ ರಾಘವೇಂದ್ರ ಹಾಗೂ ಎ 2 ಪೂರ್ತಿಯಾಗಿ ತಾಲೂಕ್ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರವಿ ಇವರು ಬಂಧಿಸಲ್ಪಟ್ಟರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರವಿ ಅವರು ಲೋಕಾಯುಕ್ತ ದಾಳಿಗೆ ಒಳಗಾದ ಪರಿಣಾಮ ತಾಲೂಕು ಪಂಚಾಯತ್ ಕಚೇರಿಯ ಇ.ಒ ಕುರ್ಚಿ ಖಾಲಿ ಇತ್ತು. ಈ ಕುರ್ಚಿಯ ಮೇಲೆ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ ರಾಮಕೃಷ್ಣಪ್ಪ ಅವರನ್ನು ಕೂರಿಸಿದ್ದಾರೆ.
ಕಳೆದ ಶನಿವಾರದಂದು ಅಕ್ಷರ ದಾಸೋಹದ ರಾಮಕೃಷ್ಣಪ್ಪನವರು ಹರಿಹರ ತಾಲೂಕು ಪಂಚಾಯತ್ ಪ್ರಭಾರಿ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ಅಧಿಕಾರವನ್ನು ವಹಿಸಿಕೊಂಡಿದ್ದರು. ನಿನ್ನೆ ದಿನ ತಾಲೂಕು ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳ ಸಭೆಯನ್ನು ಕರೆದು ತಮಗೆ ನೀಡಿದ ಜವಾಬ್ದಾರಿಯನ್ನ ಪರಿಚಯಿಸಿಕೊಂಡರು.
ತ್ರೇತಾಯುಗದಲ್ಲಿ ರಾಮನಾಗಿ, ದ್ವಾಪರಯುಗದಲ್ಲಿ ಕೃಷ್ಣನಾಗಿ, ಈ ಕಲಿಯುಗದಲ್ಲಿ ರಾಮಕೃಷ್ಣನಾಗಿ ಹರಿಹರ ತಾಲೂಕು ಆಡಳಿತ ಯಂತ್ರದಲ್ಲಿ ಅಕ್ಷರ ದಾಸೋಹದ ರಾಮಕೃಷ್ಣಪ್ಪನವರ ಅವತಾರಗಳನ್ನು ನೋಡುವಂತಾಗಿದೆ.
ಅಕ್ಷರ ದಾಸೋಹದ ರಾಮಕೃಷ್ಣಪ್ಪನವರಲ್ಲಿ ಇರುವಂತ ಜ್ಞಾನದ ಆಧಾರದ ಮೇಲೆ ಶಿಕ್ಷಣ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಭಾರಿ ಅಧಿಕಾರಿಗಳನ್ನಾಗಿ ಸಂಬಂಧಿಸಿದ ಇಲಾಖೆಯ ಮೇಲಧಿಕಾರಿಗಳು ನೇಮಕ ಮಾಡುತ್ತಿದ್ದಾರೆ. ಮುಂದೊಂದು ದಿನ ರಾಮಕೃಷ್ಣಪ್ಪನವರಿಗೆ ಈ ಇಲಾಖೆಗಳೆ ಅದೃಷ್ಟದ ಬಾಗಿಲುಗಳಾಗಬಹುದು ಎಂಬ ಮಾತು ಕೇಳಿ ಬರುತ್ತಿದೆ.
ಅಕ್ಷರ ದಾಸೋಹದ ರಾಮಕೃಷ್ಣಪ್ಪನವರು ಎಲ್ಲರನ್ನೂ ನಗುಮುಖದಿಂದಲೇ ಸ್ವಾಗತಿಸುವ ಗುಣಗಳೇ ಅವರನ್ನು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತಿದೆ ಅಲ್ಲವೇ? ಏನೇ ಹೇಳಿ ಹರಿಹರ ತಾಲೂಕ್ ಆಡಳಿತ ಯಂತ್ರದ ಮೇಲೆ ನಡೆಯುತ್ತಿರುವ ಲೋಕಾಯುಕ್ತರ ನಿರಂತರ ದಾಳಿಯ ಪರಿಣಾಮ ರಾಮಕೃಷ್ಣಪ್ಪ ನವರಿಗೆ ವಿಜಯದಶಮಿ ಹಾಗೂ ದೀಪಾವಳಿ ಹಬ್ಬದ ಡಬಲ್ ಧಮಾಕ.............
ಪ್ರಭಾರಿ ಹುದ್ದೆಗಳು ಶಾಶ್ವತ ಹುದ್ದೆಗಳಾಗಲಿ ಎಂಬುವುದು ನಮ್ಮ ಮಂದಾರ ನ್ಯೂಸ್ ಸುದ್ದಿ ವಾಹಿನಿಯ ಆಶಯವಾಗಿದೆ.
0 Comments