ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಸಾಗರ ನಗರ ಪೊಲೀಸ್ ಠಾಣೆ ಸಂಪೂರ್ಣ ವಿಫಲ.!?


ಇತ್ತೀಚಿನ ದಿನಗಳಲ್ಲಿ ಸಾಗರ ನಗರದಲ್ಲಿ ಅಪರಾಧ ಚಟುವಟಿಕೆಗಳ ಜೊತೆಗೆ ಕಳ್ಳತನ ಪ್ರಕರಣ  ಹೆಚ್ಚುತ್ತಿದ್ದು ಕಳೆದ ಒಂದು ವಾರದಿಂದ ಸಾಗರ ನಗರದ ಹೊರ ವಲಯದ ಅಗ್ರಹಾರ ಮತ್ತು  ಬಾಪಟ್ ಕಲ್ಯಾಣ ಮಂಟಪ ಹತ್ತಿರ ಸೇರಿದಂತೆ ಇನ್ನು ಕೆಲವು ಕಡೆ ಕಳ್ಳರ ಹಾವಳಿ ಹೆಚ್ಚಾಗಿದ್ದು ಮನೆಯ ಬಾಗಿಲನ್ನು ಮುರಿದು ಅಪಾರ ಪ್ರಮಾಣದ ಬಂಗಾರ, ಬೆಳ್ಳಿ, ನಗದು ಕಳ್ಳತನ ಮಾಡುವ ಮೂಲಕ ಕಳ್ಳರು ತಮ್ಮ ಕೈಚಳಕವನ್ನು ತೋರಿಸುತ್ತಿದ್ದಾರೆ ಇದರಿಂದ ನಗರದ ನಾಗರಿಕರು ತಮ್ಮ ನೆಮ್ಮದಿ ಕಳೆದುಕೊಳ್ಳುವಂತಾಗಿದೆ.

ಈಗಾಗಲೇ ಸಾಗರ ನಗರ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ಮೇಲೆ  ಆರೋಪ ಮಾಡುತ್ತಿದ್ದಾರೆ.

ಈ ಭಾಗದಲ್ಲಿ ವಾಸ ಮಾಡುತ್ತಿರುವ ನಾಗರಿಕರು ಪೊಲೀಸ್ ಇಲಾಖೆ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಈ ಭಾಗದಲ್ಲಿ ಯಾವುದೇ ಗಸ್ತು ವಾಹನವಾಗಲಿ ಬೀಟ್ ಪೊಲೀಸ್ ಗಳಾಗಲಿ ತಿರುಗುತ್ತಿಲ್ಲ . ಇವರ ನಿರ್ಲಕ್ಷದಿಂದಲೇ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದೆ. 

ಹೊರಗಡೆಯಿಂದ ಬಂದಿರುವ ಕಳ್ಳರ ಗ್ಯಾಂಗ್ ನೋಡಲು ಅಮಾಯಕರಂತೆ ಕಂಡರು ಬಾಗಿಲು ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದು ಇದರಿಂದ ನಾಗರಿಕರು ಮನೆ ಬಿಟ್ಟು ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ

ಬೇರೆ ಬೇರೆ ಊರುಗಳಿಂದ,ರಾಜ್ಯಗಳಿಂದ ವಿವಿಧ ವ್ಯಾಪಾರ ಮತ್ತು ಕೆಲಸದ ಮೇಲೆ ಸಾಗರಕ್ಕೆ ಬಂದು ಠಿಕಾಣಿ ಹೂಡಿರುವ  ಇವರ ಮೇಲೂ ಸಾಗರ ಪೊಲೀಸರು ಕಣ್ಣಿಡುವುದು ಸೂಕ್ತವಾಗಿದೆ . ಇದರ ಜೊತೆಗೆ ಗುಪ್ತಚರ ಇಲಾಖೆಯನ್ನು ಬಳಪಡಿಸಬೇಕಾಗಿದೆ. ಅನುಮಾನಾಸ್ಪದ ಕೆರಗಾಡುವರ ಮೇಲೆ ಒಂದು ಹದ್ದಿನ ಕಣ್ಣು ಇಟ್ಟು ಸಾಧ್ಯವಾದಷ್ಟು ನಗರದ ಮತ್ತು ನಗರದ ಹೊರವಲಯದಲ್ಲಿ ನಡೆಯುತ್ತಿರುವ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಬೇಕು ಎಂಬುದು ಸಾಗರದ ನಾಗರಿಕರ ಆಶಯವಾಗಿದೆ.

ಸಾಗರ ನಗರ ಪ್ರದೇಶದಲ್ಲಿ ನಡೆಯುತ್ತಿರುವ ಅಪರಾಧ ಚಟುವಟಿಕೆಗಳನ್ನ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ಪೊಲೀಸ್ ಇಲಾಖೆ ಇನ್ನೂ ಮುಂದಾದರು ಜನಸ್ನೇಹಿ ಹಾಗೂ ಜನರಿಗೆ ಧೈರ್ಯ ತುಂಬ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ ಕಾದು ನೋಡೋಣ......

        *DRG*
*ಧರ್ಮರಾಜ್ ಜಿ* 
*ಸ್ವಾಭಿಮಾನಿ ನ್ಯೂಸ್ ಸಾಗರ*

Post a Comment

0 Comments