ಸರ್ಕಾರದ ಆದೇಶ ಸಂಖ್ಯೆ ಸಕಇ/144/ಸಪ್ರಕಾ/2023 ದಿನಾಂಕ 05/7/2023ರ ಹಾಗೂ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆಯ ಪತ್ರ ಸಂಖ್ಯೆ ಸಿಆಸುಇ 14 ಸೇನೌವ 2023 12.09.2023ರ ಸುತ್ತೋಲೆಗಳನ್ನು ಈ ಮೂಲಕ ಮತ್ತೊಮ್ಮೆ ತಾಲೂಕ್ ಪಂಚಾಯತ್ ಕಾರ್ಯ ನಿರ್ವಾಹಕರ ಅಧಿಕಾರಿಗಳ ಗಮನಕ್ಕೆ ನಮ್ಮ ಮಂದಾರ ನ್ಯೂಸ್ ಸುದ್ದಿ ವಾಹಿನಿ ಮೂಲಕ ನೆನಪಿಸುತ್ತಿದ್ದೇವೆ. ಎಲ್ಲಾ ಸುತ್ತೋಲೆಗಳು ಮತ್ತು ಅಧಿಸೂಚನೆಗಳಂತೆ ಯಾವುದೇ ಸರ್ಕಾರಿ ನೌಕರರುಗಳು ಅಥವಾ ಅಧಿಕಾರಿಗಳು ತಮ್ಮ ಶ್ರೇಣಿಗಿಂತ ಮೇಲ್ದರ್ಜೆಯ ಹುದ್ದೆಗೆ ಸ್ವಂತ ವೇತನ ಶ್ರೇಣಿಯ ಆಧಾರದ ಮೇಲೆ ನೇಮಕ ಮಾಡುವುದನ್ನು /ನಿಯೋಜಿಸುವುದನ್ನು ನಿರ್ಬಂಧಿಸಿ ಆದೇಶಿಸಲಾಗಿರುತ್ತದೆ. ಆದರೆ ತಾವು ಈ ಆದೇಶವನ್ನು ಗಮನಿಸದೇ ನಿಮ್ಮ ತಾಲೂಕು ಪಂಚಾಯತಿ ವ್ಯಾಪ್ತಿಗೆ ಸಂಬಂಧಿಸಿದ ಹಿರೇಬಿಲಮುಂಜಿ ಗ್ರಾಮ ಪಂಚಾಯತಿಗೆ ಕೆಳಹಂತದ ಕಾರ್ಯದರ್ಶಿಯನ್ನು ಅಭಿವೃದ್ಧಿ ಅಧಿಕಾರಿಯನ್ನಾಗಿ ಮೇಲಂತದ ಕುರ್ಚಿಗೆ ತಂದು ಕೂರಿಸಿದ್ದು ಎಷ್ಟರಮಟ್ಟಿಗೆ ಸರಿ.
ಸಾಗರ ತಾಲೂಕು ಹಿರೇಬಿಲಗುಂಜಿ ಗ್ರಾಮ ಪಂಚಾಯತಿಯಲ್ಲಿ ಈ ಹಿಂದೆ ವಿಮಲಾಕ್ಷಿ ಎಂಬ ಅಭಿವೃದ್ಧಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು ತಮ್ಮ ಕರ್ತವ್ಯದಲ್ಲಿ ನಿರ್ಲಕ್ಷ ತೋರುತ್ತಿರುವ ಕಾರಣ ಇವರನ್ನು ಬೇರೆ ಕಡೆ ವರ್ಗಾಯಿಸುವಂತೆ ಕೆಲ ಗ್ರಾಮ ಪಂಚಾಯತಿಯ ಚುನಾಯಿತ ಸದಸ್ಯರು ಒತ್ತಾಯಿಸಿದ ಕಾರಣ ಇವರನ್ನು ಬೇರೆ ಕಡೆಗೆ ವರ್ಗಾಯಿಸಲಾಗಿರುತ್ತದೆ.
ಅಭಿವೃದ್ಧಿ ಅಧಿಕಾರಿ ವಿಮಲಾಕ್ಷಿ ಇವರಿಂದ ತೆರುವಾದ ಜಾಗಕ್ಕೆ ಬರೂರು ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜು ಎಸ್ ಕೆ ಇವರನ್ನು ಕಳೆದ ಎರಡು ದಿನಗಳ ಹಿಂದೆ ಹಿರೇಬಿಲಗುಂಜಿ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಯಾಗಿ ಹೆಚ್ಚುವರಿ ಜವಾಬ್ದಾರಿಯನ್ನ ಮಾನ್ಯ ತಾಲೂಕು ಪಂಚಾಯತ್ ಇ.ಓ ನಾಗೇಶ್ ಬಳ್ಯಾಲ ತಮ್ಮ ಲಿಖಿತ ರೂಪದ ಆದೇಶದ ಮೂಲಕ ನಿಯೋಜನೆ ಮಾಡಿರುತ್ತಾರೆ.
ಮಾನ್ಯ ಸಾಗರ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ನಾಗೇಶ್ ಇವರು ರಾಜಕೀಯ ಒತ್ತಡದ ಕಾರಣದಿಂದಲೂ ಅಥವಾ ಇನ್ಯಾವುದೋ ಒತ್ತಡದಿಂದಲೂ ತಾವು ಬೆಳ್ಳಗೆ ಹೊರಡಿಸಿದ ಆದೇಶವನ್ನು ಹಿಂದೆ ಪಡೆದು ಮತ್ತೆ ಅದೇ ದಿನ ಮಧ್ಯಾಹ್ನ ಆನಂದಪುರ ಗ್ರಾಮ ಪಂಚಾಯತಿಯಲ್ಲಿ ದ್ವಿತೀಯ ದರ್ಜೆಯ ನೌಕರ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗ್ರೇಡ್ 2 ಶೇಖರಪ್ಪ ಜಿ.ಹೆಚ್ ಇವರನ್ನು ಹಿರೇ ಬಿಲಗುಂಜಿ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಯಾಗಿ ಮಾನ್ಯ ತಾಲೂಕು ಪಂಚಾಯತ್ ಇ ಓ ನಾಗೇಶ್ ಇವರು ತಮ್ಮ ಲಿಖಿತ ರೂಪದ ಆದೇಶದ ಮೂಲಕ ಇವರನ್ನ ನೇಮಕ ಮಾಡಿರುತ್ತಾರೆ.
ತಾಲೂಕು ಪಂಚಾಯತಿ ಇ ಓ ನಾಗೇಶ್ ರಾಜಕೀಯ ಒತ್ತಡ ಮತ್ತು ತಮ್ಮ ಅಜ್ಞಾನದ ಪರಿಮಿತಿಯಲ್ಲಿ ಒಂದೇ ದಿನ ಇಬ್ಬರನ್ನು ಒಂದೇ ಪಂಚಾಯತಿಗೆ ಅಭಿವೃದ್ಧಿ ಅಧಿಕಾರಿಗಳನ್ನಾಗಿ ನೇಮಕ ಮಾಡುವ ಮೂಲಕ ತಮ್ಮ ಜ್ಞಾನ ಸಂಪತ್ತನ್ನು ಎಷ್ಟರಮಟ್ಟಿಗೆ ಇದೆ ಎಂಬುದನ್ನು ತಾಲೂಕಿನ ಜನರಿಗೆ ತೋರಿಸಿಕೊಟ್ಟಿದ್ದಾರೆ. ಇಂತಹ ಅಧಿಕಾರಿಗಳಿಂದ ತಾಲೂಕು ಪಂಚಾಯತಿ ವ್ಯಾಪ್ತಿಗೆ ಸಂಬಂಧಿಸಿದ ಗ್ರಾಮಗಳು ಅಭಿವೃದ್ಧಿ ಹೊಂದಲು ಸಾಧ್ಯವೇ?
ಇಲಾಖೆಗಳಲ್ಲಿ ಇಷ್ಟೆಲ್ಲಾ ಸ್ಪಷ್ಟವಾದ ಆದೇಶಗಳಿದ್ದರೂ ಸಹ ತಮ್ಮ ಇಲಾಖೆಯಿಂದ ಕಳೆದ ಎರಡು ದಿನಗಳ ಹಿಂದೆ ಆನಂದಪುರ ಗ್ರಾಮ ಪಂಚಾಯತಿಯ ಕಾರ್ಯದರ್ಶಿಯನ್ನು ಹಿರೆಬಲಿಗುಂಜಿ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಯನ್ನಾಗಿ ಕೆಳ ಹಂತದ ನೌಕರರನ್ನು ನೇಮಕ ಮಾಡಿದ್ದು ,ಸರ್ಕಾರದ ಅಧಿಸೂಚನೆಗಳನ್ನು ಮತ್ತು ಕಾನೂನುಗಳನ್ನ ಸ್ಪಷ್ಟವಾಗಿ ಉಲ್ಲಂಘಿಸಿ ನೇಮಿಸುವ ಅಧಿಕಾರ ಕೊಟ್ಟಿದ್ದಾದರೂ ಯಾರು?
ಒಂದು ವೇಳೆ ಕಾರ್ಯದರ್ಶಿಯನ್ನೇ ಅಭಿವೃದ್ಧಿ ಅಧಿಕಾರಿಯನ್ನಾಗಿ ನೇಮಕ ಮಾಡುವುದಾಗಿದ್ದರೆ ಹಿರೇಬಿಲಗುಂಜಿ ಗ್ರಾಮ ಪಂಚಾಯತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾರ್ಯದರ್ಶಿಯವರಿಗೆ ಹೆಚ್ಚಿನ ಜವಾಬ್ದಾರಿ ನೀಡಬಹುದಿತ್ತು ಅಲ್ಲವೇ? ಆನಂದಪುರ ಕಾರ್ಯದರ್ಶಿಗಿಂತ ಇವರು ಎರಡು ವರ್ಷ ಸೀನಿಯರ್ ಆಗಿದ್ದರು.
ತಾವು ತಮ್ಮ ಇಲಾಖೆಯಿಂದ ಮೇಲ್ಕಾಣಿಸಿದ ಆದೇಶಗಳನ್ವಯ ನಿಯಮಬಾಹಿರವಾಗಿ ಹಿರೇಬಿಲಗುಂಜಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗೆ ಆಯ್ಕೆ ಶ್ರೇಣಿಯಲ್ಲಿ ಕೆಳಗಿನ ಸ್ಥಾನದಲ್ಲಿರುವ ಇವರಿಗಿಂತ ಮೇಲಿರುವ ಹಿರಿಯ ನೌಕರರನ್ನು ಕಡೆಗಣಿಸಿ ಸರ್ಕಾರವಾಗಲಿ ಅಥವಾ ಮೇಲಧಿಕಾರಿಗಳಾಗಲಿ ಶೇಖರಪ್ಪ ಜಿ.ಹೆಚ್ ಇವರಿಗೆ ಹಿರೇಬಿಲಗುಂಜಿ ಗ್ರಾಮ ಪಂಚಾಯತಿಯ ಜವಾಬ್ದಾರಿಯ ವಹಿಸಿಕೊಡುವುದರ ಹಿಂದೆ ಹಣದ ಪ್ರಭಾವವೇ? ಅಥವಾ ರಾಜಕೀಯ ಒತ್ತಡವೇ? ಹೊರತು ಮತ್ಯಾವುದೂ ಇಲ್ಲವೆಂದು ಸ್ಪಷ್ಟವಾಗಿ ಕಾಣುತ್ತದೆ.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳೇ ತಾವುಗಳು ಹಿರೇಬಿಲಗುಂಜಿ ಗ್ರಾಮ ಪಂಚಾಯತಿಗೆ ಈಗಾಗಲೇ ನಿಯೋಜನೆ ಮಾಡಿರುವ ಅಧಿಕಾರಿಯನ್ನು ತಕ್ಷಣವೇ ಈ ಹುದ್ದೆಯ ನಿಯೋಜನೆಯನ್ನು ರದ್ದುಗೊಳಿಸಿ ಅರ್ಹಅಧಿಕಾರಿಗಳಿಗೆ ಹುದ್ದೆ ನೀಡಬೇಕು ಎಂಬುವುದೇ ನಮ್ಮ ಮಾಧ್ಯಮದ ಆಶಯವಾಗಿದೆ. ಕೂಡಲೇ ಮಾನ್ಯ ಇ ಓ ಇವರು ತಮ್ಮ ಆದೇಶವನ್ನು ಪರಿಶೀಲಿಸಬೇಕು.
ಕರ್ನಾಟಕ ಸರ್ಕಾರದ ಸಚಿವಾಲಯ ವಿಧಾನಸೌಧ ಬೆಂಗಳೂರು ಇವರು ಇತ್ತೀಚಿಗೆ ದಿನಾಂಕ 12.09.2023 ರಂದು ಒಂದು ಸುತ್ತೋಲೆಯನ್ನು ಹೊರಡಿಸಿದ್ದು ಇದರಲ್ಲಿ ಯಾವುದೇ ಇಲಾಖೆಯಲ್ಲಾದರೂ ಕೆಳ ದರ್ಜೆಯ ಅಧಿಕಾರಿಗಳನ್ನು ಮೇಲ್ದರ್ಜೆಯ ಹುದ್ದೆಗೆ ಸ್ವಂತ ವೇತನ ಶ್ರೇಣಿಯ ಆಧಾರದ ಮೇಲೆ ನೇಮಕ ಮಾಡುವುದನ್ನು ನಿಯೋಜನೆಗೊಳಿಸುವುದನ್ನು ನಿರ್ಬಂಧಿಸಿದೆ ಆದುದರಿಂದ ಹಿರೇಬಿಲಗುಂಜಿ ಗ್ರಾಮ ಪಂಚಾಯತಿಗೆ ಸಂಬಂಧಿಸಿದಂತೆ ಸಮಗ್ರವಾಗಿ ಪರಿಶೀಲಿಸಿ ತಕ್ಷಣವೇ ಈಗ ಇವರು ಇರುವ ಹುದ್ದೆಯಿಂದ ತೆಗೆದು ಇವರ ಜಾಗಕ್ಕೆ ಅಂದರೆ ಹಿರೇಬಿಲಗುಂಜಿ ಅಭಿವೃದ್ಧಿ ಅಧಿಕಾರಿಗಳ ಕುರ್ಚಿಗೆ ಸಮರ್ಥ ಅಧಿಕಾರಿಯನ್ನ ಯಾವುದೇ ರಾಜಕೀಯ ಒತ್ತಡವಿಲ್ಲದೆ ನೇಮಕ ಮಾಡಿ.
0 Comments