ಮಂದಾರ ನ್ಯೂಸ್ ಹರಿಹರ: ಕಳೆದ 21 ದಿನಗಳಿಂದ ನಗರದ ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಂಡ ಹಿಂದೂ ಮಹಾರಾಜ್ ಗಣಪತಿಯ ವಿಸರ್ಜನ ಕಾರ್ಯಕ್ರಮ ಇದೇ ಭಾನುವಾರ ಬೆಳಿಗ್ಗೆ 11 ಗಂಟೆಗೆ ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಬೃಹತ್ ಶೋಭ ಯಾತ್ರೆಯ ಮೂಲಕ ಅದ್ದೂರಿ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ನಡೆಯಲಿದೆ.
ಈಗಾಗಲೇ ಬೃಹತ್ ಶೋಭಾ ಯಾತ್ರೆ ಮೆರವಣಿಗೆಗಾಗಿ ಹರಿಹರ ನಗರ ಮಧುವನಗಿತ್ತಿಯಂತೆ ಸಿಂಗಾರಗೊಂಡಿದೆ. ನಗರದ ತುಂಬೆಲ್ಲಾ ಕೇಸರಿಯ ಕಲರವ.
ವರ್ಷಕ್ಕೊಮ್ಮೆ ಕೇಸರಿ ಬಣ್ಣದಿಂದ ಇಡೀ ನಗರ ಕಂಗೊಲಿಸುತ್ತಿದ್ದು ನೋಡುಗರ ಕಣ್ಮನಗಳನ್ನು ತಣಿಸುತ್ತಿದೆ. ನಾಳೆ ನಡೆಯಲಿರುವ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನೆಯ ಬೃಹತ್ ಶೋಭಾ ಯಾತ್ರೆಯ ಮೆರವಣಿಗೆಯಲ್ಲಿ ಸಹಸ್ರಾರು ಸಂಖ್ಯೆಯ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಕಳೆದ ಬಾರಿಯಂತೆ ಈ ಬಾರಿಯೂ ಸಹ ಮಹಿಳೆಯರಿಗಾಗಿ ಪ್ರತ್ಯೇಕ ಡಿಜಿಯ ವ್ಯವಸ್ಥೆಯನ್ನ ಮಾಡಲಾಗಿದೆ. ಸತತ ಮೂರು ವರ್ಷದಿಂದ ನಗರದ ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹಿಂದೂ ಮಹಾರಾಜ್ ಗಣೇಶನನ್ನು ಪ್ರತಿಷ್ಠಾಪನೆ ಮಾಡುತ್ತಿದ್ದಾರೆ. ಇದು ನಾಲ್ಕನೇ ವರ್ಷದ ಗಣೇಶನ ವಿಸರ್ಜನ ಕಾರ್ಯಕ್ರಮವಾಗಿದ್ದು ಈಗಾಗಲೇ ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನದ ಹಿಂದೂ ಮಹಾಗಣಪತಿ ಯನ್ನು ಪ್ರತಿಷ್ಠಾಪಿಸಿರುವ ಸಭಾಮಂಟಪದಲ್ಲಿ ಕಳೆದ 20 ದಿನಗಳಿಂದ ಹಲವು ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದಾರೆ.
ನಾಳೆಯ ವಿಸರ್ಜನ ಕಾರ್ಯಕ್ರಮ ಶಾಂತಿಯುತವಾಗಿ ಹಾಗೂ ಅತ್ಯಂತ ಅದ್ದೂರಿಯಾಗಿಯೂ ನಡೆಯಲಿದೆ ಎಂಬ ಭರವಸೆಯನ್ನ ಹಿಂದೂ ಮಹಾಸಭಾದ ಅಧ್ಯಕ್ಷರಾದ ಎಬಿಎಂ ವಿಜಿಯವರು ನಮ್ಮ ಮಾಧ್ಯಮ ಪ್ರತಿನಿಧಿಯೊಂದಿಗೆ ಹಂಚಿಕೊಂಡರು.
ನಾಳೆ ಗಣಪತಿ ವಿಸರ್ಜನ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತ ಕ್ರಮವಾಗಿ ಪೋಲಿಸ್ ಇಲಾಖೆ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದು ,ಈಗಾಗಲೇ ನಗರಕ್ಕೆ ಬಂದು ಹೋಗುವರ ಚಲನವಲನದ ಮೇಲೆ ಹದ್ದಿನ ಕಣ್ಣನ್ನು ಇಟ್ಟಿದ್ದಾರೆ. ಪೋಲಿಸ್ ಇಲಾಖೆ ಈಗಾಗಲೇ ಒಂದು ಸುತ್ತಿನ ಶಾಂತಿ ಸಭೆಯನ್ನು ನಡೆಸಿದೆ.
ಒಟ್ಟಾರೆಯಾಗಿ ನಾಳೆ ಹಿಂದೂ ಮಹಾರಾಜ್ ಗಣೇಶನ ವಿಸರ್ಜನೆ ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ನಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.
0 Comments