ಮಂದಾರ ನ್ಯೂಸ್, ಹರಿಹರ: ಹರಿಹರ ತಾಲೂಕು ಆಡಳಿತ ಯಂತ್ರದ ಮೇಲೆ ಲೋಕಾಯುಕ್ತರ ನಿರಂತರ ದಾಳಿ. ಪ್ರಮುಖ ಇಲಾಖೆಯ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದು ಒದ್ದಾಡುವಂತಹ ಪರಿಸ್ಥಿತಿ.
ಹರಿಹರ ತಾಲೂಕಿನ ಪ್ರಮುಖ ಏಳು ಇಲಾಖೆಗಳಿಂದ ಒಂಬತ್ತು ವಿಕೆಟ್ಗಳು ಈಗಾಗಲೇ ಪತನಗೊಂಡಿವೆ.
ಈ ದಿನ ಹರಿಹರ ಅಬಕಾರಿ ಇಲಾಖೆಯ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದು ತಾಲೂಕಿನ ಅಬಕಾರಿ ಇಲಾಖೆಯ ನಿರೀಕ್ಷಕರಾದ ಶ್ರೀಮತಿ ಶೀಲಾ ಸೇರಿದಂತೆ ಮೂರು ಜನರನ್ನು ಟ್ರ್ಯಾಪ್ ಮಾಡುವಲ್ಲಿ ಲೋಕಾಯುಕ್ತರು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.
ಡಿಜಿ ರಘುನಾಥ್ ಒಡೆತನದ ಹರಿಹರ ನಗರ ವಲಯದ ಅಮರಾವತಿ ಎರಡನೇ ರೈಲ್ವೆ ಗೇಟ್ ಹತ್ತಿರ ಇರುವ ಡಿಜಿಆರ್ ಅಮೋಟ್ಮೆಂಟ್ ಪಾರ್ಕ್ ಈ ಜಾಗದಲ್ಲಿರುವ ಕಟ್ಟಡದಲ್ಲಿ ಸಿ.ಎಲ್ -7 ಪಡೆಯುವುದರ ಸಲುವಾಗಿ ಅಬಕಾರಿ ಇಲಾಖೆಗೆ ಡಿಜಿ ರಘುನಾಥ್ ಅವರು ಸಲ್ಲಿಸಿರುತ್ತಾರೆ.
0 Comments