ಮಂದಾರ ನ್ಯೂಸ್ ತ್ಯಾಗರ್ತಿ : ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖಂಡರು ಮಂಗಳವಾರ ಸಂಸದ ಬಿ ವೈ ರಾಘವೇಂದ್ರ ಅವರನ್ನು ಭೇಟಿ ಮಾಡಿ ಹಿರೇಬಿಲಗುಂಜಿ ಬರೂರು ತ್ಯಾಗರ್ತಿ ಗ್ರಾ ಪಂ ವ್ಯಾಪ್ತಿಯಲ್ಲಿ ಐವತ್ತು ಕ್ಕೂ ಹೆಚ್ಚು ಹಳ್ಳಿಗಳಿಗೆ ವ್ಯಾವಹಾರಿಕವಾಗಿ ತ್ಯಾಗರ್ತಿ ಕೇಂದ್ರ ಸ್ಥಾನವಾಗಿದೆ ಸುತ್ತ ಮುತ್ತಲಿನ ಜನರಿಗೆ ಬ್ಯಾಂಕ್ ವ್ಯವಹಾರ ನಡೆಸಲು ರಾಷ್ಟ್ರೀಯ ಬ್ಯಾಂಕ್ ಅವಶ್ಯಕತೆ ಇರುವುದರಿಂದ ತ್ಯಾಗರ್ತಿ ಕೇಂದ್ರಕ್ಕೆ ರಾಷ್ಟ್ರೀಕೃತ ಬ್ಯಾಂಕ್ ಮಂಜೂರು ಮಾಡಬೇಕು ಎಂದು ಮನವಿ ಮಾಡಿದ್ದಾರೆ
ಹಾಗೂ ಈ ಭಾಗದಲ್ಲಿ ಮೊಬೈಲ್ ನೆಟ್ವರ್ಕ್ ಇಂಟರ್ನೆಟ್ ಸೌಲಭ್ಯ ಕೊರತೆ ಇರುವಲ್ಲಿ ಮೊಬೈಲ್ ಟವರ್ ಮಂಜೂರಿಗೆ ಮನವಿ ಸಲ್ಲಿಸಿದರು
ಮನವಿ ಸ್ವೀಕರಿಸಿದ ಸಂಸದ ಬಿ ವೈ ರಾಘವೇಂದ್ರ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಭಂದ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು
ಈ ಸಂದರ್ಭದಲ್ಲಿ ಪ್ರಮುಖರಾದ ಮುತ್ತು ಗೌಡ ವೀರಾಪುರ,ತ್ಯಾಗರ್ತಿ ಗ್ರಾ ಪಂ ಮಾಜಿ ಅಧ್ಯಕ್ಷ ಹಮೀದ್ ಖಾನ್, ಹಿರೇಬಿಲಗುಂಜಿ ಗ್ರಾ ಪಂ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಹೊಸಂತೆ, ಯೋಗೇಶ್ ಕುಮಾರ್ ತ್ಯಾಗರ್ತಿ ಇದ್ದರು
0 Comments