ಮಂದಾರ ನ್ಯೂಸ್, ಹರಿಹರ: ಹರಿಹರ ತಾಲೂಕು ದಂಡಾಧಿಕಾರಿಗಳಾಗಿ ಗುರು ಬಸವರಾಜ್ ಅವರು ಇಂದು ತಾಲೂಕ ಕಚೇರಿಯಲ್ಲಿ ಈ ಹಿಂದಿನ ದಂಡಾಧಿಕಾರಿಗಳಾದ ಪೃಥ್ವಿ ಸಾನಿಕಂ ಅವರಿಂದ ಅಧಿಕಾರವನ್ನು ಸ್ವೀಕರಿಸಿದರು.
ಕಳೆದ ನಾಲ್ಕು ತಿಂಗಳ ಹಿಂದೆ ಗುರುಬಸವರಾಜ್ ಅವರು ಹರಿಹರ ತಾಲೂಕ್ ದಂಡಾಧಿಕಾರಿಗಳಾಗಿ ಕೇವಲ ಒಂದು ದಿನ ಮಾತ್ರ ತಹಶೀಲ್ದಾರ್ ಕುರ್ಚಿಯ ಮೇಲೆ ಕುಳಿತುಕೊಂಡಿದ್ದರು ಪೃಥ್ವಿ ಸಾನಿಕಂ ಸರ್ಕಾರಿ ನೌಕರರ ನ್ಯಾಯಾಲಯದಲ್ಲಿ ತಡೆ ಆಜ್ಞೆಯನ್ನು ತರುವ ಮೂಲಕ ಮತ್ತೆ ತಾಲೂಕ್ ದಂಡಾಧಿಕಾರಿಗಳಾಗಿ ಮುಂದುವರೆದಿದ್ದರು.
ಇದೀಗ ಪೃಥ್ವಿ ಸಾನಿಕಂ ಅವರು ಬೆಳ್ತಂಗಡಿ ತಾಲೂಕಿಗೆ ವರ್ಗಾವಣೆಯಾಗಿದ್ದು ಅವರಿಂದ ತೆರವಾಗಿರುವ ಸ್ಥಾನಕ್ಕೆ ಗುರುಬಸವರಾಜ್ ಅವರು ನೇಮಕವಾಗಿದ್ದು ಇಂದು ಅಧಿಕಾರವನ್ನು ಸ್ವೀಕರಿಸಿದ್ದಾರೆ.
0 Comments