ಅತ್ಯಧಿಕ ಮಣ್ಣು ತುಂಬಿದ ಲಾರಿಗಳನ್ನು ಪೊಲೀಸರು ಏಕೆ ವಶಕ್ಕೆ ಪಡೆಯುತ್ತಿಲ್ಲ.?

ಮಂದಾರ ನ್ಯೂಸ್ ಹರಿಹರ : ಹರಿಹರ ತಾಲೂಕಿನಲ್ಲಿ ನಡೆಯುತ್ತಿದ್ದ ಅಕ್ರಮ ಮಣ್ಣು ಗಣಿಗಾರಿಕೆಗೆ ಈಗಾಗಲೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ. 

ಇದು ಮೇಲ್ನೋಟಕ್ಕೆ ಮಾತ್ರ ಬ್ರೇಕ್ ಹಾಕಿದಂತೆ ಕಾಣುತ್ತಿದೆ. ಒಳ ಒಳಗೆ ಸದ್ದಿಲ್ಲದೆ ಗಣಿಗಾರಿಕೆ ನಡೆಯುತ್ತಲೇ ಇದೆ....

ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅನುಮತಿ ಪಡೆದ ತೂಕಕ್ಕಿಂತ ಅತ್ಯಧಿಕವಾಗಿ ಮರಳು ತುಂಬಿದ ಲಾರಿಗಳನ್ನ ವಶಕ್ಕೆ ಪಡೆದು ದಂಡವನ್ನು ಹಾಕುತ್ತಿದ್ದಾರೆ. ಆದರೆ ಅದೇ ಮಣ್ಣು ಮತ್ತು ಎಂ ಸ್ಟ್ಯಾಂಡ್ ಲಾರಿಗಳನ್ನು ಮಾತ್ರ ವಶಕ್ಕೆ ಪಡೆಯುತ್ತಿಲ್ಲ ಮತ್ತು ದಂಡ ಹಾಕುತ್ತಿಲ್ಲ ಇದು ಏಕೆ ?ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮನೆಮಾಡಿದೆ.
ಪ್ರತಿ ದಿನ ಹರಿಹರ ತಾಲೂಕಿನ ದಟ್ಟ ವಾಹನ ಸಂಚಾರವಿರುವಂಥ ಪ್ರದೇಶದ ಮಾರ್ಗದಲ್ಲೇ ದಾವಣಗೆರೆ ಹನಗೊಡಿ ಗ್ರಾಮದ ಕೃಷಿ ಫಲವತ್ತಾದ ಮಣ್ಣನ್ನು ಬೈಪಾಸ್ ಮಾರ್ಗವಾಗಿ ಶಿವಮೊಗ್ಗ ರಸ್ತೆಯ ಮೂಲಕ ಹರಪನಹಳ್ಳಿ ಮಾರ್ಗದ ಕಡೆ ಅಕ್ರಮವಾಗಿ ಅತ್ಯಧಿಕ ಮಣ್ಣು ತುಂಬಿದ ಶಾಮನೂರು ಸುರೇಶ್ ಇವರ ಲಾರಿಗಳು ಸಾಗಾಣಿಕೆ ಆಗುತ್ತಿದೆ. 

ವಿಪರ್ಯಾಸ ಏನು ಗೊತ್ತೇ ?ಈ ಅತ್ಯಧಿಕ ಮಣ್ಣು ತುಂಬಿದ್ದ ಲಾರಿಗಳು ನಗರ ಪೊಲೀಸ್ ಠಾಣೆ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆ ಮುಂಭಾಗದಲ್ಲೇ ರಾಜಾರೋಷವಾಗಿ ಹಾಡು ಹಗಲೇ ಸಾಗಾಣಿಕೆಯಾಗುತ್ತಿದೆ ಅದರೆ ಸಂಬಂಧಿಸಿದ ಪೊಲೀಸ ಇಲಾಖೆಯವರು ತಮಗೆ ಸಂಬಂಧವೇ ಇಲ್ಲ ಎನ್ನುವಂತೆ ಮೌನಕ್ಕೆ ಜಾರಿದ್ದಾರೆ....

ಸುಪ್ರೀಂ ಕೋರ್ಟ್ ಆದೇಶವಿದೆ ಗಣಿಗಾರಿಕೆಯ ಅಕ್ರಮ ಮಣ್ಣು, ಮರಳು ಮತ್ತು ಕಲ್ಲುಗಳನ್ನ ವಾಹನ ದಟ್ಟನೆಯ ಜನವಸತಿ ಪ್ರದೇಶ ಹಾಗೂ ಶಾಲಾ ಕಾಲೇಜುಗಳು ಇರುವಂತ ಪ್ರದೇಶಗಳತ್ತ ಯಾವುದೇ ಕಾರಣಕ್ಕೂ ಅತ್ಯಧಿಕವಾಗಿ ಮಣ್ಣು, ಮರಳು ಹಾಗೂ ಕಲ್ಲು ತುಂಬಿದ ಲಾರಿಗಳು ಸಂಚರಿಸುವಂತಿಲ್ಲ ಎಂಬ ಆದೇಶವಿದೆ.ಇದು ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಗಮನಕ್ಕೂ ಇದೆ. ಆದರೆ ಅವರು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.....
ಅತ್ಯಧಿಕ ಮಣ್ಣು ತುಂಬಿದ ಸುಮಾರು 100 ಕ್ಕೂ ಹೆಚ್ಚು ಲಾರಿಗಳು ಪ್ರತಿದಿನ ಹರಿಹರದ ಜನದಟ್ಟನೆಯ ಹಾಗೂ ಶಾಲಾ ಮಕ್ಕಳು ಶಿಕ್ಷಣ ಪಡಿಯುವ ವಿದ್ಯಾಸಂಸ್ಥೆಗಳ ಮುಂಭಾಗದಲ್ಲೇ ಹಾಗೂ ಸಂಬಂಧಿಸಿದ ಪೊಲೀಸ್ ಠಾಣಾಧಿಕಾರಿಗಳ ಕಣ್ಣು ಮುಂದೆಯೇ  ರಾಜಾರೋಷವಾಗಿ ಸಂಚರಿಸುತ್ತಿವೆ, ಸಾಗಾಣಿಕೆಯಾಗುತ್ತಿದೆ ಇಂತಹ ಲಾರಿಗಳನ್ನು ವಶಕ್ಕೆ ಪಡೆದು ದಂಡ ಹಾಕುವ ವಿಚಾರದಲ್ಲಿ ಮಾತ್ರ ಪೋಲಿಸ್ ಇಲಾಖೆಯವರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇವರ ನಿರ್ಲಕ್ಷದ ಹಿಂದಿನ ಮರ್ಮವಾದರೂ ಏನು? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.....

ಕೂಡಲೇ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹರಿಹರದಲ್ಲಿ ಸಂಚರಿಸುತ್ತಿರುವ ಅತ್ಯಧಿಕ ಮಣ್ಣು ತುಂಬಿದ ಲಾರಿಗಳನ್ನು ವಶಕ್ಕೆ ಪಡೆದು ದಂಡ ವಿಧಿಸುವ ಮೂಲಕ ಕಾನೂನು ಪರಿಪಾಲನೆ ಮಾಡುವಂತೆ ಸಾರ್ವಜನಿಕರು ವಿನಂತಿ ಮಾಡಿಕೊಂಡಿದ್ದಾರೆ. ಮತ್ತೊಂದು ವಿಷಯ ಏನು ಗೊತ್ತೇ? ಈ ಅತ್ಯಧಿಕ ಮಣ್ಣು ತುಂಬಿದ ಲಾರಿಯ ಚಾಲಕರು ಹಗಲು ಹೊತ್ತಿನಲ್ಲೇ ಮಧ್ಯಪಾನ ಮಾಡಿಕೊಂಡು ಲಾರಿಗಳನ್ನ ಚಾಲನೆ ಮಾಡುತ್ತಿದ್ದಾರೆ ಎಂಬ ಆರೋಪವು ಸಾರ್ವಜನಿಕರಿಂದ ಕೇಳಿ ಬಂದಿದೆ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳುವ ಮೂಲಕ ಮಾನ್ಯ ಪೋಲಿಸ್ ವರಿಷ್ಠ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನ ನಿಭಾಯಿಸಿ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸುವಂತೆ ನಮ್ಮ ಮಾಧ್ಯಮದ ಮೂಲಕ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ.

ಈಗಾಗಲೇ ನಗರದ ಹರಪನಹಳ್ಳಿ ಸರ್ಕಲ್ ಸಿಗ್ನಲ್ ನಲ್ಲಿ ಕಳೆದ 15 ದಿನಗಳ ಹಿಂದೆ ಲಾರಿ ಮತ್ತು ಬೈಕ್ ಗಳ ನಡುವೆ ಭೀಕರ ರಸ್ತೆ ಅಪಘಾತವಾಗಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಅದೇ ರೀತಿ ತಾಲೂಕ್ ಪಂಚಾಯತ್ ಕಚೇರಿಯ ಮುಂಭಾಗದಲ್ಲೂ ರಸ್ತೆ ದಾಟುತ್ತಿದ್ದ ಪಾದಾಚಾರಿ ಒಬ್ಬರ ಮೇಲೆ ಮಣ್ಣು ತುಂಬಿದ ಲಾರಿ ಹರಿದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದೇ ರೀತಿ ಮಣ್ಣು ತುಂಬಿದ ಲಾರಿಗಳಿಂದ ನಗರದಲ್ಲಿ ಸಂಚರಿಸುವ ವಾಹನ ಸವಾರರು ಮತ್ತು ಪಾದಾಚಾರಿಗಳು ಅನಾಹುತಕ್ಕೆ ಒಳಗಾಗುತ್ತಿದ್ದಾರೆ ಮತ್ತು ಪ್ರಾಣವನ್ನ ಕಳೆದುಕೊಂಡಿದ್ದಾರೆ ಮತ್ತು ಕಳೆದುಕೊಳ್ಳುತ್ತಿದ್ದಾರೆ.

ದಾವಣಗೆರೆ ಜಿಲ್ಲಾ ಮಾನ್ಯ ಜಿಲ್ಲಾಧಿಕಾರಿಗಳು ಶಾಲಾ ಮಕ್ಕಳು ಶಿಕ್ಷಣ ಪಡೆಯುವಂಥ ವಿದ್ಯಾ ಸಂಸ್ಥೆಗಳ ಮುಂಭಾಗದಲ್ಲಿ ಅತ್ಯಧಿಕವಾಗಿ ಮಣ್ಣು ತುಂಬಿದ ಲಾರಿಗಳು ಜನ ವಸತಿ ಪ್ರದೇಶದಲ್ಲಿ ಅತಿ ವೇಗವಾಗಿ ಸಂಚರಿಸುತ್ತಿವೆ. ಕೂಡಲೇ ಇಂತಹ ವಾಹನಗಳ ಮೇಲೆ ಕ್ರಮ ಕೈಗೊಳ್ಳುವ ಮೂಲಕ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸುವಂತೆ ನಮ್ಮ ಮಾಧ್ಯಮದ ಮೂಲಕ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ.

Post a Comment

0 Comments